newsfirstkannada.com

ಸಚಿವ ಶಿವರಾಜ್ ತಂಗಡಗಿ ಆಪ್ತನ ವಿರುದ್ಧ ಕಿರುಕುಳ ಆರೋಪ; ಠಾಣೆಯಲ್ಲೇ ವಿಷ ಸೇವಿಸಿದ ಯುವಕ

Share :

Published August 10, 2023 at 1:07pm

    ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಘಟನೆ

    ಯುವಕ ಪ್ರಾಣಾಪಾಯದಿಂದ ಪಾರು, ಮುಂದುವರಿದ ಚಿಕಿತ್ಸೆ

    ಸಚಿವರ ಆಪ್ತನ ವಿರುದ್ಧ ಆ ಯುವಕ ಹೇಳಿದ್ದೇನು?

ಸಚಿವರ ಆಪ್ತ ವಿನಾಕಾರಣ ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪಿಸಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದಿದೆ.

ಸಚಿವ ಶಿವರಾಜ್ ತಂಗಡಗಿ ಆಪ್ತ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಅಮರೇಶ್ ಗೋನಾಳ ಕಿರುಕುಳ ಕೊಡ್ತಿದ್ದಾರೆ ಅಂತ ಆರೋಪಿಸಿ, ಸಿದ್ದು ಮಾಲಿಪಾಟೀಲ್ ಎನ್ನುವ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಕುಡಿದು ಗ್ರಾಮೀಣ ಪೊಲೀಸ್ ಠಾಣೆಗೆ ಬಂದಿದ್ದ ಯುವಕನನ್ನು ಪೊಲೀಸರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಮರೇಶ್ ಗೊನಾಳ ಅವರು ಸಚಿವ ಶಿವರಾಜ್ ತಂಗಡಗಿ ಆಪ್ತ ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿರುವ ಸಿದ್ದು ಮಾಲಿ ಪಾಟೀಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಯುವಕ, ನಾನು ಗಾಡಿಗೆ ಹೋಗುತ್ತಿದ್ದೆ. ಗಾಡಿಗೆ ಹೋಗಿ ಬಂದ ಬಳಿಕ ಮಾಲೀಕರಿಗೆ ಹಣ ಕೊಡುವುದು ಬಾಕಿ ಇತ್ತು. ಹೀಗಾಗಿ ಹಣ ಕೊಡಲು ಹೋದಾಗ, ಅಲ್ಲಿದ್ದ ಅಮರೇಶ್ ಗೋನಾಳ ನನ್ನ ಕರೆದು ಬೈದರು. ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಿ ಪೊಲೀಸರ ಮೂಲಕ ಟಾರ್ಚರ್ ಕೊಟ್ಟರು. ಹೀಗಾಗಿ ನಾನು ಆತ್ಮಹತ್ಯೆಗೆ ಯತ್ನಿಸಿದೆ ಎಂದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿವ ಶಿವರಾಜ್ ತಂಗಡಗಿ ಆಪ್ತನ ವಿರುದ್ಧ ಕಿರುಕುಳ ಆರೋಪ; ಠಾಣೆಯಲ್ಲೇ ವಿಷ ಸೇವಿಸಿದ ಯುವಕ

https://newsfirstlive.com/wp-content/uploads/2023/08/SHIVARAJ_TANGADAGI.jpg

Load More