newsfirstkannada.com

ಪಂಚಾಯತ್​ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಗ; ಅಂಥದ್ದು ಏನಾಯ್ತು..?

Share :

28-06-2023

    ಸ್ಥಳೀಯರಿಂದ ತಾಯಿ-ಮಗನ ರಕ್ಷಣೆ, ಸ್ಥಳಕ್ಕೆ ಪೊಲೀಸರು ದೌಡು

    ಪಂಚಾಯತ್ ಅಧಿಕಾರಿಗಳು ಹೀಗೆಲ್ಲಾ ಮಾಡ್ತಾರಾ..?

    ಆತ್ಮಹತ್ಯೆಗೆ ಯತ್ನಿಸಿದ ನೊಂದ ಮನಸುಗಳ ಆರೋಪ ಏನು..?

ದೊಡ್ಡಬಳ್ಳಾಪುರ: ಪಂಚಾಯತಿ ಸದಸ್ಯ ಮತ್ತು ಪಿಡಿಓ ವಿರುದ್ಧ ಕಿರುಕುಳ ಆರೋಪ ಮಾಡಿ, ಪಂಚಾಯತಿಯೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೊಡ್ಡಬಳ್ಳಾಪುರದ ಹಾದ್ರೀಪುರದಲ್ಲಿ ನಡೆದಿದೆ.

ರಾಮೇಶ್ವರ ಗ್ರಾಮದ ಸದಸ್ಯ ಶ್ರೀನಿವಾಸ್ ಮತ್ತು ಪಿಡಿಓ ಶಿವಾನಂದ್ ಮಡಿಕೇರಿ ವಿರುದ್ಧ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸಂತೋಷ್ ಮತ್ತು ನಾಗವೇಣಿ ಆತ್ಮಹತ್ಯೆಗೆ ಯತ್ನಿಸಿದವರು. ರಸ್ತೆ ಮಧ್ಯೆದಲ್ಲಿ ಶೌಚಾಲಯದ ಗುಂಡಿ ಸಂಬಂಧ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಸುಖಾ ಸುಮ್ಮನೆ ಇಲ್ಲ-ಸಲ್ಲದ ಆರೋಪ

ಜೊತೆಗೆ ಮರದ ಕೊಂಬೆ ಒಂದನ್ನು ಮುರಿದಿರುವ ಕಾರಣ ಅರಣ್ಯ ಇಲಾಖೆಗೆ ಪಿಡಿಓ ದೂರು ನೀಡಿದ್ದರಂತೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪಿಡಿಓ ಅಲ್ಲಿಗೆ ಬಾರದೇ ಸುಖಾ ಸುಮ್ಮನೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಮಾನಸಿಕವಾಗಿ ನೊಂದ ತಾಯಿ, ಮಗ ಪಂಚಾಯತ್​ಗೆ ಆಗಮಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ. ವಿಷಯ ತಿಳಿದು ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಂಚಾಯತ್​ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಗ; ಅಂಥದ್ದು ಏನಾಯ್ತು..?

https://newsfirstlive.com/wp-content/uploads/2023/06/DBL_Panchayat.jpg

Load More