/newsfirstlive-kannada/media/post_attachments/wp-content/uploads/2024/11/ALLU_ARJUN_1.jpg)
ತೆಲುಗು ಸ್ಟಾರ್ ಅಲ್ಲು ಅರ್ಜುನ್ ಇತ್ತೀಚೆಗಷ್ಟೇ ತಮ್ಮ ಪುಷ್ಪಾ ಸಿನಿಮಾಗೆ ನ್ಯಾಷನಲ್ ಅವಾರ್ಡ್​ ಪಡೆದುಕೊಂಡಿದ್ದಾರೆ. ಪುಷ್ಪಾ ಸಿನಿಮಾದ ಬಳಿಕ ಅಲ್ಲು ಅರ್ಜುನ್​ ಖ್ಯಾತಿ ಈಗ ಮತ್ತೊಂದು ಉತ್ತುಂಗಕ್ಕೆ ಹೋಗಿದೆ. ಪುಷ್ಪಾ ಸಿನಿಮಾ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ಈಗ ಮತ್ತೊಂದು ಹವಾ ಕ್ರಿಯೇಟ್ ಮಾಡಲು ಪುಷ್ಪಾ 2 ಸಿನಿಮಾ ಕೂಡ ತೆರೆಗೆ ಬರಲು ದಿನಗಣನೆ ಎಣಿಸುತ್ತಿದೆ.
ತಮ್ಮ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಅಲ್ಲು ಅರ್ಜುನ್ ಇದು ಕೇವಲ ನನಗೆ ಅವಾರ್ಡ್​ ಮಾತ್ರವಲ್ಲ ನಮ್ಮ ಟೀಮ್​ನ ಕಠಿಣ ಪರಿಶ್ರಮ, ಶ್ರದ್ಧೆ ಇಲ್ಲಿ ಕಾಣುತ್ತಿದೆ. ಪ್ರಮುಖವಾಗಿ ನಿರ್ದೇಶಕ ಸುಕುಮಾರ್ ಅವರ ಶ್ರಮ ಇದರಲ್ಲಿ ದೊಡ್ಡದಿದೆ. ಪುಷ್ಪಾ ಸಿನಿಮಾಗೂ ಮೊದಲು ನಾನು ಎಲ್ಲರ ಬಳಿ ಹೇಳುತ್ತಿದೆ, ಸುಕುಮಾರ್ ಬಳಿ ಕೂಡ ನಾನು ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಳ್ಳಬೇಕು ಎಂದು ನನ್ನ ಮನದ ಆಸೆಯನ್ನು ಹೇಳಿಕೊಂಡಿದ್ದೆ ಎಂದು ಹೇಳಿದ್ದಾರೆ. ನಾನು ಇದನ್ನು ಬೇರೆಯದ್ದೇ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಹಾಗೂ ಈ ನಟನೆಗೆ ನ್ಯಾಷನಲ್ ಅವಾರ್ಡ್ ಬರಬೇಕು ಎಂದು ಹೇಳಿದ್ದೆ ಅಂತ ಪುಷ್ಪಾ ಸಿನಿಮಾದ ಹೀರೋ ಅಲ್ಲು ಅರ್ಜುನ್ ಪುಷ್ಪಾ 2 ಸಿನಿಮಾದ ಪ್ರಮೋಷನ್ ವೇಳೆ ಹೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/pushpa13.jpg)
ಸುಕುಮಾರ್​ ನನಗೆ ಮಾತು ಕೊಟ್ಟಿದ್ದರು. ನಿನ್ನ ಆಸೆಯನ್ನು ಪೂರೈಸುವ ಹಾಗೆ ನಾನು ಮಾಡುತ್ತೇನೆ. ನಾವು ಒಂದು ಸಿನಿಮಾ ಮಾಡೋಣ ಅದನ್ನು ಕಂಡವರೆಲ್ಲಾ ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಬರಲೇಬೇಕು ಎಂದು ಮಾತನಾಡಿಕೊಳ್ಳಬೇಕು ಅಂತಹ ಒಂದು ಸಿನಿಮಾ ಮಾಡೋಣ ಎಂದು ಹೇಳಿದ್ದರು. ಕಳೆದ 69 ವರ್ಷಗಳಿಂದ ಯಾವ ತೆಲುಗು ಸಿನಿಮಾ ನಟರಿಗೂ ನ್ಯಾಷನಲ್​ ಅವಾರ್ಡ್ ಸಿಕ್ಕಿರಲಿಲ್ಲ. ಅದು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಕೊನೆಗೆ ಪುಷ್ಪಾ ಸಿನಿಮಾಗೆ ನಾನು ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದು ನನ್ನ ಬದುಕಿನಲ್ಲಿ ಎಂದೂ ಮರೆಯದ ಕ್ಷಣವಾಗಿ ಉಳಿಯಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ನಾಗ ಚೈತನ್ಯ ಭಾವಿ ಪತ್ನಿ ಮನೆಯಲ್ಲಿ ಭಾರೀ ಸಂಭ್ರಮ; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ
/newsfirstlive-kannada/media/post_attachments/wp-content/uploads/2024/11/pushpa3.jpg)
ಇನ್ನು ಇದೇ ವೇಳೆ ಹಿಂದಿ ಸಿನಿಮಾದಲ್ಲಿ ನಟನೆ ಮಾಡುವ ಕುರಿತು ಮಾತನಾಡಿದ ಅಲ್ಲು ಅರ್ಜುನ್​, ಹಿಂದಿ ಸಿನಿಮಾ ಮಾಡುವುದು ಒಂದು ದೊಡ್ಡ ಸಂಗತಿ. ನಾವು ನಮ್ಮ ಇಡೀ ಬದುಕಿನಲ್ಲಿ ಅಬ್ಬಬ್ಬಾ ಎಂದರೆ ಒಂದು ಅಥವಾ ಎರಡು ಹಿಂದಿ ಸಿನಿಮಾಗಳನ್ನು ಮಾಡಬಹುದು. ನನಗೆ ಹಿಂದಿ ಸಿನಿಮಾ ಮಾಡುವುದು ಎಂದರೆ ತುಂಬಾನೇ ದೂರದ ವಿಷಯ ಎನಿಸುತ್ತದೆ. ಆ ಒಂದು ಮನಸ್ಥಿತಿಯಲ್ಲಿ ನಾನು ಇಲ್ಲ. ಸದ್ಯ ನಾವಿಬ್ಬರು ನ್ಯಾಷನಲ್ ಅವಾರ್ಡ್​ನ್ನು ಗೆದ್ದಿದ್ದೇವೆ. ಅದೇ ಸಿನಿಮಾಗೆ ಸೂಪಹಿಟ್​ ಅಲ್ಬಮ್​ನ್ನೂ ಕೂಡ ಕೊಟ್ಟಿದ್ದೇವೆ. ಇಂತಹ ವಿಷಯಗಳು ನಮಗೆ ವಿಶೇಷ ಎನಿಸುತ್ತವೆ. ಹಿಂದಿ ಸಿನಿಮಾದಲ್ಲಿ ನಟನೆ ಮಾಡಲು ನನಗೆ ಅಷ್ಟು ಆಸಕ್ತಿ ಇಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us