newsfirstkannada.com

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇನಲ್ಲಿ ಬರೋಬ್ಬರಿ 160 ಮಂದಿ ಸಾವು; ಕಾರಣ ಬಿಚ್ಚಿಟ್ಟ ಅಲೋಕ್​​ ಕುಮಾರ್​​

Share :

30-06-2023

    ಸಾವಿನ ಹೆದ್ದಾರಿಯಾದ ಬೆಂಗಳೂರು-ಮೈಸೂರು ಹೈವೇ!

    ನೂರಾರು ಅಪಘಾತ.. 160ಕ್ಕೂ ಹೆಚ್ಚು ಮಂದಿ ಸಾವು

    18 ಅಪಘಾತ ವಲಯಗಳನ್ನ ಪರಿಶೀಲಿಸಿದ ಎಡಿಜಿಪಿ

ಮಂಡ್ಯ: ಬೆಂಗಳೂರು-ಮೈಸೂರು ನಡುವಿನ ದಶಪಥ ಹೈವೇ ಸಾವಿನ ಪಥವಾಗಿ ಬದಲಾಗಿದೆ. ನಿತ್ಯವೂ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗ್ತಾನೇ ಇವೆ. ಅದರಲ್ಲೂ ಇತ್ತೀಚೆಗೆ ಈ ಹೆದ್ದಾರಿ ಅಪಘಾತಗಳ ರಹದಾರಿ ಆಗಿ ಬದಲಾಗಿದೆ. ಅವ್ಯವಸ್ಥೆಗಳ ಆಗರವಾಗಿರೋ ಈ ಹೆದ್ದಾರಿಗೆ ಇವತ್ತು ಎಡಿಜಿಪಿ ಎಂಟ್ರಿ ಕೊಟ್ಟಿದ್ರು. ಯಮಲೋಕದ ಬಾಗಿಲಿನಂತಾಗಿರೋ ಹೈವೇಯನ್ನ ಪರಿಶೀಲಿಸಿದ್ರು.
ದಶಪಥ ಹೆದ್ದಾರಿ ಮೈಸೂರು-ಬೆಂಗಳೂರು ನಡುವೆ ನಿರ್ಮಾಣವಾಗಿರೋ ಸೂಪರ್‌ ಫಾಸ್ಟ್ ಹೈವೇ. 144 ಕಿ.ಮೀ ಉದ್ದದ ಈ ಹೆದ್ದಾರಿ ಕಳೆದ ಮಾರ್ಚ್​ 12ರಂದು ಉದ್ಘಾಟನೆಗೊಂಡಿತ್ತು. ಆದ್ರೆ, ಹೈವೇ ಉದ್ಘಾಟನೆ ಆಗಿ 3 ತಿಂಗಳೊಳಗೆ ಭಾರೀ ಅನಾಹುತಗಳೇ ನಡೆದು ಹೋಗಿವೆ. ನೂರಾರು ಅಪಘಾತ, ಅವಘಡಗಳು ಸಂಭವಿಸಿವೆ. ಈ ಹೆದ್ದಾರಿ ಅಪಘಾತಗಳಿಗೆ ರಹದಾರಿ ಆಗಿದ್ಯಾ ಎಂಬ ಪ್ರಶ್ನೆ ಉದ್ಬವಿಸಿದೆ.

ಸಾವಿನ ಹೆದ್ದಾರಿಯಾದ ಬೆಂಗಳೂರು-ಮೈಸೂರು ದಶಪಥ ಹೈವೇ!

ಬೆಂಗಳೂರು-ಮೈಸೂರು ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡುವ ನಿಟ್ಟಿ ದಶಪಥ ನಿರ್ಮಾಣ ಮಾಡಲಾಗಿತ್ತು. ಆದ್ರೀಗ ಈ ದಶಪಥ ಅಪಘಾತ ಪಥ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇದುವರೆಗೆ ಹೈವೇಯಲ್ಲಿ 160ಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಅಸುನೀಗಿದ್ದಾರೆ. ರಸ್ತೆಯಲ್ಲಿ ಉಬ್ಬು-ತಗ್ಗುಗಳು, ಸರಿಯಾಗಿ ನಾಮಫಲಕ ಅಳವಡಿಸದಿರುವುದು, ಸರ್ವಿಸ್ ರಸ್ತೆಗಳ ಅಸಮರ್ಪಕ ನಿರ್ವಹಣೆ, ಸೇರಿ ನಾನಾ ಅವ್ಯವಸ್ಥೆಗಳ ಸರಮಾಲೆಗಳೇ ನಿರ್ಮಾಣವಾಗಿವೆ. ಹೀಗಾಗಿ ಇವತ್ತು ಬೆಂಗಳೂರು-ಮೈಸೂರು ಹೆದ್ದಾರಿಗೆ ADGP ಅಲೋಕ್ ಕುಮಾರ್ ಎಂಟ್ರಿ ಕೊಟ್ಟಿದ್ರು. ಮದ್ದೂರಿನ ನಿಡಘಟ್ಟದಿಂದ ಮಂಡ್ಯವರೆಗೆ 18 ಅಪಘಾತ ವಲಯಗಳನ್ನ ಎಡಿಜಿಪಿ ಪರಿಶೀಲನೆ ನಡೆಸಿದ್ರು.

ಇದೇ ವೇಳೆ ಹೆದ್ದಾರಿಯಿಂದ ಬರುವ ಮಳೆ ನೀರು ಎಲ್ಲಾ ನನ್ನ ಗುಡಿಸಲಿಗೆ ಬರ್ತಾ ಇದೆ ಅಂತಾ ಅಲೋಕ್‌ ಕುಮಾರ್‌ ಮುಂದೆ ವೃದ್ಧೆಯೊಬ್ಬರು ಅಳಲು ತೋಡಿಕೊಂಡ ಪ್ರಸಂಗವೂ ನಡೆಯಿತು. ಅಲ್ಲದೇ ವಾಹನ ಸವಾರರು ಸೂಪರ್‌ ಫಾಸ್ಟ್‌ ಹೈವೇನಲ್ಲಿರೋ ನ್ಯೂನ್ಯತೆ ಬಗ್ಗೆ ಅಲೋಕ್​​ ಕುಮಾರ್‌ ಅವರಿಗೆ ಮನವರಿಕೆ ಮಾಡಿಕೊಟ್ರು. ಇನ್ನೂ ಹೆದ್ದಾರಿ ಪರಿಶೀಲನೆ ಬಳಿಕ ಮಾತನಾಡಿದ ಎಡಿಜಿಪಿ, ಕೆಲವು ಕಡೆ ಸರ್ವಿಸ್ ರೋಡ್‌ನಲ್ಲಿ ಫುಟ್‌ಪಾತ್ ಮಾಡಿಲ್ಲ. ಕೆಲ ಕಡೆ ಅಂಡರ್ ಪಾಸ್ ಮಾಡಿಲ್ಲ. ಇದರಿಂದ ಅಪಘಾತಗಳು ಆಗುತ್ತಿವೆ ಎಂಬ ಮಾಹಿತಿ ನೀಡಿದ್ರು.

ಬೆಂಗಳೂರು-ಮೈಸೂರು ‘ದಶಪಥ’ ಕಾಮಗಾರಿ ಅಪೂರ್ಣ

ಬೆಂಗಳೂರು ಮೈಸೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ ಅಂತಾ ಮಂಡ್ಯ ಕಾಂಗ್ರೆಸ್ ನಾಯಕರು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದಿದ್ದಾರೆ. ಇದರ ಬೆನ್ನಲ್ಲೇ ಇವತ್ತು ಮಂಡ್ಯ ಶಾಸಕರ ನಿಯೋಗ ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಿದ್ರು. ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ, ರಮೇಶ್ ಬಂಡೆಸಿದ್ದೇಗೌಡ, ಹೈವೇನಲ್ಲಿರೋ ಸಮಸ್ಯೆಗಳನ್ನ ಬಗೆಹರಿಸುವಂತೆ, ಅಲ್ಲದೇ ಮತ್ತೊಂದು ಟೋಲ್‌ನ ಸ್ಥಗಿತಗೊಳಿಸುವಂತೆ ಕೇಂದ್ರ ಹೈವೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ರು.

ಒಟ್ಟಾರೆ, ಅವ್ಯವಸ್ಥೆಗಳ ಆಗರವಾಗಿರುವ ದಶಪಥ ಹೆದ್ದಾರಿಯಲ್ಲಿ ನಾಳೆಯಿಂದ ಮತ್ತೊಂದು ಟೋಲ್​ ಶುರುವಾಗುತ್ತಿದೆ. ಇದು ದಶಪಥದಲ್ಲಿ ಪ್ರಯಾಣಿಸೋ ವಾಹನ ಸವಾರರ ಗಾಯಕ್ಕೆ ಉಪ್ಪು ಸವರಲು ಕೇಂದ್ರ ಹೈವೇ ಪ್ರಾಧಿಕಾರ ಮುಂದಾಗಿದೆ. ಹೀಗಾಗಿ ನಾಳೆ ದಶಪಥ ಹೈವೇನಲ್ಲಿ ಟೋಲ್‌ ಕಿಚ್ಚು ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೇನಲ್ಲಿ ಬರೋಬ್ಬರಿ 160 ಮಂದಿ ಸಾವು; ಕಾರಣ ಬಿಚ್ಚಿಟ್ಟ ಅಲೋಕ್​​ ಕುಮಾರ್​​

https://newsfirstlive.com/wp-content/uploads/2023/06/Alok-Kumar.jpg

Load More