ವಿವಾಹದ ಸಂತಸದ ಸಂಗತಿ ಹಂಚಿಕೊಂಡ ಅಮಲಾಪೌಲ್
ಕೊಚ್ಚಿಯ ಸ್ಟಾರ್ ಹೋಟೆಲ್ನಲ್ಲಿ ನಡೆಯಿತು ಹೆಬ್ಬಲಿ ನಟಿಯ ವಿವಾಹ
ದೈವಿಕ ಪುರುಷನನ್ನು ವರಿಸುತ್ತಿದ್ದೇನೆ ಎಂದ ಮಾಲಿವುಡ್ ಬೆಡಗಿ
ಮಾಲಿವುಡ್ ನಟಿ ಅಮಲಾ ಪೌಲ್ ವಿವಾಹವಾಗಿದ್ದಾರೆ. ಗೆಳೆಯ ಜಗತ್ ದೇಸಾಯಿಯನ್ನು ವಿವಾಹವಾಗುವ ಮೂಲಕ ತನ್ನ ವಿವಾಹದ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.
View this post on Instagram
ಅಮಲಾ ಪೌಲ್ ಕೊಚ್ಚಿಯ ಸ್ಟಾರ್ ಹೋಟೆಲ್ವೊಂದರಲ್ಲಿ ಗೆಳೆಯನನ್ನು ವರಿಸಿದ್ದಾರೆ. ಲ್ಯಾವೆಂಡರ್ ಬಣ್ಣದ ಬಟ್ಟೆ ಧರಿಸಿರುವ ಈ ಜೋಡಿ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮುದ್ದಾದ ನಟಿಯ ವಿವಾಹದ ಸುದ್ದಿ ಕೇಳಿ ಅನೇಕರು ಅಮಲಾ ಪೌಲ್ಗೆ ಶುಭಾಶಯ ತಿಳಿಸಿದ್ದಾರೆ.
View this post on Instagram
ಅಮಲಾಪೌಲ್ 2ನೇ ಬಾರಿಗೆ ವಿವಾಹವಾಗಿದ್ದಾರೆ. 2014ರಲ್ಲಿ ಸಿನಿಮಾ ನಿರ್ದೇಶಕ ಎ ಎಲ್ ವಿಜಯ್ರನ್ನು ವಿವಾಹವಾದ ಅಮಲಾ 017ರಲ್ಲಿ ಆತನಿಗೆ ವಿಚ್ಛೇದನ ನೀಡಿದರು. ಬಳಿಕ ಅಮಲಾ ಪೌಲ್ ಹೆಸರು ಸಿಂಗರ್ ಭಾವೀಂದರ್ ಜೊತೆಗೆ ಕೇಳೀಬಂದಿತ್ತು. ಇಬ್ಬರ ಫೋಟೋಶೂಟ್ ಕೂಡ ವೈರಲ್ ಆಗಿತ್ತು. ಆ ಬಳಿಕ ಅಮಲಾ ಗೆಳೆಯ ಜಗತ್ ದೇಸಾಯಿಯ ಪ್ರೀತಿಗೆ ಬಿದ್ದರು. ಇದೀಗ ಇಬ್ಬರು ವಿವಾಹ ಬಂಧನಕ್ಕೆ ಒಳಗಾಗಿ ಸಿಹಿ ಸಂಗತಿ ಹಂಚಿಕೊಂಡಿದ್ದಾರೆ.ಅಂದಹಾಗೆಯೇ ಜಗತ್ ದೇಸಾಯಿ ಗೋವಾದಲ್ಲಿ ಹೋಮ್ ಸ್ಟೇ ನಡೆಸುತ್ತಿದ್ದಾರೆ.
ಇನ್ನು ಇನ್ಸ್ಟಾದಲ್ಲಿ ಅಮಲಾ ಪೌಲ್ ‘‘ನಮ್ಮನ್ನು ಒಟ್ಟಿಗೆ ತಂದ ಪ್ರೀತಿ ಮತ್ತು ಅನುಗ್ರಹವನ್ನು ಆಚರಿಸುತ್ತಿದ್ದೇನೆ’’ ನನ್ನ ದೈವಿಕ ಪುರುಷನನ್ನು ವರಿಸುತ್ತಿದ್ದೇನೆ. ನಿಮ್ಮ ಪ್ರೀತಿ ಆಶಿರ್ವಾದವನ್ನು ಬಯಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ