newsfirstkannada.com

ಹೃದಯ, ಜೀರ್ಣಾಂಗ, ಕಣ್ಣಿಗೆ ಕುಂಬಳಕಾಯಿ ತುಂಬಾ ಉಪಕಾರಿ.. ಆದರೆ, ಇದರ ಬೀಜಗಳನ್ನು ಸೇವಿಸುವಾಗ ಹುಷಾರ್​!!

Share :

22-06-2023

    ಕುಂಬಳಕಾಯಿ ಉಪಯೋಗಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

    ಕೊಲೆಸ್ಟ್ರಾಲ್​ ತಡೆಯುವ ಶಕ್ತಿ ಈ ಕುಂಬಳಕಾಯಿಗೆ ಇದೆ.. ಹೇಗೆ ಗೊತ್ತಾ..?

    ಮಧುಮೇಹಿಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಕುಂಬಳಕಾಯಿ

ಕನ್ನಡದಲ್ಲಿ ಒಂದು ಒಗಟು ಇದೆ. ಹಗ್ಗ ಹಾಸಿದೆ, ಗೂಳಿ ಮಲಗಿದೆ ಏನು ಹೇಳಿ ಎಂದರೆ.. ನಮ್ಮ ಬಾಯಲ್ಲಿ ಪಟ್ ಅಂತ ಉತ್ತರ ಬರುವುದು ಕುಂಬಳಕಾಯಿ ಎಂದು. ಹೌದು, ಇವತ್ತಿನ ಆರೋಗ್ಯ ಬಗೆಗಿನ ಸುದ್ದಿಯಲ್ಲಿ ಕುಂಬಳಕಾಯಿಯಿಂದ ನಮಗೆಲ್ಲ ಏನೆಲ್ಲ ಪ್ರಯೋಜನ, ಇದನ್ನು ಆಹಾರದಲ್ಲಿ ಬಳಸುವುದರಿಂದ ಆರೋಗ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.

ಕುಂಬಳಕಾಯಿ ಸಾಮಾನ್ಯವಾಗಿ ಹ್ಯಾಲೋವೀನ್ ಮತ್ತು ಥ್ಯಾಂಕ್ಸ್​ಗಿವಿಂಗ್​ನಿಂದ ಕೂಡಿದ ತರಕಾರಿ. ಇದು ಹೆಚ್ಚಿನ ಪೌಷ್ಟಿಕಾಂಶ ಹೊಂದಿದ್ದು ಆರೋಗ್ಯಕ್ಕೆ ಅನೇಕ ಉಪಯುಕ್ತತೆಯನ್ನು ನೀಡುತ್ತದೆ. ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳುವುದಕ್ಕೆ ಕೆಲವು ಕಾರಣಗಳಿವೆ. ಹೀಗಾಗಿಯೇ ಪ್ರತಿ ಮನೆಯಲ್ಲೂ ಈ ಕುಂಬಕಾಯಿ ಸ್ಥಾನ ಪಡೆದಿದೆ.

  • ಕುಂಬಳಕಾಯಿಯಲ್ಲಿ ಅಧಿಕ ಮಟ್ಟದಲ್ಲಿ ವಿಟಮಿನ್ ಎ, ಇ, ಸಿ ಮತ್ತು ಕಬ್ಬಿಣದ ಅಂಶಗಳಿವೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ದೇಹದಲ್ಲಿ ಸೋಂಕುಗಳು ಹರಡುವುದನ್ನು ತಡೆಯುತ್ತದೆ.
  • ತರಕಾರಿಯ ಒಂದು ವಿಧವಾದ ಕುಂಬಳಕಾಯಿಯಲ್ಲಿ ಫೈಬರ್​ ಇರುತ್ತದೆ. ಇದರಿಂದ ನಾವು ತಿಂದಂತಹ ಆಹಾರ ಬೇಗ ಜೀರ್ಣಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯವಾಗುತ್ತದೆ.
  • ವಿಟಮಿನ್​- ಎ ಅಂಶ ಹೊಂದಿದ್ದರಿಂದ ಕಣ್ಣಿಗೆ ಹೆಚ್ಚು ಉಪಕಾರಿಯಾಗಿದೆ. ಇದನ್ನು ಆಹಾರದಲ್ಲಿ ಸೇವಿಸುವುದರಿಂದ ಕಣ್ಣಿನಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ತಡೆದು ದೃಷ್ಟಿ ಬರುವಂತೆ ಮಾಡುತ್ತದೆ.
  • ತೂಕವನ್ನು ಕಳೆದುಕೊಳ್ಳಲು ಕುಂಬಳಕಾಯಿ ಸಹಾಯ ಮಾಡುತ್ತದೆ. ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದೇ ದೇಹವನ್ನು ದಪ್ಪ ಆಗದಂತೆ ತಡೆಯುತ್ತದೆ.
  • ಕೊಲೆಸ್ಟ್ರಾಲ್​ನಿಂದ ಕೆಲವೊಮ್ಮೆ ಹೃದಯಾಘಾತ ಆಗುವ ಸಂಭವವಿರುತ್ತದೆ. ನಾವು ಆಹಾರದಲ್ಲಿ ಕುಂಬಳಕಾಯಿಯನ್ನು ತಿನ್ನುವುದರಿಂದ ಫೈಬರ್ ಅಂಶವು ಕೊಲೆಸ್ಟ್ರಾಲ್​  ಹೋಗಲಾಡಿಸಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
  • ಮಧುಮೇಹಿಗಳಿಗೆ ಉತ್ತಮ ಆಹಾರವಾಗಿರುವ ಕುಂಬಳಕಾಯಿ, ಮೇದೊಜೀರಕ ಗ್ರಂಥಿಯ ಕೋಶಗಳ ಪುನರುತ್ಪಾದನೆ ಹೆಚ್ಚಿಸುತ್ತವೆ. ಇದು ಮಧುಮೇಹಿಗಳಲ್ಲಿ ಮಾತ್ರವಲ್ಲದೆ ಸಕ್ಕರೆ ಕಾಯಿಲೆ ಬರುತ್ತಿದ್ರೆ, ಅಥವಾ ಕಾಯಿಲೆ ಹೆಚ್ಚಾಗಿದ್ದರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವ ಸಾಮರ್ಥ್ಯ ಕುಂಬಳಕಾಯಿ ಹೊಂದಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
  • ಕುಂಬಳಕಾಯಿ ಜೊತೆಗೆ ಇದರ ಬೀಜಗಳು ಕೂಡ ಆರೋಗ್ಯಕ್ಕೆ ಒಳ್ಳೆಯದು. ಈ ಬೀಜಗಳು ಅಧಿಕ ರಕ್ತದೊತ್ತಡ, ಕ್ಯಾನ್ಸರ್​ ರೋಗಗಳನ್ನು ನಿಯಂತ್ರಣ ಮಾಡುತ್ತವೆ. ದೈಹಿಕ ಸಮಸ್ಯೆ ಇರುವವರು ಬೀಜಗಳ ಸೇವನೆ ತಪ್ಪಿಸಬೇಕು. ಆದ್ರೆ ಬೀಜಗಳನ್ನು ಹೇಗೆ ಸೇವಿಸಬೇಕು ಅಂತಾ ವೈದ್ಯರ ಸಲಹೆ ಪಡೆಯಲೇಬೇಕು.
  • ಚರ್ಮ ಮತ್ತು ಕೂದಲಿಗೆ ವಿಟಮಿನ್- ಇ ಸೇವನೆ ಅತ್ಯಂತ ಅಗತ್ಯವಾಗಿದೆ. ಫೈಬರ್ ಅಂಶ ಹೊಟ್ಟೆಯ ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯಕರವಾಗಿ ಉಳಿಸುತ್ತದೆ. ಈ ಕಾರಣದಿಂದ ಮಲಬದ್ಧತೆಯ ಸಮಸ್ಯೆ ನಿವಾರಣೆಯಾಗುತ್ತದೆ.
  • ಕುಂಬಳಕಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್, ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ನಿಯಾಸಿನ್, ರಿಬೋಫ್ಲಾವಿನ್, ಸತು, ಫೋಲೇಟ್ ಇತ್ಯಾದಿ ಅಂಶಗಳು ಹೇರಳವಾಗಿವೆ.
  • ಸೌತೆಕಾಯಿಯಲ್ಲಿರುವಂತೆ ಕುಂಬಳಕಾಯಿಯಲ್ಲೂ ನೀರಿನಾಂಶ ಸಮೃದ್ಧವಾಗಿದೆ. ಶೇಕಡಾ 90 ರಷ್ಟು ನೀರು ಈ ತರಕಾರಿಯಲ್ಲಿ ಇರುತ್ತದೆ. ಹೀಗಾಗಿ ಇದನ್ನು ಸೇವನೆ ಮಾಡುವುದರಿಂದ ನೀವು ರಿಫ್ರೆಶ್ ಕೂಡ ಆಗಬಹುದು.

ಇನ್ನು ಕುಂಬಳಕಾಯಿಯಿಂದ ಭಾರತದಲ್ಲಿ ಹಲವಾರು ರುಚಿಕರವಾದ ಉಪಹಾರಗಳನ್ನು ತಯಾರಿಸಲಾಗುತ್ತದೆ. ವಾರದಲ್ಲಿ ಒಮ್ಮೆಯಾದರೂ ಈ ಪದಾರ್ಥವನ್ನು ಮನೆಯಲ್ಲಿ ಉಪಯೋಗಿಸುತ್ತಾರೆ. ದೇಶದಲ್ಲಿ ಗುದ್ದಲಿ ಪೂಜೆ, ದೃಷ್ಟಿ ತೆಗೆಯಲು, ಗೃಹ ಪ್ರವೇಶದಂತಹ ಸಮಾರಂಭಗಳಲ್ಲಿ ಕುಂಬಳಕಾಯಿಯನ್ನು ಒಡೆದು ಶುಭ ಆಗಲೆಂದು ಕೇಳಿಕೊಳ್ಳುವುದು ರೂಢಿಯಲ್ಲಿದೆ.

ವಿಶೇಷ ವರದಿ: ಭೀಮಪ್ಪ. ನ್ಯೂಸ್​ಫಸ್ಟ್​ ಡಿಜಿಟಲ್ ಡೆಸ್ಕ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯ, ಜೀರ್ಣಾಂಗ, ಕಣ್ಣಿಗೆ ಕುಂಬಳಕಾಯಿ ತುಂಬಾ ಉಪಕಾರಿ.. ಆದರೆ, ಇದರ ಬೀಜಗಳನ್ನು ಸೇವಿಸುವಾಗ ಹುಷಾರ್​!!

https://newsfirstlive.com/wp-content/uploads/2023/06/PUMPKIN_HEALTH_5.jpg

Load More