newsfirstkannada.com

ಮನೆಯಲ್ಲೇ ಕೂತು ಅಮೆಜಾನ್​ಗೆ 25 ಕೋಟಿ ಕನ್ನ ಹಾಕಿದ ಖದೀಮ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

Share :

Published August 17, 2023 at 9:01pm

    ಮನೆಯಲ್ಲೇ ಕೂತು ಕೋಟಿಗಟ್ಟಲೇ ಕನ್ನ ಹಾಕಿದ ಖದೀಮ

    ಭಾರತದಿಂದ ಅಮೆರಿಕಾದವರೆಗೂ ಇದೇ ಈತನ ಲಿಂಕ್​​..!

    ಫೋನ್​​, ಲ್ಯಾಪ್​ಟ್ಯಾಪ್​​, ಯಾವುದನ್ನೂ ಬಿಡದ ಖತರ್ನಾಕ್​

ಬೆಂಗಳೂರು: 500 ರೂಪಾಯಿ ಗರಿ ಗರಿ ನೋಟಿನ ಕಂತೆ. ತರಹೇವಾರಿ ಐಫೋನ್​ಗಳು, ಐಮ್ಯಾಕ್ ಸಿಸ್ಟಮ್, ಲ್ಯಾಪ್ ಟಾಪ್ ಎಲ್ಲಾ ಒಂದೇ ಕಡೆ ಇದೆ ಅಂದ್ರೆ ಯಾರೋ ಕೋಟ್ಯಾಧೀಶ್ವರ ಇರಬೇಕು ಅನಿಸುತ್ತೆ ಅಲ್ಲವೇ! ಈತ ಕೋಟ್ಯಾಧೀಶ್ವರನೇ ಆದ್ರೆ ವಂಚನೆ ಮಾಡಿ ಕೋಟಿ ಕೋಟಿ ಸಂಪಾದಿಸಿದ ಖತರ್ನಾಕ್​ ಕಿಲಾಡಿ.

ಸಿನಿಮಾದಲ್ಲೋ, ಯಾವುದಾದ್ರೂ ವೆಬ್​​ ಸೀರಿಸ್​ನಲ್ಲೋ ಎಲ್ಲೋ ಕೂತು ತನ್ನ ಬೆರಳ ತುದಿಯಲ್ಲಿ ಎಲ್ಲವನ್ನ ದೋಚೋ ಸುದ್ದಿ ನೋಡಿದ್ದೀರಿ. ಆದ್ರೆ, ಅಮೇರಿಕಾದಲ್ಲಿ ಕೂತ ಒಬ್ಬ ಅಮೆಜಾನ್​ ಕಂಪನಿಗೆ ಪಂಗನಾಮ ಹಾಕಿದ್ದಾನೆ. ಅದು ಒಂದು ಎರಡು ಲಕ್ಷ ಅಲ್ಲ. ಕೋಟಿಗಟ್ಟಲೇ ವಂಚನೆ ಮಾಡಿದ್ದಾನೆ.

ಹ್ಯಾಕರ್​ ಮೂಲಕ ಅಮೆಜಾನ್ ಕಂಪನಿಗೆ ಲಕ್ಷ ಲಕ್ಷ ವಂಚನೆ ಮಾಡಿದ್ದ ಓರ್ವ ಆರೋಪಿಯನ್ನ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಏಳು ಐಫೋನ್​ಗಳು, ಐಮ್ಯಾಕ್ ಸಿಸ್ಟಮ್, ಲ್ಯಾಪ್ ಟಾಪ್, 2 ಲಕ್ಷಕ್ಕೂ ಹಣ ವಶ ಪಡೆದಿದ್ದಾರೆ. ಆತನ ಅಕೌಂಟ್​​ನಲ್ಲಿದ್ದ 30 ಲಕ್ಷ ಹಣ ಕೂಡ ಸೀಜ್ ಮಾಡಿದ್ದಾರೆ. ಅಂದಹಾಗೆ ಇಲ್ಲಿ ಬಂಧಿತನಾಗಿರೋನು ಎಂ.ಎಸ್​​ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ವಿಧ್ಯಾರ್ಥಿ ಚಿರಾಗ್ ಗುಪ್ತಾ. ಈತ ಜಸ್ಟ್​ ಪಾತ್ರಧಾರಿ ಅಷ್ಟೇ, ಅಮೇರಿಕಾದಲ್ಲಿರೋನೇ ಇದ್ರ ಸೂತ್ರಧಾರಿ.

ಈ ಬಗ್ಗೆ ಮಾಹಿತಿ ಬಂದ ಕೂಡಲೇ ತನಿಖೆ ಶುರು ಮಾಡಿದ್ದ ಯಶವಂತಪುರ ಪೊಲೀಸರಿಗೆ ಇವನೇ ಇದನ್ನೆಲ್ಲಾ ಮಾಡ್ತಿದ್ದ ಅನಿಸಿತ್ತು. ಆದ್ರೆ ಇನ್ವೆಷ್ಟಿಗೇಷನ್ ಆಳಕ್ಕೆ ಹೋಗ್ತಿದ್ದಂಗೆ ಅಮೇರಿಕಾದಲ್ಲಿರೋ ಓರ್ವ ಟ್ಯಾಲೆಂಟೆಡ್ ಹ್ಯಾಕರ್ ಕೈವಾಡ ಇರೋದು ಗೊತ್ತಾಗಿದೆ.

ದುಲ್ಖರ್ ಸಲ್ಮಾನ್​ ಸಿನಿಮಾ ನೆನಪಿಸೋ ಸ್ಕ್ಯಾಮ್​​

ಇವ್ರ ಚೀಟಿಂಗ್ ಟೆಕ್ನಿಕ್ ದುಲ್ಖರ್ ಸಲ್ಮಾನ್​ ಮಲಯಾಳಂ ಸಿನಿಮಾ ನೆನಪಿಸತ್ತೆ ಅಲ್ವಾ. ಸದ್ಯ ಓರ್ವನನ್ನ ಬಂಧಿಸಿರೋ ಪೊಲೀಸರಿಗೆ ಅಮೇರಿಕಾದಲ್ಲಿರೋ ಹ್ಯಾಕರ್ ಜಾಲ ದೇಶಾದ್ಯಂತ ದೊಡ್ಡದಿದೆ ಅಂತಾ ಗೊತ್ತಾಗಿದೆ. ದೇಶಾದ್ಯಂತ 25ಕ್ಕೂ ಹೆಚ್ಚು ಮುಖ್ಯ ನಗರಗಳ ಠಾಣೆಗಳಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ. 25 ಕೋಟಿಗೂ ಅಧಿಕ ವಂಚನೆ ಮಾಡಿರೋ ಶಂಕೆ ಇದೆ. ಸದ್ಯ ಹ್ಯಾಕರ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆಯಲ್ಲೇ ಕೂತು ಅಮೆಜಾನ್​ಗೆ 25 ಕೋಟಿ ಕನ್ನ ಹಾಕಿದ ಖದೀಮ; ಸ್ಟೋರಿ ಓದಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/08/Yeshwantpur-Police-1.jpg

Load More