newsfirstkannada.com

Breaking News: ಅಮೇಜಾನ್ ಮ್ಯಾನೇಜರ್​​​​​​​ಗೆ ಗುಂಡಿಟ್ಟು ಬರ್ಬರ ಹತ್ಯೆ; ಬೆಚ್ಚಿಬಿದ್ದ ರಾಜಧಾನಿ

Share :

30-08-2023

  ಹರ್ಪ್ರೀತ್ ಗಿಲ್ ಗುಂಡೇಟಿಗೆ ಬಲಿಯಾದ ಮ್ಯಾನೇಜರ್

  ಗಿಲ್ ಚಿಕ್ಕಪ್ಪ ಗಂಭೀರ, ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

  ಪೊಲೀಸರಿಂದ ತನಿಖೆ ಆರಂಭ, ಐವರಿಂದ ಕೃತ್ಯ

ಪ್ರತಿಷ್ಠಿತ ಅಮೇಜಾನ್ ಸಂಸ್ಥೆಯ ಮ್ಯಾನೇಜರ್ ಒಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದ ಘಟನೆ ದೆಹಲಿಯಲ್ಲಿ ನಿನ್ನೆ ನಡೆದಿದೆ. ಹರ್ಪ್ರೀತ್ ಗಿಲ್ ಗುಂಡೇಟಿಗೆ ಬಲಿಯಾದ ಮ್ಯಾನೇಜರ್.

ಇವರು ದೆಹಲಿಯ ಶುಭಾಶ್ ವಿಹಾರ ಪ್ರದೇಶದ ಭಜನಪುರದಲ್ಲಿ ತಮ್ಮ ಚಿಕ್ಕಪ್ಪನ ಜೊತೆ ಇದ್ದಾಗ ಐವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹರ್ಪ್ರೀತ್​​ ಗಿಲ್ ತಲೆಗೆ ಗುಂಡು ತಗುಲಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಇನ್ನು ಇವರ ಚಿಕ್ಕಪ್ಪ ಮೇಲೂ ಫೈರಿಂಗ್ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಐವರು ನಮ್ಮ ಮೇಲೆ ದಾಳಿ ಮಾಡಿ ಪರಾರಿ ಆಗಿದ್ದಾರೆ ಎಂದು ಗಾಯಾಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ತನಿಖೆಯನ್ನು ನಡೆಸುತ್ತಿರೋಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ಅಮೇಜಾನ್ ಮ್ಯಾನೇಜರ್​​​​​​​ಗೆ ಗುಂಡಿಟ್ಟು ಬರ್ಬರ ಹತ್ಯೆ; ಬೆಚ್ಚಿಬಿದ್ದ ರಾಜಧಾನಿ

https://newsfirstlive.com/wp-content/uploads/2023/08/Amazon.jpg

Load More