ಪ್ರಾಣ ಸಂಕಟಕ್ಕೆ ಸಿಲುಕಿದ್ದ ಡ್ರೈವರ್, ಸಹಾಯಕ
ಸ್ಥಳೀಯರು, ಪೊಲೀಸರಿಂದ ರಕ್ಷಣೆ
ಆ್ಯಂಬುಲೆನ್ಸ್ನಲ್ಲಿ ರೋಗಿಗಳು ಇದ್ದರಾ..?
ಡ್ರೈವರ್ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ತಡೆಗೋಡೆಯ ಅಂಚಿಗೆ ಸಿಲುಕಿ ನೇತಾಡಿದ ಘಟನೆ ರಾಜಸ್ಥಾನದ ಕರನ್ಪುರದಲ್ಲಿ ನಡೆದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಮತ್ತು ಪೊಲೀಸರು ಡ್ರೈವರ್ ಹಾಗೂ ಸಹಾಯಕನನ್ನು ರಕ್ಷಣೆ ಮಾಡಿದ್ದಾರೆ.
ಕಣಿವೆಯಲ್ಲಿ ಇಳಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್, ಬಂಡೆಯಂತಿದ್ದ ತಡೆಗೋಡೆಗೆ ಹೋಗಿ ಗುದ್ದಿದೆ. ಪ್ರಪಾತದ ಅಂಚಿಗೆ ಹೋಗಿ ನಿಂತಿದ್ದ ಆ್ಯಂಬುಲೆನ್ಸ್, ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ದರೂ ಧರೆಗೆ ಉರುಳಿ ಬೀಳುತ್ತಿತ್ತು.
ಅದೃಷ್ಟವಶಾತ್ ಆ್ಯಂಬುಲೆನ್ಸ್ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ. ದುರ್ಘಟನೆಯಿಂದ ಡ್ರೈವರ್ ಹಾಗೂ ಸಹಾಯಕ ಸಂಕಷ್ಟಕ್ಕೆ ಸಿಲುಕಿದ್ದರು. ಕೂಡಲೇ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ