newsfirstkannada.com

ಮಂಡ್ಯಕ್ಕೆ ಬರಲಿದ್ದಾರೆ ಬರಾಕ್​ ಒಬಾಮಾ! ಸಕ್ಕರೆ ನಾಡಿಗೆ ಅಮೆರಿಕಾದ ಮಾಜಿ ಅಧ್ಯಕ್ಷ ಯಾಕೆ ಬರ್ತಿದ್ದಾರೆ ಗೊತ್ತಾ?

Share :

31-08-2023

  ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮಕ್ಕೆ ಬರಲಿದ್ದಾರೆ ಒಬಾಮಾ

  ಆಧ್ಯಾತ್ಮಿಕ ಕೇಂದ್ರ ಶಂಕು ಸ್ಥಾಪನೆಗೆ ವಿದೇಶದಿಂದ ಬರ್ತಾರಾ?

  ಮಂಡ್ಯದಲ್ಲಿ ನಿರ್ಮಾಣವಾಗುತ್ತಿದೆ ಸರ್ವ ಧರ್ಮ ಸಮನ್ವಯ ಕೇಂದ್ರ

ಮಂಡ್ಯ: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಕ್ಕರೆ ನಾಡಿಗೆ ಭೇಟಿ ನೀಡಲಿದ್ದಾರೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗುತ್ತಿದ್ದು, ಇದರ ಶಂಕುಸ್ಥಾಪನೆಗೆ ಬರಾಕ್ ಒಬಾಮಾ ಆಗಮಿಸಲಿದ್ದಾರೆ.

ಸಕ್ಕರೆ ನಾಡಿನಲ್ಲಿ ನಿರ್ಮಾಣವಾಗುತ್ತಿರುವ ಆಧ್ಯಾತ್ಮಿಕ ಕೇಂದ್ರ ಸರ್ವಧರ್ಮ ಸಮನ್ವಯ ಕೇಂದ್ರವಾಗಲಿದ್ದು, ಒಂದು ಧರ್ಮಕ್ಕೆ ಸೀಮಿತ ಮಾಡದೆ ಎಲ್ಲಾ ಧರ್ಮದವೂ ಸಮಾನ ಎಂದು ಸಾರುವ ಸದುದ್ದೇಶದೊಂದಿಗೆ ಇದನ್ನು ನಿರ್ಮಿಸಲಾಗುತ್ತಿದೆ. ಅಂದಹಾಗೆಯೇ ಇದನ್ನು ಅಮೆರಿಕಾದ ಖ್ಯಾತ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ತಂದೆ ಡಾ.ಮೂರ್ತಿ ಅವರಿಂದ ಮದರ್ ಅರ್ಥ್ ನಿರ್ಮಾಣ ಮಾಡುತ್ತಿದ್ದಾರೆ. ಡಾ.ಮೂರ್ತಿ ಅವರು ಹಲ್ಲೇಗೆರೆ ಗ್ರಾಮದವರೇ ಆಗಿದ್ದು, ಸದ್ಯ ಅವರ ಕುಟುಂಬ ಅಮೇರಿಕದಲ್ಲಿ ವಾಸವಿದೆ.

2 ಎಕರೆ ಪ್ರದೇಶದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ

ಡಾ.ಮೂರ್ತಿ ಹುಟ್ಟೂರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸರ್ವ ಧರ್ಮ ಸಮನ್ವಯ ಸಂದೇಶ ಸಾರಲು ಹೊರಟಿದ್ದಾರೆ. ಹಾಗಾಗಿ ಮಂಟಪದಲ್ಲಿ ಭೂ ದೇವಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಮೂರ್ತಿ​ ಫ್ಯಾಮಿಲಿ ಚಿಂತನೆ ನಡೆಸಿದೆ. ಭೂಮಿ ಪ್ರತಿಮೆ ಜೊತೆಗೆ ಪ್ರಪಂಚದ ವಿಶ್ವ ಮಾನವರ ಪ್ರತಿಮೆ ನಿರ್ಮಾಣವಾಡಲು ಮುಂದಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ 64 ಮಂದಿ ವಿಶ್ವಮಾನವರ ಪ್ರತಿಮೆಗೆ ಪ್ಲಾನ್ ಮಾಡಿದ್ದಾರೆ. 12 ಎಕರೆ ಪ್ರದೇಶದಲ್ಲಿ ಭೂದೇವಿ ಆಧ್ಯಾತ್ಮಿಕ ಕೇಂದ್ರ ನಿರ್ಮಾಣವಾಗಲಿದೆ.

ಈಗಾಗಲೇ ಡಾ.ಮೂರ್ತಿಯವರಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜನವರಿ ಅಥವಾ ಫೆಬ್ರವರಿಯಲ್ಲಿ ಆಧ್ಯಾತ್ಮಿಕ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಬರಾಕ್ ಒಬಾಮಾ ದಂಪತಿಯಿಂದ ಶಂಕುಸ್ಥಾಪನೆ ನೆರವೇರಲಿದೆ.

ಮುಖ್ಯಮಂತ್ರಿ ಜೊತೆ ಸಭೆ

ಒಬಾಮಾ ಭೇಟಿ ಸಂಬಂಧ ಇಂದು ಮುಖ್ಯಮಂತ್ರಿ ಜೊತೆ ಡಾ.ಮೂರ್ತಿ​ ಸಭೆ ನಡೆಸಲಿದ್ದು, ಮಂಡ್ಯ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಒಬಾಮಾ ಆಗಮನದ ಹಿನ್ನೆಲೆಯಲ್ಲಿ ಸಿದ್ಧತೆ ಸಂಬಂಧ ಸಭೆ ನಡೆಸಲಿದ್ದಾರೆ.

ಇನ್ನು ಒಬಾಮಾ ಸಂಚರಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಕೆಲವು ಕಾಮಗಾರಿಯ ಬಗ್ಗೆ ಸಿದ್ದರಾಮಯ್ಯ ಅವರು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಿಎಂ ಸಭೆ ನಿಗದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯಕ್ಕೆ ಬರಲಿದ್ದಾರೆ ಬರಾಕ್​ ಒಬಾಮಾ! ಸಕ್ಕರೆ ನಾಡಿಗೆ ಅಮೆರಿಕಾದ ಮಾಜಿ ಅಧ್ಯಕ್ಷ ಯಾಕೆ ಬರ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2023/08/Barack-Obama.jpg

Load More