ಆಚಾರ್ಯ ಇಂಜಿನಿಯರಿಂಗ್ ಕಾಲೇಜು ಬಳಿ ಹಾಡಹಗಲೇ ಗುಂಡಿನ ಸದ್ದು
ವಕೀಲನ ಹತ್ಯೆ ಕೇಸ್ನಲ್ಲಿ ಉದ್ಯಮಿಯೇ ದೋಷಿ ಎಂಬ ತೀರ್ಪು ಹೊರಬಿದ್ದಿದೆ
ಪ್ರಕರಣದ ತನಿಖೆ ಶುರು ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಶಾಕ್ ಮೇಲೆ ಶಾಕ್
ಬೆಂಗಳೂರು: ಬರೋಬ್ಬರಿ ಆರು ವರ್ಷಗಳ ಹಿಂದೆ ಆಚಾರ್ಯ ಇಂಜಿನಿಯರಿಂಗ್ ಕಾಲೇಜು ಬಳಿ ನಡೆದ ಹತ್ಯೆ ಕಂಡು ಬೆಂಗಳೂರೇ ಬೆಚ್ಚಿ ಬಿದ್ದಿತ್ತು. ವಕೀಲನ ಎದೆ ಸೀಳಿದ್ದ ಗುಂಡು ಉಸಿರು ಜೀವ ತೆಗೆದಿತ್ತು. ಈ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಂಡಿತ್ತು. ಆದ್ರೀಗ ಈ ಪ್ರಕರಣದ ತೀರ್ಪು ಹೊರ ಬಿದ್ದಿದ್ದು, ವಕೀಲನನ್ನ ಕೊಂದ ಉದ್ಯಮಿಯೇ ದೋಷಿ ಅಂತ ಕೋರ್ಟ್ ಆದೇಶ ನೀಡಿದೆ.
2017 ಜನವರಿ 13, ಆಚಾರ್ಯ ಇಂಜಿನಿಯರಿಂಗ್ ಕಾಲೇಜು ಬಳಿ ಹಾಡಹಗಲೇ ಗುಂಡು ಸದ್ದು ಮಾಡಿತ್ತು. ಈ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಯಾರು ಅಂತ ನೋಡಿದ್ರೆ ಖ್ಯಾತ ವಕೀಲ ಕೇಶವಮೂರ್ತಿ ಪುತ್ರ ಅಮಿತ್ ಕೇಶವಮೂರ್ತಿ. ಈ ಪ್ರಕರಣ ನಾನಾ ತಿರುವು ಪಡೆದುಕೊಂಡು ಕೊನೆಗೆ ಉದ್ಯಮಿ ರಾಜೇಶ್ಗೌಡನೇ ದೋಷಿ ಅಂತ ಕೋರ್ಟ್ ತೀರ್ಪು ಕೊಟ್ಟಿದೆ. 6 ವರ್ಷಗಳ ಹಿಂದೆ ವಕೀಲ ಅಮಿತ್ ಕೇಶವಮೂರ್ತಿ ಹತ್ಯೆ ಕಂಡು ಸಿಲಿಕಾನ್ ಸಿಟಿ ದಂಗಾಗಿ ಹೋಗಿತ್ತು. ಈ ಶೂಟೌಟ್ ಕಂಡು ಪೊಲೀಸರು ಶಾಕ್ ಆಗಿದ್ರು, ನಡು ಬೀದಿಯಲ್ಲೆ ನಡೆದ ಹತ್ಯೆ ಸಿಟಿ ಜನರ ನಿದ್ದೆಗೆಡಿಸಿತ್ತು. ವಕೀಲ ಅಮಿತ್ ಎದೆಗೆ ನಾಟಿದ್ದ ಗುಂಡು ಹಾರಿಸಿದ್ದು ಯಾರು ಅನ್ನೋದೆ ಪೊಲೀಸರಿಗೆ ತಲೆ ನೋವಾಗಿತ್ತು. ಪ್ರಕರಣದ ತನಿಖೆ ಶುರು ಮಾಡಿದ ಪೊಲೀಸರು ಮೊದಲು ಶ್ರುತಿ ಪತಿಯನ್ನೇ ಅರೆಸ್ಟ್ ಮಾಡಿದ್ದರು.
ನೆಲಮಂಗಲದ ಖ್ಯಾತ ವಕೀಲ ಕೇಶವಮೂರ್ತಿ ಪುತ್ರ ಅಮಿತ್ ಕೇಶವಮೂರ್ತಿ ಜೊತೆ ಪಿಡಿಒ ಶೃತಿಗೌಡಗೆ ಅಕ್ರಮ ಸಂಬಂಧ ಇರೋ ಬಗ್ಗೆ ಆರೋಪಿ ರಾಜೇಶ್ ಗೌಡಾಗೆ ಅನುಮಾನ ಇತ್ತು. ಶೂಟೌಟ್ ಆದ ದಿನ ಅಂದ್ರೆ 2017 ಜನವರಿ 13, ಆಚಾರ್ಯ ಇಂಜಿನಿಯರಿಂಗ್ ಕಾಲೇಜು ಬಳಿ ಅಮಿತ್ ಹಾಗೂ ರಾಜೇಶ್ ಪತ್ನಿ ಪಿಡಿಒ ಶ್ರುತಿ ಜೊತೆಗಿದ್ದರು. ಅಮಿತ್ ಕೇಶವಮೂರ್ತಿಯವರ ಸ್ವಿಫ್ಟ್ ಕಾರಿನಲ್ಲಿ ಇಬ್ಬರೂ ಕುಳಿತಿದ್ರು. ಕಾರು ಹಿಂಬಾಲಿಸಿ ಬಂದಿದ್ದ ಶ್ರುತಿ ಗೌಡ ಪತಿ ರಾಜೇಶ್ ಅಮಿತ್ಗೆ ಶೂಟ್ ಮಾಡಿದ್ದ. ಬಳಿಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ವಕೀಲ ಅಮಿತ್ ಕೇಶವಮೂರ್ತಿ ಸಾವನಪ್ಪಿದ್ರೆ, ಇತ್ತ ಶ್ರುತಿ ಗೌಡ ಕೂಡ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅನುಮಾನ ಪೆದ್ದರೋಗಂ ಅನ್ನೋ ಮಾತಿದೆ. ಇದೇ ಅನುಮಾನದ ಹುಳ ರಾಜೇಶ್ಗೌಡನ ತಲೆ ಹೊಕ್ಕಿ, ಕೈಲಿದ್ದ ಪಿಸ್ತೂಲ್, ಕಾರ್ನಲ್ಲಿದ್ದ ವಕೀಲ ಅಮಿತ್ ಕೇಶವಮೂರ್ತಿ ಎದೆ ಸೀಳಿತ್ತು. ಅದೇ ಕಾರ್ನಲ್ಲಿ ಪಕ್ಕದಲ್ಲೇ ಕೂತಿದ್ದ ಆರೋಪಿಯ ಪತ್ನಿ ಶೃತಿಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಅಂದು ಮಾಡಿದ್ದ ಗುಂಡಿನ ಸದ್ದು ರಾಜಧಾನಿಯನ್ನು ಬೆಚ್ಚಿ ಬೀಳಿಸಿತ್ತು. ಇದೀಗ ವಕೀಲನ ಹತ್ಯೆ ಕೇಸ್ನಲ್ಲಿ ಉದ್ಯಮಿಯೇ ದೋಷಿ ಎಂಬ ತೀರ್ಪು ಹೊರಬಿದ್ದಿದೆ. ಇಬ್ಬರು ಸಾವನಪ್ಪಿದ ಬಳಿಕ ಈ ಕೇಸ್ ನಾನಾ ತಿರುವು ಪಡೆದುಕೊಂಡಿತ್ತು. ಈ ಪ್ರಕರಣದ ಮತ್ತೊಂದು ಆರೋಪಿಯಾಗಿದ್ದ ರಾಜೇಶ್ ತಂದೆ ಕೇಸ್ ವಿಚಾರಣೆಗೂ ಮೊದಲೇ ಸಾವನಪ್ಪಿದ್ರು. ಸದ್ಯ ವಕೀಲನ ಹತ್ಯೆ ಕೇಸ್ನಲ್ಲಿ ಉದ್ಯಮಿ ರಾಜೇಶ್ ಗೌಡ ದೋಷಿ ಅನ್ನೋ ತೀರ್ಪು ಹೊರ ಬಿದ್ದಿದೆ. ಬೆಂಗಳೂರು ಗ್ರಾಮಾಂತರ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ