newsfirstkannada.com

ದಿಢೀರ್ ಸರ್ವಪಕ್ಷ ಸಭೆ ಕರೆದ ಕೇಂದ್ರ ಗೃಹ ಸಚಿವ ಅಮಿತ್ ಶಾ.. ಯಾವ ವಿಚಾರಕ್ಕೆ ಗೊತ್ತಾ..?

Share :

22-06-2023

    ಜೂನ್ 24 ಮಧ್ಯಾಹ್ನ 3 ಗಂಟೆಗೆ ಸಭೆ

    ಕುತೂಹಲ ಮೂಡಿಸಿದ ಕೇಂದ್ರದ ನಡೆ

    ಪರಿಸ್ಥಿತಿ ಕೈಮೀರಿದ ಮೇಲೆ ಎಚ್ಚೆತ್ತುಕೊಳ್ತಾ ಕೇಂದ್ರ?

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ, ದಿಢೀರ್ ಸರ್ವಪಕ್ಷ ಸಭೆ ಕರೆದಿದ್ದಾರೆ. ಜೂನ್ 24 ರಂದು ಸರ್ವಪಕ್ಷಗಳ ಸಭೆಯನ್ನು ಅಮಿತ್ ಶಾ ನಡೆಸಲಿದೆ.

ಈಶಾನ್ಯ ರಾಜ್ಯಗಳಲ್ಲಿ ಗಲಾಟೆಗಳು ಸಂಭವಿಸುತ್ತಿರುವ ಹೊತ್ತಿನಲ್ಲಿ ಇದೇ ಮೊದಲ ಬಾರಿಗೆ ಮೋದಿ ಸರ್ಕಾರ ಎಲ್ಲಾ ಪಕ್ಷಗಳ ಸಭೆ ಕರೆದಿದೆ. ಮಾಹಿತಿಗಳ ಪ್ರಕಾರ, ಜೂನ್ 24ರ ಮಧ್ಯಾಹ್ನ 3 ಗಂಟೆಗೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಈಶಾನ್ಯದಲ್ಲಿ ಉಂಟಾಗಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಿ, ಹತೋಟಿಗೆ ತರುವ ಬಗ್ಗೆ ಚರ್ಚೆ ನಡೆಯಲಿದೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಸಂಬಂಧ, ಬಿಜೆಪಿ ನಾಯಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಬಿಜೆಪಿಯ 9 ಶಾಸಕರು, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಬೇಸರ ಹೊರಹಾಕಿದ್ದಾರೆ. ಮಾತ್ರವಲ್ಲ, ಮಣಿಪುರ ಗಲಾಟೆಯಲ್ಲಿ ಕೇಂದ್ರ ಸರ್ಕಾರ ಎಂಟ್ರಿಯಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಮಣಿಪಾಲ್​ನಲ್ಲಿ ಆಗ್ತಿರೋದು ಏನು..?

ಅಲ್ಲಿನ ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ.

ಮಣಿಪುರದ ಕಣಿವೆಗಳಲ್ಲಿ ವಾಸಿಸುತ್ತಿರುವ ಮೇಟಿಗಳ ಸಂಖ್ಯೆ ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟು ಇದೆ. ಅಲ್ಲಿರುವ ಪ್ರಸ್ತುತ ಕಾನೂನು ಪ್ರಕಾರ, ಈ ಮೇಟಿ ಜನಾಂಗ ಬುಡಕಟ್ಟು ಸಮುದಾಯವಲ್ಲದ ಕಾರಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಹೀಗಿರುವಾಗ ತಮಗೆ ಎಸ್​ಟಿ ಸ್ಥಾನಮಾನ ನೀಡುವಂತೆ ಈ ಸಮುದಾಯ ಆಗ್ರಹಿಸಿಕೊಂಡು ಬಂದಿದೆ. ಒಂದು ವೇಳೆ ಎಸ್​​​ಟಿ ಸ್ಥಾನಮಾನ ನೀಡಿದರೆ, ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಅದಕ್ಕೆ ಮೇಟಿಗಳಿಗೆ ST ಸ್ಥಾನಮಾನ ನೀಡುವುದನ್ನ ಆದಿವಾಸಿ ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.

ಮಣಿಪುರ ಬಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಈ ಸಮುದಾಯದ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿತ್ತು. ಅದರಂತೆ ಮೊನ್ನೆ ‘ಟ್ರೈಬಲ್ ಸಾಲಿಡಾರಿಟಿ ಮಾರ್ಚ್​’ ಹೆಸರಿನಲ್ಲಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ 100ಕ್ಕೂ ಹೆಚ್ಚು ಮಂದಿ ಪ್ರಾಣಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಿಢೀರ್ ಸರ್ವಪಕ್ಷ ಸಭೆ ಕರೆದ ಕೇಂದ್ರ ಗೃಹ ಸಚಿವ ಅಮಿತ್ ಶಾ.. ಯಾವ ವಿಚಾರಕ್ಕೆ ಗೊತ್ತಾ..?

https://newsfirstlive.com/wp-content/uploads/2023/06/Amit_shah.jpg

Load More