newsfirstkannada.com

WATCH: ರಶ್ಮಿಕಾ ಮಂದಣ್ಣ ವೈರಲ್‌ ವಿಡಿಯೋಗೆ ಸಿಟ್ಟಾದ ಅಮಿತಾಬ್ ಬಚ್ಚನ್; ಅಸಲಿ ವಿಷಯ ಏನು?

Share :

06-11-2023

    ರಶ್ಮಿಕಾ ಮಂದಣ್ಣ ವೈರಲ್ ವಿಡಿಯೋಗೆ ಅಮಿತಾಬ್ ಬಚ್ಚನ್ ಬೇಸರ

    ಡೀಪ್ ಫೇಕ್ ಬಳಸಿರೋ ಒರಿಜಿನಲ್ ವಿಡಿಯೋ ಕೂಡ ವೈರಲ್‌

    2.5 ಮಿಲಿಯನ್ ವೀವ್ಸ್‌ ಪಡೆದುಕೊಂಡ ಡೀಪ್‌ ಫೇಕ್ ವಿಡಿಯೋ

ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಲಿಫ್ಟ್ ಬಳಿ ಬರುವ ಬೇರೊಂದು ಯುವತಿಗೆ ರಶ್ಮಿಕಾ ಮಂದಣ್ಣ ಅವರ ಮುಖವಾಡ ಹೊಂದಿಸಲಾಗಿದೆ. ಇದೊಂದು ಡೀಪ್ ಫೇಕ್‌ ತಂತ್ರಜ್ಞಾನದ ತಯಾರಿಸಿರೋ ವಿಡಿಯೋ ಆಗಿದ್ದು, ನೋಡೋದಕ್ಕೆ ರಶ್ಮಿಕಾ ಮಂದಣ್ಣ ಅವರ ಹಾಗೇ ವಿಡಿಯೋವನ್ನು ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀವ್ಸ್‌ ಪಡೆದುಕೊಂಡಿದೆ.

ನಟಿ ರಶ್ಮಿಕಾ ಮಂದಣ್ಣ ಅವರ ಮುಖಕ್ಕೆ ಮಾರ್ಫಿಂಗ್ ಬಳಸಿರೋ ಈ ವಿಡಿಯೋ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಡೀಪ್‌ಫೇಕ್ ತಂತ್ರಜ್ಞಾನವು AI ಕ್ಷೇತ್ರದ ದುಷ್ಪರಿಣಾಮಗಳಲ್ಲಿ ಒಂದಾಗಿದೆ. ಇದೊಂದು ಸೈಬರ್ ಅಪರಾಧವಾಗಿದೆ. AI ತಂತ್ರಜ್ಞಾನದಲ್ಲಿ ಬೇರೆಯವರನ್ನು ಅನುಕರಿಸಲು ಅವರ ಧ್ವನಿಯನ್ನು ಬದಲಾಯಿಸಲು ಮಾತ್ರವಲ್ಲದೆ ಅವರು ನೈಜವಾಗಿ ಕಾಣುವಂತೆ ವೀಡಿಯೊಗಳನ್ನು ತಯಾರಿಸಬಹುದು. ಡೀಪ್‌ಫೇಕ್‌ನ ಈ ಇತ್ತೀಚಿನ ಪ್ರಯೋಗಕ್ಕೆ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತುತ್ತಾಗಿದ್ದಾರೆ.

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಸಹ ವಿಡಿಯೋ ಹಂಚಿಕೊಂಡಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ಇದೊಂದು ಖಂಡನೀಯ. ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕಾದ ಪ್ರಮುಖವಾದ ಪ್ರಕರಣ ಎಂದು ಟ್ವೀಟ್ ಮಾಡಿದ್ದಾರೆ. ಅಭಿಷೇಕ್ ಕುಮಾರ್ ಎಂಬ ಪತ್ರಕರ್ತರು X ನಲ್ಲಿ ಈ ವಿಡಿಯೋದ ವಿರುದ್ಧ ಧ್ವನಿ ಎತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಷಯದ ಹರಡುವಿಕೆಯನ್ನು ಎದುರಿಸಲು ಹೊಸ ಕಾನೂನು ಮತ್ತು ನಿಯಂತ್ರಕ ಕ್ರಮಗಳ ಅಗತ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಅಸಲಿ ಯುವತಿ ಯಾರು?

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ಬಳಸಿರೋ ಒರಿಜಿನಲ್ ವಿಡಿಯೋ ಕೂಡ ಬಯಲಾಗಿದೆ. ಇಂಗ್ಲೆಂಡ್ ಮೂಲದ ಭಾರತೀಯ ಯುವತಿ ಝಾರಾ ಪಟೇಲ್ ಅವರ ವಿಡಿಯೋ ಇದಾಗಿದೆ. ಈಕೆ ಕಳೆದ ಅಕ್ಟೋಬರ್ 9ರಂದು ತಮ್ಮ ಇನ್ಸ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಕದ್ದಿರುವ ಕಿಡಿಗೇಡಿಗಳು ಝಾರಾ ಪಟೇಲ್ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರು ಫೋಟೋ ಫೇಕ್ ಮಾಡಿದ್ದಾರೆ.

ಡೀಪ್‌ಫೇಕ್ ಎಂದರೇನು?

ಡೀಪ್‌ ಫೇಕ್ ಎನ್ನುವುದು ಒಂದು ರೀತಿಯ ಮಾಧ್ಯಮವಾಗಿದ್ದು, ಇದರಲ್ಲಿ ಅಸ್ತಿತ್ವದಲ್ಲಿರುವ ಚಿತ್ರ ಅಥವಾ ವೀಡಿಯೊದಲ್ಲಿರುವ ವ್ಯಕ್ತಿಯನ್ನು AI ಬಳಸಿಕೊಂಡು ಬೇರೊಬ್ಬರ ಹೋಲಿಕೆಯೊಂದಿಗೆ ಬದಲಾಯಿಸಲಾಗುತ್ತದೆ. ನಕಲಿ ವಿಷಯದ ಕ್ರಿಯೆಯು ಹಳೆಯದಾಗಿದ್ದರೂ, ಡೀಪ್‌ ಫೇಕ್‌ಗಳು ಕೃತಕ ಬುದ್ಧಿಮತ್ತೆಯಿಂದ ಶಕ್ತಿಯುತ ತಂತ್ರಗಳನ್ನು ನಿಯಂತ್ರಿಸುತ್ತವೆ. ದೃಶ್ಯ ಮತ್ತು ಆಡಿಯೋಗಳನ್ನು ಮೋಸದಿಂದ ತಯಾರಿಸುವ ವಿಧಾನವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ರಶ್ಮಿಕಾ ಮಂದಣ್ಣ ವೈರಲ್‌ ವಿಡಿಯೋಗೆ ಸಿಟ್ಟಾದ ಅಮಿತಾಬ್ ಬಚ್ಚನ್; ಅಸಲಿ ವಿಷಯ ಏನು?

https://newsfirstlive.com/wp-content/uploads/2023/11/Rashmika-Mandanna-Amitab-Bachan.jpg

Load More