newsfirstkannada.com

ಮದುವೆಯಾಗದ ಹೆಣ್ಣು ಮಕ್ಕಳು ಭಾರ; ಕೆಬಿಸಿ ಸ್ಪರ್ಧಿಯ ಆ ಮಾತಿಗೆ ಬಿಗ್​​ ಬಿ ಬೇಸರಗೊಂಡಿದ್ದೇಕೆ

Share :

Published August 30, 2024 at 7:04am

    ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಲ್ಲ ಅಂದಿದ್ದೇಕೆ ಬಚ್ಚನ್?

    ಕೆಬಿಸಿ 16ನೇ ಸೀಸನ್​ನಲ್ಲಿ ಸ್ಪರ್ಧಿಯ ಬಾಯಿ ಮುಚ್ಚಿಸಿದ್ದು ಹೇಗೆ ಬಿಗ್​​ ಬಿ ?

    ಅಮಿತಾಬ್ ಬಚ್ಚನ್ ಮಹಿಳೆಯರ ಬಗ್ಗೆ ಆ ಹೇಳಿಕೆಗೆ ಬೇಸರಗೊಂಡಿದ್ದೇಕೆ?

ಮುಂಬೈ: ಅಮಿತಾಬ್ ಬಚ್ಚನ್ ಕಳೆದ 24 ವರ್ಷಗಳಿಂದ ಕೌನ್ ಬನೆಗಾ ಕರೊಡ್​ಪತಿ (Kaun Banega Crorepati) ರಿಯಾಲಿಟಿ ಶೋವನ್ನ ನಡೆಸಿಕೊಂಡು ಬಂದಿದ್ದಾರೆ. ಒಂದೇ ಒಂದು ವರ್ಷ ಶಾರುಖ್ ನಡೆಸಿದ್ದು ಬಿಟ್ರೆ, ಉಳಿದ ಎಲ್ಲಾ ಸೀಸನ್​​ಗಳನ್ನು ಅಮಿತಾಬ್ ನಡೆಸಿಕೊಂಡು ಬಂದಿದ್ದಾರೆ. 16 ಸೀಸನ್​ಗಳಲ್ಲಿ ಬಗೆ ಬಗೆ ಸ್ಪರ್ಧಿಗಳನ್ನು ನೋಡಿದ್ದಾರೆ. ನಗಿಸಿದ್ದಾರೆ, ನಕ್ಕಿದ್ದಾರೆ. ಫ್ರ್ಯಾಂಕ್​​​ಗಳನ್ನ ಮಾಡಿದ್ದಾರೆ, ಅದೆಷ್ಟೋ ಬಾರಿ ಸ್ಪರ್ಧಿಗಳ ಬದುಕಿನ ಜಂಜಾಟ ಕಂಡು ಕಣ್ಣೀರು ಹಾಕಿದ್ದಾರೆ. ಆದ್ರೆ ಈ 16ನೇ ಸಿಸನ್​ನಲ್ಲಿ ಅವರಿಗೆ ಅದೇ ತರಹದ ಅನುಭವಗಳು ಆಗಿವೆ. ಕಳೆದ ಬಾರಿ ಒಬ್ಬ ಸ್ಪರ್ಧಿ ನಿಮ್ಮ ಗಡ್ಡವನ್ನು ಒಮ್ಮೆ ನಾನು ಮುಟ್ಟಿ ನೋಡಬೇಕು ಎಂದು ಕೇಳಿ ದೊಡ್ಡ ಸುದ್ದಿಯಾಗಿದ್ದರು. ಈಗ ಮತ್ತೊಬ್ಬ ಸ್ಪರ್ಧಿ ಬೇರೆಯದ್ದೆ ಸುದ್ದಿ ಮಾಡಿದ್ದಾನೆ. ಆತನ ಒಂದು ಹೇಳಿಕೆ ಅಮಿತಾಬ್​ರನ್ನು ಮೌನಕ್ಕೆ ತಳ್ಳಿ ವಾಪಸ್ ಅವರಿಗೆ ತಕ್ಕ ಉತ್ತರ ನೀಡುವಂತೆ ಮಾಡಿತ್ತು.

ಇದನ್ನೂ ಓದಿ: DKD ವೇದಿಕೆ ಮೇಲೆ ಕಣ್ಣೀರಿಟ್ಟ ತರುಣ್ ಸುಧೀರ್‌.. ಸೋನಲ್ ಫುಲ್ ಶಾಕ್‌; ವಿಡಿಯೋ ಇಲ್ಲಿದೆ!

ಅಮಿತಾಬಚ್ಚನ್ ತಮ್ಮ ಕೆಬಿಸಿ ಕಾರ್ಯಕ್ರಮದಲ್ಲಿ ಸದಾ ಲಿಂಗಸಮಾನತೆ ಹಾಗೂ ಮಹಿಳಾ ಸಬಲೀಕರಣದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಅಂತಹ ಲೆಜೆಂಡ್ ಎದುರಿಗೆ ಒಬ್ಬ ಸ್ಪರ್ಧಿ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರ ಸರ್ ಎಂದು ಬಿಟ್ಟಿದ್ದಾನೆ. ಅದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತಾಬ್ ಹೆಣ್ಣು ಮಕ್ಕಳು ಎಂದಿಗೂ ಮನೆಗೆ ಭಾರವಲ್ಲ ಎಂದಿದ್ದಾರೆ.

ಇದನ್ನೂ ಓದಿ: ನಂಗೂ ಪ್ರೀತಿ ಆಗಿತ್ತು ಆದ್ರೆ.. ಲವ್​ ಬ್ರೇಕಪ್ ಬಗ್ಗೆ ಫಸ್ಟ್ ಟೈಂ ಮಾತಾಡಿದ ಚೈತ್ರಾ ಜೆ ಆಚಾರ್; ಹೇಳಿದ್ದೇನು?

16ನೇ ಸಿಸನ್​ನಲ್ಲಿ ಕೃಷ್ಣ ಸುಲೇಖರ್ ಅನ್ನುವ ಸ್ಪರ್ಧಿಯೊಬ್ಬರು ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡಾಗ ಅನುಭವಿಸಿದ ಸ್ಥಿತಿಯನ್ನು ಹೇಳುವ ಭರದಲ್ಲಿ ಈ ಒಂದು ಹೇಳಿಕೆಯನ್ನು ಕೊಡುತ್ತಾರೆ. ನಾನು ಕೋವಿಡ್​ನಲ್ಲಿ ಕೆಲಸ ಕಳೆದುಕೊಂಡಾಗ ಅರ್ಥವಾಗಿದ್ದು ಸರ್​, ಹೇಗೆ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಾಗುತ್ತಾರೋ, ಹಾಗೆಯೇ ಕೆಲಸವಿಲ್ಲದ ಗಂಡು ಮಕ್ಕಳು ಕೂಡ ಮನೆಗೆ ಭಾರ ಆಗುತ್ತಾರೆ ಎಂದಿದ್ದಾರೆ.

ಹೆಣ್ಣು ಮಕ್ಕಳ ಬಗೆಗಿನ ಈ ಹೇಳಿಕೆಗೆ ಬಿಗ್​ ಬಿ ಬೇಸರಗೊಂಡು, ನಾನು ನಿಮಗೆ ಒಂದು ಮಾತು ಹೇಳಲು ಬಯಸುತ್ತೇನೆ ಕೃಷ್ಣ, ಹೆಣ್ಣು ಮಕ್ಕಳು ಎಂದಿಗೂ ಕೂಡ ಮನೆಗೆ ಭಾರವಲ್ಲ, ಅವರು ಮನೆಯ ಭಾಗ್ಯ ಎಂದು ಹೇಳುವ ಮೂಲಕ ಸ್ಪರ್ಧಿಯ ಬಾಯಿ ಮುಚ್ಚಿಸಿದ್ದಾರೆ. ಸದ್ಯ ಬಿಗ್ ಅವರ ಈ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬಿಗ್​ ಬಿ ಮಹಿಳಾ ಗೌರವವನ್ನು ಎತ್ತಿ ಹಿಡಿದಿದ್ದಕ್ಕೆ ಎಲ್ಲರೂ ತುಂಬಿದ ಕೊಡ ತುಳುಕುವುದಿಲ್ಲ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾಗದ ಹೆಣ್ಣು ಮಕ್ಕಳು ಭಾರ; ಕೆಬಿಸಿ ಸ್ಪರ್ಧಿಯ ಆ ಮಾತಿಗೆ ಬಿಗ್​​ ಬಿ ಬೇಸರಗೊಂಡಿದ್ದೇಕೆ

https://newsfirstlive.com/wp-content/uploads/2024/08/BIG-B-ON-WOMENS-BURDEN-1.jpg

Load More