ಅಕೌಂಟ್ ಇಲ್ಲ ಅಂದ್ರೆ, ಅಕೌಂಟ್ ಮಾಡಿಸಲು ನೆರವು
ಸಿಬ್ಬಂದಿ, ನ್ಯಾಯಬೆಲೆ ಅಂಗಡಿ ಸಹಯೋಗದಲ್ಲಿ ಸಹಾಯ
ಬ್ಯಾಂಕ್, ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ನೆರವು
ಬೆಂಗಳೂರು: ಅಕ್ಕಿಗಾಗಿ ಕದನ ಮಾಡಿ ಕಾಂಗ್ರೆಸ್ ಸರ್ಕಾರ ಜನರಿಗೆ ಅನ್ನಭಾಗ್ಯದ ಬದಲು ಧನ ಭಾಗ್ಯ ನೀಡೊಕೆ ಮುಂದಾಗಿದೆ. ಜುಲೈ 10 ರಂದು ಫಲಾನಿಭವಿಗಳ ಖಾತೆಗೆ ಹಣವನ್ನೂ ಹಾಕೋಕೆ ಶುರು ಮಾಡಿದೆ. ಸ್ಟ್ ನಾಲ್ಕು ದಿನಗಳಲ್ಲೇ 69 ಲಕ್ಷ ಜನರ ಅಕೌಂಟ್ಗೆ 169 ಕೋಟಿ ಹಣ ವರ್ಗಾವಣೆ ಮಾಡಿದೆ.
ಅನ್ನಭಾಗ್ಯ ಯೋಜನೆ ಅಡಿ ಹಣ ವರ್ಗಾವಣೆ ಮಾಡೋಕೆ 773 ಕೋಟಿ ಹಣ ಬೇಕಾಗುತ್ತೆ. ಇದೀಗ ಮೊದಲ ಹಂತದಲ್ಲಿ ಮೈಸೂರು, ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಹಾಗೂ ಬಾಗಲಕೋಟೆಯ 5 ಜಿಲ್ಲೆಯ ಜನರ ಖಾತೆಗೆ ಹಣ ಹಾಕಲಾಗಿದೆ.
ಇಂದು ಎರಡನೇ ಹಂತದಲ್ಲಿ ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ 13 ಲಕ್ಷ ಕಾರ್ಡ್ ಹೊಂದಿರುವ 49 ಲಕ್ಷ ಫಲಾನುಭವಿಗಳ ಖಾತೆಗೆ 80 ಕೋಟಿ ರೂಪಾಯಿ ಹಣ ಇಂದು ಡಿಬಿಟಿ ಮೂಲಕ ಜಮೆಯಾಗಿದೆ. ಈ ಮೂಲಕ 10 ಜಿಲ್ಲೆಯ ಅರ್ಹರಿಗೆ ಹಣ ಸಂದಾಯವಾಗಿದೆ.
ರಾಜ್ಯದ 15 ಲಕ್ಷ ಬಿಪಿಎಲ್ ಕಾರ್ಡ್ ದಾರರ ಈ ತಿಂಗಳ ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ಆಧಾರ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗದೆ ಹಾಗೂ ಬ್ಯಾಂಕ್ ಆ್ಯಕ್ಟಿವ್ ಇಲ್ಲದ ಕಾರಣ ಈ ತಿಂಗಳ ಹಣ ಸಿಗಲ್ಲ. ಹೀಗಾಗಿ ಮುಂದಿನ ತಿಂಗಳಾದ್ರು ಇವರು ಹಣ ಪಡೆಯುವಂತೆ ಮಾಡಲು ಆಹಾರ ಇಲಾಖೆ ಹೊಸ ಪ್ಲಾನ್ ಮಾಡ್ತಿದೆ.
ಯೋಜನೆ ವಂಚಿತರಿಗೆ ನೆರವು
ಆಹಾರ ಇಲಾಖೆ ಇಕೆವೈಸಿ ಮಾಡಿಸದ ಕಾರ್ಡ್‌ಗಳ ಪಟ್ಟಿ ಸಿದ್ಧಪಡಿಸಿದೆ. ಬ್ಯಾಂಕ್ ಅಕೌಂಟ್ ಹೊಂದದೆ ಇರುವವರಿಗೆ ಅಕೌಂಟ್ ಮಾಡಿಸಲು ನೆರವಾಗಲು ಮುಂದಾಗಿದೆ. ಆಹಾರ ಇಲಾಖೆ ಸಿಬ್ಬಂದಿ, ನ್ಯಾಯಬೆಲೆ ಅಂಗಡಿಯವರ ಸಹಯೋಗದಲ್ಲಿ ಸಹಾಯ ಮಾಡಲಿದ್ದಾರೆ.
ಫಲಾನುಭವಿಗಳಿಗೆ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಬ್ಯಾಂಕ್ ಖಾತೆ ತೆರೆಯಲು ನೆರವಾಲಿದ್ದಾರೆ. ಬ್ಯಾಂಕ್ ಖಾತೆ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿಸಬೇಕು ಅಂತಲೂ ತನ್ನ ಸಿಬ್ಬಂದಿಗೆ ಇಲಾಖೆ ಸೂಚಿಸಿದೆ. ಜೊತೆಗೆ ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಮತ್ತೆ ಆ್ಯಕ್ಟಿವ್ ಮಾಡಿಸಿ ಅಂತನೂ ತಿಳಿಸಿದೆ.
ಉಳಿದ 21 ಜಿಲ್ಲೆಗಳಿಗೆ ಅನ್ನ ಭಾಗ್ಯ ಹಣ ಹಾಕಲು ಆಹಾರ ಇಲಾಖೆ ಸಿದ್ಧತೆ ಮಾಡಿಕೊಳ್ತಿದೆ. ಕೆಲವೇ ದಿನದಲ್ಲಿ ಅರ್ಹರ ಖಾತೆಗೆ ಹಣ ಬರಲಿದೆ. ಈ ಮೂಲಕ ಅಡೆತಡೆಗಳ ನಡುವೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲು ಸಜ್ಜಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ