newsfirstkannada.com

ಮತ್ತೆ ಅಭಿಮಾನಿಗಳ ಮನಸ್ಸು ಗೆದ್ದ ‘ಅಮೃತಧಾರೆ’ ಭೂಮಿಕಾ; ನಟಿಯ ಅಭಿನಯಕ್ಕೆ ಭೇಷ್​ ಎಂದ ಫ್ಯಾನ್ಸ್!

Share :

28-06-2023

  ಆ ಒಂದು ಡೈಲಾಗ್​, ಅದ್ಭುತ ಅಭಿನಯದ ಮೂಲಕ ವೀಕ್ಷಕರ ಮನಗೆದ್ದ ನಟಿ

  ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳಿದ ನಟಿ ಛಾಯಾ ಸಿಂಗ್ ಮ್ಯಾಜಿಕ್

  ನಟಿ ಛಾಯಾ ಸಿಂಗ್ ಅಭಿನಯಕ್ಕೆ ಮನಸೋತ ಅಭಿಮಾನಿಗಳು, ಹೇಳಿದ್ದೇನು?

ಆ ಒಂದು ಡೈಲಾಗ್​, ಅಭಿನಯ ವೀಕ್ಷಕರ ಮನಸ್ಸು ಗೆದ್ದಿದೆ. ಹೆಣ್ಮಕ್ಕಳ ನೋವಿಗೆ ಧ್ವನಿಯಾದ ನಟಿ ಛಾಯಾ ಸಿಂಗ್ ನಟನೆಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಶಬ್ದದಲ್ಲಿ ಅದೆಷ್ಟೋ ಮದುವೆಯಾಗದಿರುವ ಹೆಣ್ಣು ಮಕ್ಕಳ ವೇದನೆ ಅಡಗಿದೆ. ಡೈಲಾಗ್​ ರೈಟರ್​ಗೆ ಮನೋಜ್ಞವಾಗಿ ಅಭಿನಯಿಸಿದ ಛಾಯಾ ಸಿಂಗ್​ಗೆ ಒಂದು ಸಲಾಂ. ಅಂತಾ ಸಾಮಾಜಿಕ ಜಾಲತಾಣದಲ್ಲಿ ಇದೆ ಮಾತುಕತೆ.

ಹೆಣ್ಮಕ್ಕಳ ನೋವಿಗೆ ಧ್ವನಿಯಾದ ನಟಿ ಛಾಯಾ ಸಿಂಗ್ ನಟನೆ

ಅಮೃತಧಾರೆ ಸೀರಿಯಲ್​ನ ಈ ಸಾಲುಗಳು ಸದ್ಯ ವೈರಲ್​ ಆಗುತ್ತಿದೆ. ವಯಸ್ಸು ಮೀರಿದ ಹೆಣ್ಣುಮಗಳಿಗೆ ಮದುವೆ ಅನ್ನೋ ಟಾಪಿಕ್​ ಯಾವ ರೀತಿಯ ವೇದನೆಯನ್ನ ತಂದೊಡ್ಡುತ್ತದೆ? ಜೀವನಕ್ಕಿಂತ ಮದುವೆ ದೊಡ್ಡದಾ? ಎಂಬುದನ್ನ ಪ್ರತಿಬಿಂಬಿಸುವ ಅಮೋಘವಾದ ಸೀನ್​ ಇದು. ಸದ್ಯ ಈ ಸೀನ್​ಗೆ ಭಾರಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ತುಂಬಾ ವರ್ಷಗಳ ನಂತರ ಕನ್ನಡಕ್ಕೆ ಕಾಲಿಟ್ಟುರುವ ನಟಿ ಛಾಯಾ ಸಿಂಗ್ ಅಭಿನಯಕ್ಕೆ ಅಭಿಮಾನಿಗಳೂ ಮನಸೋತಿದ್ದಾರೆ. ಅವರ ಪಾತ್ರ ನಿರ್ವಹಣೆಗೆ ಭೇಷ್​ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ ನಟಿ ಐಶ್ವರ್ಯಾ ಬಾಗಲಕೋಟೆ, ನಟಿ ಮಾನ್ಸಿ ಜೋಶಿ, ಗೀತಾ ಭಾರತಿ ಭಟ್​ ಸೇರಿದಂತೆ ಹಲವು ಕಿರುತೆರೆ ನಾಯಕಿಯರು ಛಾಯಾಸಿಂಗ್​ ಅಭಿನಯಕ್ಕೆ ವಾವ್​ ವಾವ್​ ಫೈಯರ್​ ಆ್ಯಕ್ಟಿಂಗ್​ ಅಂತಾ ಕಮೆಂಟ್​ ಮಾಡಿದ್ದಾರೆ.

ಎಲ್ಲಾ ಟ್ರೋಲ್​ ಪೇಜ್​ಗಳಲ್ಲೂ ಈ ಸೀನನದ್ದೇ ಮಾತು. ಸೀರಿಯಲ್​ ಅಂದ್ರೆ ಮುಖ ಕಿವುಚುವ ಗಂಡುಮಕ್ಕಳು ಕೂಡ ಈ ಸೀನ್​ಗೆ ಫಿದಾ ಆಗಿದ್ದಾರೆ. ನಮ್ಮ ತಾಯಿ ನೆನಪಾಗುತ್ತಾರೆ, ನನ್ನ ಅಕ್ಕ-ತಂಗಿ ನೆನಪಾದ್ರೂ ಅಂತಾ ತಮ್ಮ ಮನಸ್ಸಿನ ವೇದನೆಗಳನ್ನ ಕಮೆಂಟ್​ ಮೂಲಕ ತಿಳಿಸಿದ್ದಾರೆ. ಒಟ್ಟಿನಲ್ಲಿ ವಾಸ್ತವಕ್ಕೆ ಹತ್ತಿರವಾದ ಡೈಲಾಗ್​, ಸರಳ ಸಹಜ ಅಭಿನಯದ ಮೂಲಕ ಅಮೃತಧಾರೆ ಟೀಮ್​ ವೀಕ್ಷಕರಿಗೆ ಹತ್ತಿರವಾಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮತ್ತೆ ಅಭಿಮಾನಿಗಳ ಮನಸ್ಸು ಗೆದ್ದ ‘ಅಮೃತಧಾರೆ’ ಭೂಮಿಕಾ; ನಟಿಯ ಅಭಿನಯಕ್ಕೆ ಭೇಷ್​ ಎಂದ ಫ್ಯಾನ್ಸ್!

https://newsfirstlive.com/wp-content/uploads/2023/06/chaya-1.jpg

Load More