newsfirstkannada.com

ಅಮೃತಧಾರೆ ಅಭಿಮಾನಿಗಳಿಗೆ ಸಿಹಿ ಸುದ್ದಿ; ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಹೊಸ ಪ್ರಯತ್ನ

Share :

03-08-2023

    ಹಾಡಿನ ಒಂದೊಂದು ಸಾಲು ಅರ್ಥಪೂರ್ಣವಾಗಿವೆ ಎಂದ ನೆಟ್ಟಿಗರು

    ಅಮೃತಧಾರೆ ಸೀರಿಯಲ್‌ನ ಎಲ್ಲಾ ಹಾಡು ಬಿಡುಗಡೆ ಮಾಡಿದ ತಂಡ

    ಧಾರಾವಾಹಿ ಹಾಡಿನ ಜ್ಯೂಕ್ ಬಾಕ್ಸ್​ ರೀಲಿಸ್ ಮಾಡಿದೆ ಜೀ ವಾಹಿನಿ

ಕನ್ನಡ ಕಿರುತೆರೆಯಲ್ಲಿ ಸದ್ಯ ಬ್ಲಾಕ್ ಬಾಸ್ಟರ್​ ಹಿಟ್ ಪಡೆದುಕೊಂಡಿರೋ ಧಾರಾವಾಹಿ ಅಂದರೆ ಅದು ಅಮೃತಧಾರೆ. ಈ ಧಾರಾವಾಹಿ ಕಥೆಯ ಎಳೆ ಎಲ್ಲಾ ಕನ್ನಡದ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ದಿನ ಕಳೆದಂತೆ ಭೂಮಿಕಾ ಹಾಗೂ ಗೌತಮ್ ದಿವಾನ್ ಪಾತ್ರಗಳು ಜನರಿಗೆ ಅಚ್ಚು ಮೆಚ್ಚಾಗ್ತಿದೆ.

ಸದ್ಯ ಕಿರುತೆರೆಯಲ್ಲೇ ಹೊಸದೊಂದು ಪ್ರಯತ್ನಕ್ಕೆ ಕಾಲಿಟ್ಟಿದ್ದಾರೆ ಜೀ ವಾಹಿನಿ ತಂಡ. ಈಗ ಸಿನಿಮಾ ಹಾಡುಗಳಲ್ಲದೆ ಧಾರಾವಾಹಿಗಳ ಹಾಡುಗಳು, ಟೈಟಲ್ ಟ್ರ್ಯಾಕ್​ಗಳು ಜನರ ಮನಸ್ಸನ್ನ ತಲುಪುತ್ತಿವೆ. ಮುಂಚೆ ಇಂದಲೂ ಕೂಡ ಧಾರಾವಾಹಿಗಳ ಟ್ರ್ಯಾಕ್ ಸಾಂಗ್​ನ ಬಿಡುಗಡೆ ಮಾಡಿ ವೀಕ್ಷಕರನ್ನ ತಲುಪಿಸುವಲ್ಲಿ ಕಿರುತೆರೆ ಇಂದಿಗೂ ಯಶಸ್ಸನ್ನ ಕಾಣ್ತಾ ಬಂದಿದೆ. ಆ ಸೀರಿಯಲ್​ಗೆ ತಕ್ಕ ಹಾಗೆ ಟೈಟಲ್ ಕಾರ್ಡ್, ಟ್ರ್ಯಾಕ್ ಸಾಂಗ್ ಹಾಗೂ ಹಾಡುಗಳು ರೀಲಿಸ್ ಮಾಡುತ್ತಾರೆ.

ಮೊಟ್ಟ ಮೊದಲನೇ ಬಾರಿಗೆ ವೀಕ್ಷಕರು ಅಮೃತಧಾರೆ ಧಾರಾವಾಹಿಯ ಹಾಡುಗಳನ್ನ ಮೆಚ್ಚಿದ ಕಾರಣ ಈ ಧಾರಾವಾಹಿಯ ಹಾಡಿನ ಜ್ಯೂಕ್ ಬಾಕ್ಸ್​ನ ರಿಲೀಸ್ ಮಾಡಿದೆ ಜೀ ವಾಹಿನಿ. ಸಿನಿಮಾ ರೀತಿಯೇ ಈ ಧಾರಾವಾಹಿಗೂ ಜ್ಯೂಕ್‌ ಬಾಕ್ಸ್​ನ ನೀಡಿದ್ದಾರೆ. ಸ್ವಂತ ಸಂಯೋಜನೆ ಮಾಡಿ, ಹಾಡುಗಳನ್ನ ಬರೆದು ಧಾರಾವಾಹಿಗೆ ಸಂಬಂಧಪಟ್ಟ ಹಾಗೇ ವಿಭಿನ್ನ ರೀತಿಯ 08 ರಿಂದ 09 ಹಾಡುಗಳನ್ನ ಬಿಡುಗಡೆ ಮಾಡಿದೆ ಜೀ ವಾಹಿನಿ ತಂಡ.

ಅಮೃತಧಾರೆ ಧಾರಾವಾಹಿಯ ಹಾಡುಗಳನ್ನ ಸಂಯೋಜಿಸಿರೋದು ಸುನಾದ್ ಗೌತಮ್ ಆದ್ರೆ, ಹಾಡುಗಳನ್ನ ಬರೆದಿದ್ದು ಚೇತನ್ ಸೊಲಗಿ ಹಾಗೂ ಸುಧೀಂದ್ರ ಭಾರದ್ವಾಜ್. ಹಾಡುಗಳಿಗೆ ಧ್ವನಿಯಾಗಿರೋದು ಸರಿಗಮಪ ಖ್ಯಾತಿಯ ಐಶ್ವರ್ಯ ರಂಗರಾಜನ್, ನಿಹಾಲ್ ತಾವ್ರೋ ಹಾಗೂ ರಜತ್ ಹೆಗಡೆ. ಒಟ್ಟಿನಲ್ಲಿ ಮೊಟ್ಟ ಮೊದಲನೇ ಬಾರಿಗೆ ಕಿರುತೆರೆಯಲ್ಲೇ ಈ ಸಾಹಸಕ್ಕೆ ಕೈ ಹಾಕಿರೋದು ಜೀ ವಾಹಿನಿ. ಇನ್ನೂ ಎಲ್ಲಾ ಹಾಡುಗಳು ವೀಕ್ಷಕರಿಗೆ ಇಷ್ಟವಾಗಿದ್ದು ಈ ಕಿರುತೆರೆಯ ಹೊಸತನದ ಪ್ರಯತ್ನಕ್ಕೆ ಎಲ್ಲರೂ ಕೂಡ ಪ್ರಶಂಸೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹಾಡುಗಳು ಧಾರಾವಾಹಿಯಲ್ಲಿ ಸನ್ನಿವೇಶದ ತಕ್ಕಂತೆ ಮೂಡಿ ಬರಲಿದೆ. ಇನ್ನು ಈ ಹಾಡುಗಳನ್ನು ಕೇಳಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ. ಬ್ಯೂಟಿಫುಲ್ ಸಾಹಿತ್ಯ, ಸಂಗೀತ ಅಂತೂ ತುಂಬಾ ಅಂದ್ರೆ ತುಂಬಾ ಇಷ್ಟ ಆಯಿತು. ಈ ಹಾಡಿನ ಒಂದೊಂದು ಸಾಲುಗಳು ಅರ್ಥ ಪೂರ್ಣವಾಗಿವೇ ಎನ್ನುತ್ತಿದ್ದಾರೆ.

‘ಅಮೃತಧಾರೆ’ ಹಾಡುಗಳ ಪಟ್ಟಿ ಇಲ್ಲಿದೆ..
1. ನಾ ಭುವಿಯಂತೆ ಕಾದೆ
2. ಏನೋ ನವಿರಾದ ಭಾವ
3. ನಿನ್ನವರ ನಗುವಲಿ
4. ಒಡನಾಡಿ ಬೇಕಿದೆ
5. ಸನಿಹ ಸೆಳೆದಂತೆ
6. ಬೆಳಗುವ ದೀಪವು
7. ಜೊತೆ ಸಾಗೋ ಕನಸಿದೆ
8. ತನ್ನವರ ಬದುಕಲಿ
9. ಯಾರೊ ಕರೆದಂತೆ ಹೆಸರಾ

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅಮೃತಧಾರೆ ಅಭಿಮಾನಿಗಳಿಗೆ ಸಿಹಿ ಸುದ್ದಿ; ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಹೊಸ ಪ್ರಯತ್ನ

https://newsfirstlive.com/wp-content/uploads/2023/08/amrutha-2.jpg

Load More