newsfirstkannada.com

ಅಮೃತಧಾರೆ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ, ಯಾರಿದು? ಪಾತ್ರದ ಹಿನ್ನೆಲೆ ಗೊತ್ತಾ?

Share :

24-08-2023

  ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ ಗೌತಮ್-ಭೂಮಿಕಾ ಜೋಡಿ

  ಅಣ್ಣನ ಮದುವೆ ಸಂಭ್ರಮಕ್ಕಾಗಿ ಫಾರೀನ್​ನಿಂದ ​ತಮ್ಮ ರಿಟರ್ನ್

  ವರ್ಷಗಳ ನಂತರ ಮತ್ತೆ ಕಿರುತೆರೆ ಕಡೆಗೆ ಮುಖ ಮಾಡಿದ ನಟ

ಕಿರುತೆರೆಯ ಟಾಪ್ ರೇಟೆಡ್ ಧಾರಾವಾಹಿ ಎಂದರೆ ಅದು ಅಮೃತಧಾರೆ. ಈ ಧಾರಾವಾಹಿಯು ತನ್ನ ಕತೆಯಿಂದಾಗಿ ಇಡೀ ಕರುನಾಡ ವೀಕ್ಷಕರ ಮನ ಗೆದ್ದಿದೆ. ಸದ್ಯ ಧಾರಾವಾಹಿಯಲ್ಲಿ ಮದುವೆ ಸಂಭ್ರಮ 2 ಮನೆಯಲ್ಲಿ ಮಡುಗಟ್ಟಿದೆ. ಈ ಮದುವೆ ಸಂಭ್ರಮಕ್ಕೆ ಗೌತಮ್ ದಿವಾನ್ ಮನೆಗೆ ಹೊಸಬರ ಎಂಟ್ರಿ ಆಗಿದೆ. ಗೌತಮ್ ದಿವಾನ್ ಮನೆಯಲ್ಲಿ ಹಾಗೂ ಭೂಮಿ ಮನೆಯಲ್ಲಿ ಇಬ್ಬರ ಮನೆಯಲ್ಲೂ ಎರೆಡೆರಡು ಮದುವೆ ಸಂಭ್ರಮ ಒಟ್ಟೊಟ್ಟಿಗೆ ಆಗುತ್ತಿದೆ.

ಈ ಸಮಯದಲ್ಲಿ ಗೌತಮ್ ಮನೆಗೆ ಗೌತಮ್ ತಮ್ಮ ಪಾರ್ಥನ ಆಗಮನವಾಗಿದೆ. ಹೌದು ಇಷ್ಟು ದಿನ ಫಾರೀಸ್​ನಲ್ಲಿ ತನ್ನ ವಿದ್ಯಾಭ್ಯಾಸವನ್ನ ಮಾಡುತ್ತಿದ್ದ ಗೌತಮ್ ತಮ್ಮ ಪಾರ್ಥ ಈಗ ಅಣ್ಣನ ಮದುವೆ ಸಂಭ್ರಮಕ್ಕಾಗಿ ಫಾರೀನ್​ನಿಂದ ರಿಟರ್ನ್​ ಆಗಿದ್ದಾನೆ.

ಆದರೆ ಈ ಪಾರ್ಥನ ಪಾತ್ರ ಅಂದುಕೊಂಡಷ್ಟು ಸಲಭವಾದ ಪಾತ್ರವಲ್ಲ. ಇತ್ತ ವಿಲನೀಶ್ ಶೇಡ್ ಕೂಡ ಅಲ್ಲಾ ಅತ್ತ ಪೂರ್ತಿ ಪಾಸಿಟಿವ್ ರೋಲ್ ಕೂಡ ಅಲ್ಲಾ. ಈ ರೀತಿಯ ಪಾತ್ರವೊಂದು ಧಾರಾವಾಹಿಗೆ ಮದುವೆ ಸಂದರ್ಭದಲ್ಲಿ ಎಂಟ್ರಿಯಾಗಿರೋದು ವೀಕ್ಷಕರಿಗೆ ಕೂತುಹಲ ತರಿಸಿದೆ. ಅಣ್ಣ ಮನೆಯವರಿಗೋಸ್ಕರ ಈ ಮದುವೆ ಮಾಡಿಕೊಳ್ತಿರೋ ವಿಚಾರ ಪಾರ್ಥನಿಗೆ ಗೊತ್ತಾಗಿದ್ದೆ ಗೊತ್ತಾಗಿದ್ದು ಡೈರೆಕ್ಟ್ ಭೂಮಿಯನ್ನ ಭೇಟಿ ಮಾಡಿ ಈ ಮದುವೆ ಮಾಡಿಕೊಳ್ಳಬೇಡಿ ಅಂತಾ ದಿಢೀರ್​ ಬಾಂಬ್​​ ಹಾಕಿದ್ದಾನೆ. ಈ ಪಾತ್ರದಿಂದ ಧಾರಾವಾಹಿ ಕತೆ ಬದಲಾಗೋದರಲ್ಲಿ ಡೌಟೇ ಇಲ್ಲ.

ಪಾರ್ಥ ಪಾತ್ರವನ್ನ ಕಿರುತೆರೆಯ ನಟ ಕರಣ್​ ಎಂಬುವರು ನಿರ್ವಹಿಸ್ತಾ ಇದ್ದಾರೆ. ಕಿರುತೆರೆಗೆ ಇವರೇನು ಹೊಸ ಬರಲ್ಲ. ಈ ಮುಂಚೆ ಜೀ ವಾಹಿನಿಯಲ್ಲಿ ಟಾಪ್ ರೇಟೆಡ್ ಧಾರಾವಾಹಿಯಾದ ಅರಸಿ ಎಂಬುವ ಸೀರಿಯಲ್​ನಲ್ಲಿ ನಾಯಕ ನಟನಾಗಿ ಸಿದ್ಧಾಂತ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ಈಗ ಮತ್ತೊಮ್ಮೆ ಹಲವಾರು ವರ್ಷಗಳ ನಂತರ ಕಿರುತೆರೆಯ ವೀಕ್ಷಕರ ಮುಂದೆ ವಿಭಿನ್ನ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ ನಟ ಕರಣ್. ಧಾರಾವಾಹಿಯಲ್ಲಿ ಹೊಸ ಪಾತ್ರ ಎಂಟ್ರಿಯಾದ್ರೆ ಮುಗಿತು. ಕತೆಯ ಟ್ರ್ಯಾಕ್ ಕಂಡಿತಾ ಬದಲಾಗುತ್ತೆ ಇನ್ನೂ ಈ ಪಾರ್ಥನ ಪಾತ್ರವು ಯಾವ ರೀತಿ ಟ್ವಿಸ್ಟ್ ಆ್ಯಂಡ್ ಟರ್ನ್ ತರಲಿದೆ ಈ ಸೀರಿಯಲ್​ಗೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತಧಾರೆ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ, ಯಾರಿದು? ಪಾತ್ರದ ಹಿನ್ನೆಲೆ ಗೊತ್ತಾ?

https://newsfirstlive.com/wp-content/uploads/2023/08/amrutha-2-1.jpg

Load More