newsfirstkannada.com

ರಾಷ್ಟ್ರಕವಿ ಕುವೆಂಪು ಹುಟ್ಟಿದ ನಾಡನ್ನ ಉಗ್ರರ ನಾಡಾಗಿಸಲು ಯತ್ನ.. ಅರಾಫತ್ ಅಲಿ ಬಂಧನ ಬಳಿಕ ಹೊರಬಿತ್ತು ಸ್ಫೋಟಕ ಮಾಹಿತಿ

Share :

19-09-2023

    ಕುವೆಂವು ಅವರ ನಾಡದ ತೀರ್ಥಹಳ್ಳಿಗೆ ಕುಖ್ಯಾತಿ ಬರಲು ಶಂಕಿತರ ಯತ್ನ

    ತೀರ್ಥಹಳ್ಳಿ ಬ್ರದರ್ಸ್ ಎಂದು ಹೆಸರಾಗಲು ಯೋಜನೆ ರೂಪಿಸಿದ್ದ ಕಿರಾತಕರು

    ಎನ್‌ಐಎ ವಾಂಟೆಡ್ ಟೆರರಿಸ್ಟ್​ನಿಂದ ಬರುತ್ತಿದ್ದ ಸೂಚನೆಯಂತೆ ಶಂಕಿತರ ಆ್ಯಕ್ಟಿವಿಟೀಸ್​

ರಾಷ್ಟ್ರಕವಿ ಕುವೆಂಪು ಹುಟ್ಟಿದ ತೀರ್ಥಹಳ್ಳಿಯನ್ನ ಉಗ್ರರ ನಾಡಾಗಿಸಬೇಕು ಎಂದುಕೊಂಡಿದ್ದ ನಾಲ್ವರು ಶಂಕಿತ ಉಗ್ರರ ಯೋಚನೆಯೊಂದು ಬಟಾ ಬಯಲಾಗಿದೆ. ಎನ್‌ಐಎ ತನಿಖೆಯ ವೇಳೆ ಈ ಸ್ಫೋಟಕ ರಹಸ್ಯ ಹೊರಬಿದ್ದಿದೆ.

ಅರಾಫತ್ ಅಲಿ ಬಂಧನದ ಬಳಿಕ ಸ್ಳೋಟಕ ಸತ್ಯ ಹೊರಬಿದ್ದಿದ್ದು, ತಾವು ಹಾಕಿಕೊಂಡಿದ್ದ ಪ್ಲಾನ್​ ಬಗ್ಗೆ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ. ಕುವೆಂವು ಅವರ ನಾಡದ ತೀರ್ಥಹಳ್ಳಿಗೆ ತೀರ್ಥಹಳ್ಳಿ ಬ್ರದರ್ಸ್ ಎಂದು ಹೆಸರಾಗಬೇಕು ಎಂದುಕೊಂಡಿದ್ದನು. ಇದನ್ನ ಅರಾಫತ್ ಅಲಿ ಪದೇ ಪದೇ ಮಾಜ್ ಮುನೀರ್, ಹಾಗೂ ಶಾರೀಕ್​ಗೆ ಕಮ್ಯನಿಕೇಟ್ ಮಾಡ್ತಾ ಇದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಎನ್‌ಐ ಎ ವಾಂಟೆಡ್ ಟೆರರಿಸ್ಟ್ ಅಬ್ದುಲ್ ಮತೀನ್ ಎಂಬಾತ ಅರಾಫತ್ ಅಲಿಗೆ ಈ ಸೂಚನೆ ಕೊಡ್ತಾ ಇದ್ದ. ಕಾರಣ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ, ಅಬ್ದುಲ್ ಮತೀನ್ ನಾಲ್ವರು ತೀರ್ಥಹಳ್ಳಿ ಮೂಲದವರಾಗಿದ್ದು, ಪ್ರಖ್ಯಾತಿ ಪಡೆದ ಮಲೆನಾಡು ತೀರ್ಥಹಳ್ಳಿಗೆ ತೀರ್ಥಹಳ್ಳಿ ಬ್ರದರ್ಸ್ ಹೆಸರು ಬರಲು ಇವರು ಸಂಚು ರೂಪಿಸಿದ್ದರು ಎಂಬ ಸಂಗತಿ ಬಯಲಾಗಿದೆ.

ಭಟ್ಕಳದಂತೇ ತೀರ್ಥಹಳ್ಳಿಗೆ ಕುಖ್ಯಾತಿ ಹೆಸರು ಬರಲು ಯತ್ನ

ರಾಜ್ಯದ ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ ಹಾಗೂ ಇಕ್ಬಾಲ್ ರಿಂದ ಭಟ್ಕಳ ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇಂಡಿಯನ್ ಮುಜಾಯಿದ್ದೀನ್ ಎಂಬ ಕುಖ್ಯಾತ ಉಗ್ರ ಸಂಘಟನೆ ಸ್ಥಾಪನೆಯಲ್ಲಿ ಈ ಮೂವರದ್ದು ಪಾತ್ರ ಇತ್ತು. ಅದರಂತೆ ಭಟ್ಕಳದಂತೆ ತೀರ್ಥಹಳ್ಳಿಯ ಹೆಸರು ಉಗ್ರವಾದಕ್ಕೆ ಸೇರ್ಪಡೆಯಾಗಬೇಕು ಎಂದುಕೊಂಡಿದ್ದರು. ಆದರೀಗ ಈ ಸಂಗತಿ ಅರಾಫತ್ ಅಲಿ ಬಂಧನ ವೇಳೆ ಬಾಯಿಬಿಟ್ಟಿದ್ದಾನೆ. ಸದ್ಯ ಮೂವರ ಬಂಧನ ಆಗಿದ್ದು ಅಬ್ದುಲ್ ಮತೀನ್ ಬಂಧನವಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಷ್ಟ್ರಕವಿ ಕುವೆಂಪು ಹುಟ್ಟಿದ ನಾಡನ್ನ ಉಗ್ರರ ನಾಡಾಗಿಸಲು ಯತ್ನ.. ಅರಾಫತ್ ಅಲಿ ಬಂಧನ ಬಳಿಕ ಹೊರಬಿತ್ತು ಸ್ಫೋಟಕ ಮಾಹಿತಿ

https://newsfirstlive.com/wp-content/uploads/2023/09/Arafath-Ali.jpg

Load More