ಬಸ್ಗೆ ಅಡ್ಡನಿಂತು ಗುರಾಯಿಸಿದ ಕಾಡಾನೆ
ರೋಡ್ ಬಿಡೋ ಅಂದ್ರು ಕ್ಯಾರೇ ಮಾಡದ ಗಜರಾಜ
ಕಿಲ.. ಕಿಲ.. ನಾ.. ಬಿಡಕ್ಕಿಲ್ಲ ಎಂದ ಒಂಟಿ ಸಲಗ
ಇತ್ತೀಚಿಗಂತೂ ಕಾಡನ್ನ ತೊರೆದು ನಾಡಿಗೆ ಬರ್ತಿರೋ ಪ್ರಾಣಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಅದರಲ್ಲೂ ನಾಡಿಗೆ ಬಂದ್ರೂ, ಕಾಡಿನಲ್ಲಿ ದರ್ಬಾರ್ ಮಾಡೋ ರೀತಿಯೇ ನಾಡಲ್ಲೂ ದರ್ಬಾರ್ ಮಾಡ್ತಿವೆ. ನಾಡಲ್ಲಿರೋ ಜನರಿಗೆ ಭಯ ಹುಟ್ಟಿಸ್ತಿವೆ. ಇಲ್ಲೂ ಒಂದು ಕಾಡಾನೆ ಹಾಗೇ ಮಾಡಿದೆ. ರಸ್ತೆಯಲ್ಲಿ ಬಂದು ನಿಂತು ನಾನೇ ಈ ರಸ್ತೆಗೆ ಕಿಂಗ್ ಅಂತಾ ಬರೋ ಗಾಡಿಗಳನ್ನ ಅಡ್ಡಗಟ್ಟಿ ನಿಂತ್ಬಿಟ್ಟಿದೆ. ಯಾರನ್ನೂ ಮುಂದೆ ಹೋಗೋಕೆ ಬಿಡ್ತಿಲ್ಲ. ನನ್ನನ್ನ ದಾಟಿ ಅದ್ಹೆಂಗೆ ಮುಂದೆ ಹೋಗ್ತೀರಾ ನೋಡ್ತೀನಿ ಅಂತಾ ಅಡ್ಡಗಾಲು ಹಾಕಿ ನಿಂತ್ಬಿಟ್ಟಿದೆ.
ಈ ರೀತಿ ಒಂಟಿಸಲಗ ರಸ್ತೆಲೀ ದರ್ಬಾರ್ ಮಾಡ್ತಿರೋದು ಕೇರಳದ ಶೋಲಯಾರ್ ಬಳಿ. ಒಂಟಿಸಲಗ ಕೆಎಸ್ಆರ್ಟಿಸಿ ಬಸ್ ಸೇರಿದಂತೆ ಅನೇಕ ಬಸ್ಗಳನ್ನ ತಡೆದಿದೆ. ಇನ್ನೂ ಅಚ್ಚರಿ ಎಂಬಂತೆ ಆನೆಯೊಂದಿಗೆ ಚಾಲಕ ಮಾತನಾಡಿದ್ದು, ದಾರಿ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾನೆ. ಆಗಲೂ ಆನೆ ಜಗ್ಗದೇ ಇದ್ದಾಗ ಒಂದಷ್ಟು ಬಾರಿ ಆನೆಯನ್ನ ಗದರಿಸಿದ್ದಾನೆ. ಆದ್ರೂ ಕೂಡ ಆನೆ ಮಾತ್ರ ದಾರಿ ಬಿಟ್ಟುಕೊಟ್ಟಿಲ್ಲ. ಸ್ವಲ್ಪ ಸಮಯ ಕಳೆದ ಮೇಲೆ, ಇದಕ್ಕೂ ತನಗೂ ಸಂಬಂಧವೇ ಇಲ್ಲ ಅನ್ನೋ ಹಾಗೆ, ಅಲ್ಲೇನೂ ನಡೆದೇ ಇಲ್ಲವೇನೋ ಅನ್ನೋ ಹಾಗೆ, ಆನೆ ತನ್ನ ಪಾಡಿಗೆ ತಾನು ಹೊರಟೋಗಿದೆ. ಅದೃಷ್ಟವಶಾತ್ ಆನೆ ಯಾರ ಮೇಲೂ ದಾಳಿ ನಡೆಸಿಲ್ಲ.
ಒಂಟಿಸಲಗವೊಂದು ರಸ್ತೆಯಲ್ಲಿ ನಿಂತುಕೊಂಡು ವಾಹನಗಳನ್ನು ಅಡ್ಡಗಟ್ಟಿದ ದೃಶ್ಯ ಕೇರಳದ ಶೋಲಯಾರ್ ಬಳಿ ನಡೆದಿದೆ.#elephant #wildlife #Kerala pic.twitter.com/Tu0iqNzSN0
— NewsFirst Kannada (@NewsFirstKan) August 8, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ