newsfirstkannada.com

ನಿವೃತ್ತ ಏರ್​ಫೋರ್ಸ್ ಸಿಬ್ಬಂದಿ​ ಮನೆಗೆ ನುಗ್ಗಿ ಐವರು ದುಷ್ಕರ್ಮಿಗಳಿಂದ ಹಲ್ಲೆ; ಪ್ರಕರಣ ದಾಖಲು

Share :

01-08-2023

    ಮನೆಯಲ್ಲಿದ್ದ ಯುವತಿ ಮೇಲೂ ದೌರ್ಜನ್ಯದ ಆರೋಪ

    ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸ್ ದಾಖಲು

    ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಹಲ್ಲೆ

ಬೆಂಗಳೂರು: ನಿವೇಶನ ವಿಚಾರಕ್ಕೆ ನಿವೃತ್ತ ಏರ್​ಫೋರ್ಸ್ ಸಿಬ್ಬಂದಿ ಅಭಿಷೇಕ್ ಕುಮಾರ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಬಿ.ದಯಾನಂದರನ್ನು ಭೇಟಿಯಾಗಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ನಗರದ ಕಾಡುಗೋಡಿಯ ದೊಡ್ಡ ಬನಹಳ್ಳಿಯಲ್ಲಿ ನಿವೃತ್ತ ಅಧಿಕಾರಿ ಅಭಿಷೇಕ್ ಕುಮಾರ್ ಅವರ ಮನೆ ಇದೆ. ಜುಲೈ 28 ರಂದು ರಾತ್ರಿ ಐವರು ದುಷ್ಕರ್ಮಿಗಳು ಮನೆಗೆ ನುಗ್ಗಿ ಅಭಿಷೇಕ್ ಕುಮಾರ್, ಕ್ಯಾಪ್ಟನ್ ಧನಂಜಯ್ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಯುವತಿ ಮೇಲೂ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೇ ಪೊಲೀಸ್ ಕಮಿಷನರ್ ಬಿ.ದಯಾನಂದರನ್ನು ಭೇಟಿಯಾಗಿ ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿವೃತ್ತ ಏರ್​ಫೋರ್ಸ್ ಸಿಬ್ಬಂದಿ​ ಮನೆಗೆ ನುಗ್ಗಿ ಐವರು ದುಷ್ಕರ್ಮಿಗಳಿಂದ ಹಲ್ಲೆ; ಪ್ರಕರಣ ದಾಖಲು

https://newsfirstlive.com/wp-content/uploads/2023/07/BNG_IPS_POLICE_DAYANANDA_1.jpg

Load More