newsfirstkannada.com

T20 ವಿಶ್ವಕಪ್‌ ಸೆಮಿ ಫೈನಲ್‌ನತ್ತ ಭಾರತ ದಾಪುಗಾಲು; ಬಾಂಗ್ಲಾ ವಿರುದ್ಧ ಹೇಗಿತ್ತು ರೋಹಿತ್ ಪಡೆ ಅಬ್ಬರ?

Share :

Published June 22, 2024 at 11:29pm

Update June 22, 2024 at 11:36pm

  ಭಾರತದ ಪರ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶನ

  197ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಬೌಲರ್ ಶಾಕ್‌!

  ವಿಶ್ವಕಪ್‌ ನಿರ್ಣಾಯಕ ಪಂದ್ಯದಲ್ಲಿ ಅದ್ಭುತ ಆಲ್‌ರೌಂಡರ್ ಪ್ರದರ್ಶನ

ಟಿ20 ವಿಶ್ವಕಪ್​ನ ಸೂಪರ್ 8ರಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಬರೋಬ್ಬರಿ 50 ರನ್‌ಗಳ ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ರೋಹಿತ್ ಪಡೆ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನತ್ತ ದಾಪುಗಾಲು ಇಟ್ಟಿದೆ.

ಇದನ್ನೂ ಓದಿ: ಕಷ್ಟದ ಕಾಲದಲ್ಲೂ ಸೆಲೆಬ್ರಿಟಿಗಳಿಗೆ ಕೈ ಮುಗಿದ ಕಾಟೇರ.. ದರ್ಶನ್ ಆಡಿದ ಒಂದು ಮಾತಿಗೆ ಫ್ಯಾನ್ಸ್ ಹವಾ ಶುರು!

ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂಯಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ವಿಶ್ವಕಪ್ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್‌ಗಿಳಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತ್ತು. ಭಾರತದ ಪರ ಹಾರ್ದಿಕ್ ಪಾಂಡ್ಯ 50 ರನ್ ಸಿಡಿಸಿ ಗಮನ ಸೆಳೆದಿದ್ದರು.

197ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ಭಾರತದ ಬೌಲರ್‌ಗಳು ಬಿಗ್ ಶಾಕ್ ಕೊಟ್ಟರು. ಬ್ಯಾಕ್ ಟು ಬ್ಯಾಕ್‌ ವಿಕೆಟ್‌ಗಳನ್ನು ಕಳೆದುಕೊಂಡ ಬಾಂಗ್ಲಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಕುಲ್‌ದೀಪ್ ಯಾದವ್ 3, ಹರ್ಷದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದು ಬಾಂಗ್ಲಾ ಬ್ಯಾಟ್ಸ್‌ಮನ್‌ಗಳ ಓಟಕ್ಕೆ ಕಡಿವಾಣ ಹಾಕಿದರು.

ಇದನ್ನೂ ಓದಿ: ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು.. 

ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಪ್ರದರ್ಶನ ಹಾಗೂ ಟೀಂ ಇಂಡಿಯಾದ ಉತ್ತಮ ಬೌಲಿಂಗ್ ಅಟ್ಯಾಕ್‌ನಿಂದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 146 ರನ್‌ ಸಿಡಿಸಿ ಸೊಲ್ಲೊಪ್ಪಿಕೊಂಡಿದೆ. ಸೂಪರ್ 8ರ ನಿರ್ಣಾಯಕ ಪಂದ್ಯದಲ್ಲಿ ಭಾರತದ ಬಾಂಗ್ಲಾದೇಶದ ವಿರುದ್ಧ 50 ರನ್‌ಗಳ ಅಂತರದಲ್ಲಿ ಗೆದ್ದು ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

T20 ವಿಶ್ವಕಪ್‌ ಸೆಮಿ ಫೈನಲ್‌ನತ್ತ ಭಾರತ ದಾಪುಗಾಲು; ಬಾಂಗ್ಲಾ ವಿರುದ್ಧ ಹೇಗಿತ್ತು ರೋಹಿತ್ ಪಡೆ ಅಬ್ಬರ?

https://newsfirstlive.com/wp-content/uploads/2024/06/IND-VS-Bangladesh.jpg

Load More