ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಭಾರತ ಪ್ರಜ್ಞಾನ್
ಪ್ರಜ್ಞಾನ್‌ನಿಂದ ಚಂದ್ರನ ಮೇಲೆ ಭಾರತದ ರಾಷ್ಟ್ರ ಲಾಂಛನದ ಚಿತ್ತಾರ
ಸಂಜೆ 5.44ಕ್ಕೆ ನಿಯೋಜಿತ ಲ್ಯಾಂಡಿಂಗ್ ಪ್ರದೇಶಕ್ಕೆ ಲ್ಯಾಂಡರ್ ಮಾಡ್ಯೂಲ್
ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆಯಿಡಲು ಯಾರು ಕೈಯಲ್ಲೂ ಆಗಿಲ್ಲ. ಭಾರತದ ಚಂದ್ರಯಾನ-3 ಮೊದಲ ಬಾರಿ ಚಂದ್ರನ ದಕ್ಷಿಣ ಭಾಗದಲ್ಲಿ ಬರೀ ಹೆಜ್ಜೆಯಲ್ಲ ಮೈಲಿಗಲ್ಲು ಸಾಧಿಸಲು ಹೊರಟಿದೆ. ಚಂದ್ರಯಾನ-3 ಮಿಷನ್‌ನಲ್ಲಿ ವಿಕ್ರಮ್ ಲ್ಯಾಂಡರ್ ಸೇಫ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಎಲ್ಲವೂ ಸುಸೂತ್ರವಾಗಿದೆ ಎಂದು ಹೇಳುತ್ತಿರುವ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಲೋಕದಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದಾರೆ. ಕ್ಷಣ, ಕ್ಷಣದ ಮಾಹಿತಿ ನೀಡುತ್ತಿರುವ ಇಸ್ರೋ ವಿಜ್ಞಾನಿಗಳು ಮತ್ತೊಂದು ರೋಚಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಸೇಫ್ ಲ್ಯಾಂಡಿಂಗ್ ಆದ ಬಳಿಕ ಲ್ಯಾಂಡರ್‌ನಿಂದ ಪ್ರಜ್ಞಾನ್ ರೋವರ್ ಹೊರ ಬರಲಿದೆ. ಲ್ಯಾಂಡರ್‌ನಿಂದ ಕೆಳಗಿಳಿಯುವ ಪ್ರಜ್ಞಾನ್ ರೋವರ್ ಚಂದ್ರನ ಮೇಲೆ ಸಂಚರಿಸಲಿದೆ. ಪ್ರಜ್ಞಾನ್ ರೋವರ್ ಓಡಾಡುವಾಗ ಚಂದ್ರನ ಮೇಲೆ ಭಾರತದ ರಾಷ್ಟ್ರ ಲಾಂಛನದ ಚಿತ್ರ ಮೂಡಲಿದೆ. ಇದರ ಜೊತೆಗೆ ಸಾರನಾಥದ ಅಶೋಕ್ ಚಕ್ರ, ಸಿಂಹದ ಗುರುತು, ಇಸ್ರೋ ಚಿಹ್ನೆಯನ್ನು ಓಡುವ ಹಾದಿಯುದ್ದಕ್ಕೂ ಮೂಡಿಸಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಹೆಜ್ಜೆ ಇಡುತ್ತಿರುವ ಭಾರತ ಪ್ರಜ್ಞಾನ್ ರೋವರ್‌ನ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಚಂದ್ರನ ಮೇಲೆ ಭಾರತದ ರಾಷ್ಟ್ರ ಲಾಂಛನ, ಅಶೋಕ್ ಚಕ್ರ, ಸಿಂಹದ ಗುರುತು ಮೂಡಿಸುತ್ತಿರುವುದು ನಿಜಕ್ಕೂ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮೆಯ ವಿಚಾರ.
ಇದನ್ನೂ ಓದಿ: ಕುತೂಹಲದಿಂದ ಕೂಡಿದೆ 15 ನಿಮಿಷ! ಈ 4 ಹಂತಗಳನ್ನು ಪೂರೈಸಿದರೆ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಗ್ಯಾರಂಟಿ
ಇನ್ನು, ವಿಕ್ರಮ್ ಲ್ಯಾಂಡರ್‌ನ ಸೇಫ್ ಲ್ಯಾಂಡಿಂಗ್‌ಗೆ ಇಸ್ರೋ ವಿಜ್ಞಾನಿಗಳು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ. ಇಂದು ಸಂಜೆ 5.44ಕ್ಕೆ ನಿಯೋಜಿತ ಲ್ಯಾಂಡಿಂಗ್ ಪ್ರದೇಶಕ್ಕೆ ಲ್ಯಾಂಡರ್ ಮಾಡ್ಯೂಲ್ ಬರಲಿದೆ. ಆಟೋಮ್ಯಾಟಿಕ್ ಲ್ಯಾಂಡಿಂಗ್ ಸಿಕ್ವೇನ್ಸ್ ಕಮ್ಯಾಂಡ್ ಬಂದ ಬಳಿಕ ಲ್ಯಾಂಡರ್ ಮಾಡ್ಯೂಲ್ ಚಟುವಟಿಕೆಯಿಂದ ಪವರ್ ಡೀಸೆಂಟ್ ಲ್ಯಾಂಡಿಂಗ್ ಆಗಲಿದೆ. ಆ ಬಳಿಕ ಮಿಷನ್ ಅಪರೇಷನ್ ತಂಡದಿಂದ ಸಿಕ್ವೇನ್ಸಿಯಲ್ ಕಾರ್ಯಾಚರಣೆ ಕಮ್ಯಾಂಡ್‌ಗೆ ಖಚಿತತೆ ನೀಡಲಾಗುತ್ತೆ. ಚಂದ್ರನ ನಿಯೋಜಿತ ಜಾಗಕ್ಕೆ ಲ್ಯಾಂಡರ್ ಮಾಡ್ಯೂಲ್ ಬರಲು ಕಾಯುತ್ತಿದ್ದೇವೆ ಎಂದು ಇಸ್ರೋ ಮಾಹಿತಿ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ