newsfirstkannada.com

ಚೆಸ್‌ ವಿಶ್ವಕಪ್ ಸೋತ ಪ್ರಜ್ಞಾನಂದಗೆ ಆನಂದ್ ಮಹಿಂದ್ರಾ ಬಂಪರ್ ಬಹುಮಾನ ಘೋಷಣೆ; ಏನದು?

Share :

28-08-2023

    ಫೈನಲ್ ಟೈ ಬ್ರೇಕರ್​ ಸ್ಪರ್ಧೆಯಲ್ಲಿ ಎಡವಿದ್ದ ಪ್ರಜ್ಞಾನಂದ ರನ್ನರ್‌ ಅಪ್

    ಪ್ರಜ್ಞಾನಂದನ ತಾಯಿ ಪ್ರೋತ್ಸಾಹಕ್ಕೆ ಆನಂದ್ ಮಹೀಂದ್ರಾ ಮೆಚ್ಚುಗೆ

    ಮಕ್ಕಳನ್ನು ಆನ್‌ಲೈನ್‌ ಗೇಮ್‌ನಿಂದ ದೂರ ಇಟ್ಟು ಪ್ರೋತ್ಸಾಹಿಸಲು ಕರೆ

ಚೆಸ್‌ ವಿಶ್ವಕಪ್ ಹಣಾಹಣಿಯಲ್ಲಿ ಭಾರತದ ಪ್ರಜ್ಞಾನಂದನಿಗೆ ಚಾಂಪಿಯನ್ ಪಟ್ಟ ಜಸ್ಟ್ ಮಿಸ್ ಆಗಿದೆ. ಫೈನಲ್ ಟೈ ಬ್ರೇಕರ್​ ಸ್ಪರ್ಧೆಯಲ್ಲಿ ಪ್ರಜ್ಞಾನಂದ ಎಡವಿದ್ದು, ವಿರೋಚಿತ ಸೋಲು ಅನುಭವಿಸಿದ್ದಾರೆ. ಚದುರಂಗದ ವಿಶ್ವಕಪ್‌ನಲ್ಲಿ ಸೋತಿದ್ದರೂ 18 ವರ್ಷದ ಈ ಚತುರ ಇಡೀ ಭಾರತದ ಹೃದಯ ಗೆದ್ದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಜ್ಞಾನಂದನಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ಬಾರಿ ಸೋತರೂ ಮುಂದಿನ ಬಾರಿ ವಿಶ್ವದಾಖಲೆಯನ್ನು ನಿರ್ಮಿಸಲಿ ಎಂದು ಹಾರೈಸಲಾಗುತ್ತಿದೆ.

ಇದನ್ನೂ ಓದಿ: Chess World Cup: ಅಕ್ಕನ ಜತೆ ಚೆಸ್​ ಆಡ್ತಿದ್ದ, ಅಮ್ಮನ ಪ್ರೀತಿಯಿಂದ ಚಾಂಪಿಯನ್ ಆದ​; ಯಾರು ಈ ಪೋರ ಪ್ರಜ್ಞಾನಂದ?

ಪ್ರಜ್ಞಾನಂದನ ಈ ಕೀರ್ತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ. ಪ್ರೀತಿಯ ಅಮ್ಮನ ಜೊತೆ ಇರುವ ಪ್ರಜ್ಞಾನಂದನ ಸರಳತೆ ಬಹಳಷ್ಟು ಜನರಿಗೆ ಇಷ್ಟವಾಗಿದೆ. ತಾಯಿಯ ಜೊತೆ ಪ್ರಜ್ಞಾನಂದ ಹೊಂದಿರುವ ಬಾಂಧವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಪ್ರಜ್ಞಾನಂದನ ಈ ಸರಳತೆ ಹಾಗೂ ಬಾಂಧವ್ಯಕ್ಕೆ ಮಾರು ಹೋಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ Xನಲ್ಲಿ ಗುಣಗಾನ ಮಾಡಿರುವ ಆನಂದ್ ಮಹೀಂದ್ರಾ ಅವರು ಪ್ರಜ್ಞಾನಂದನ ಪೋಷಕರಿಗೆ ಒಂದು ಎಲೆಕ್ಟ್ರಿಕ್ ಕಾರನ್ನು ಗಿಫ್ಟ್ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.

ನಾನು ನಿಮ್ಮ ಹಾಗೂ ನಿಮ್ಮ ತಾಯಿಯ ಬಾಂಧವ್ಯವನ್ನು ಅಭಿನಂದಿಸುತ್ತೇನೆ. ಇದರ ಜೊತೆಗೆ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸೋದು ಬಹಳ ಮುಖ್ಯ. ನಿಮ್ಮ ಹಾಗೆ ಹಲವು ಪೋಷಕರು ತಮ್ಮ ಮಕ್ಕಳನ್ನು ಆನ್‌ಲೈನ್‌ ಗೇಮ್‌ನಿಂದ ದೂರ ಇಡಬೇಕು. ಗೇಮ್ ಆಡುವ ಬದಲು ಚೆಸ್ ಆಟ ಆಡಲು ಪ್ರೋತ್ಸಾಹಿಸಬೇಕು. ಈ ಮೂಲಕ ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣವಾಗಬೇಕು. ಈ ಉದ್ದೇಶದಿಂದಲೇ ನಾನು ಪ್ರಜ್ಞಾನಂದ ಪೋಷಕರಿಗೆ ಮಹಿಂದ್ರಾ XUV4OO EV ಕಾರನ್ನು ಗಿಫ್ಟ್ ಆಗಿ ಕೊಡುತ್ತೇನೆ ಎಂದು ಆನಂದ್ ಮಹೀಂದ್ರಾ ಅವರು ಬರೆದುಕೊಂಡಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಕುತೂಹಲಕಾರಿ ವಿಚಾರಗಳಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವು ಅಚ್ಚರಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಬಾರಿ ಪ್ರಜ್ಞಾನಂದ ಪೋಷಕರ ಸಾಧನೆಯನ್ನು ಮೆಚ್ಚಿ ಬಹುಮಾನ ಘೋಷಣೆ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರು ಗಿಫ್ಟ್ ಘೋಷಣೆ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಗಮನ ಸೆಳೆದಿದೆ. ಸಾವಿರಾರು ಜನ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡುತ್ತಾ ಆನಂದ್ ಮಹೀಂದ್ರಾ ಅವರನ್ನು ಅಭಿನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೆಸ್‌ ವಿಶ್ವಕಪ್ ಸೋತ ಪ್ರಜ್ಞಾನಂದಗೆ ಆನಂದ್ ಮಹಿಂದ್ರಾ ಬಂಪರ್ ಬಹುಮಾನ ಘೋಷಣೆ; ಏನದು?

https://newsfirstlive.com/wp-content/uploads/2023/08/Anand-Mahindra-Pragnanda.jpg

Load More