newsfirstkannada.com

‘ಬಡ ದೇಶ ಭಾರತ ಚಂದ್ರಯಾನಕ್ಕೆ ಇಷ್ಟು ಖರ್ಚು ಮಾಡಬೇಕೆ’- BBC ಆ್ಯಂಕರ್ ವ್ಯಂಗ್ಯಕ್ಕೆ ಆನಂದ್ ಮಹೀಂದ್ರಾ ಹೇಳಿದ್ದೇನು?

Share :

24-08-2023

    ಬಿಬಿಸಿ ಆ್ಯಂಕರ್ ಪ್ರಶ್ನೆಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ

    ಚಂದ್ರಯಾನಕ್ಕೆ ಕೋಟಿ, ಕೋಟಿ ರೂಪಾಯಿ ಖರ್ಚು ಮಾಡಬೇಕೆ?

    ಬಡತನದ ಬಗ್ಗೆ ಮಾತನಾಡಿದ್ದಕ್ಕೆ ಆನಂದ್ ಮಹೀಂದ್ರಾ ತಿರುಗೇಟು

ಚಂದ್ರನ ಮೇಲೆ ಭಾರತ ತ್ರಿವಿಕ್ರಮನಾಗಿ ಹೊರ ಹೊಮ್ಮಿದೆ. ಚಂದ್ರಯಾನ-3 ಮಿಷನ್‌ ಸಕ್ಸಸ್ ಆಗಿದ್ದು ಪ್ರಜ್ಞಾನ್ ರೋವರ್ ತನ್ನ ಅಧ್ಯಯನ ಆರಂಭಿಸಿದೆ. ಇಸ್ರೋ ವಿಜ್ಞಾನಿಗಳ ಈ ಮೈಲಿಗಲ್ಲನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಅಮೆರಿಕಾ, ರಷ್ಯಾ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಇಸ್ರೋ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿವೆ. ಇಸ್ರೋ ಸಾಧನೆಯನ್ನು ಎಲ್ಲರೂ ಹೊಗಳುತ್ತಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಬಿಬಿಸಿ ಆ್ಯಂಕರ್ ಮತನಾಡಿರೋ ಹಳೇ ವಿಡಿಯೋ ವೈರಲ್ ಆಗಿದೆ. ಈ ಆ್ಯಂಕರ್ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದು, ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಖಡಕ್ ತಿರುಗೇಟು ನೀಡಿದ್ದಾರೆ.

ಚಂದ್ರಯಾನ-3 ಸಕ್ಸಸ್ ಬಳಿಕ ಬಿಬಿಸಿ ಆ್ಯಂಕರ್ ಭಾರತದ ಬಗ್ಗೆ ಮಾತನಾಡಿರೋ ಹಳೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಬಿಬಿಸಿ ಆ್ಯಂಕರ್, ಭಾರತ ದೇಶ ಬಡತನ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲು ಇಷ್ಟೊಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಬಿಬಿಸಿ ಆ್ಯಂಕರ್ ಕೇಳಿರೋ ಈ ಪ್ರಶ್ನೆ ಭಾರತೀಯರನ್ನು ಕೆರಳಿಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಭಾರತದ ಬಗ್ಗೆ ಬಿಬಿಸಿ ಆ್ಯಂಕರ್ ಮಾತನಾಡಿರೋದಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ತಿರುಗೇಟು ಕೊಟ್ಟಿದ್ದಾರೆ. X ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿರುವ ಆನಂದ್ ಮಹೀಂದ್ರಾ ಅವರು, ನಿಜವಾಗಿಯೂ?? ದಶಕಗಳ ಕಾಲ ದಬ್ಬಾಳಿಕೆ ಮಾಡಿದ ವಸಾಹತುಶಾಹಿ ಆಳ್ವಿಕೆಯ ಪರಿಣಾಮದಿಂದಾಗಿ ನಮ್ಮ ದೇಶದ ಅಪಾರ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಯಿತು. ಇದರಿಂದಾಗಿ ಭಾರತ ಬಡತನದಲ್ಲಿತ್ತು. ನಾವು ದೋಚಲಾದ ಅತ್ಯಮೂಲ್ಯ ಆಸ್ತಿ ಕೊಹಿನೂರ್ ವಜ್ರವಲ್ಲ ಎಂದಿದ್ದಾರೆ.

ಇನ್ನು, ನಮ್ಮ ಹೆಮ್ಮೆ ಮತ್ತು ನಮ್ಮ ಸ್ವಂತ ಸಾಮರ್ಥ್ಯಗಳೇ ನಮ್ಮ ನಂಬಿಕೆ. ವಸಾಹತುಶಾಹಿಯ ಗುರಿ ಏನಂದ್ರೆ ತನ್ನ ಬಲಿಪಶುಗಳಿಗೆ ಅವರ ಕೀಳರಿಮೆಯನ್ನು ಮನವರಿಕೆ ಮಾಡುವುದು. ಅದಕ್ಕಾಗಿಯೇ ಶೌಚಾಲಯಗಳು ಮತ್ತು ಬಾಹ್ಯಾಕಾಶ ಪರಿಶೋಧನೆ ಎರಡರಲ್ಲೂ ಹೂಡಿಕೆ ಮಾಡುವುದು ವಿರೋಧಾಭಾಸವಲ್ಲ. ಚಂದ್ರಯಾನ ಮಾಡುವುದರಿಂದ ನಮಗೆ ಏನು ಲಾಭ ಎಂದರೆ ಅದು ನಮ್ಮ ಹೆಮ್ಮೆ. ಪ್ರಮುಖವಾಗಿ ಅದು ನಮ್ಮ ಆತ್ಮವಿಶ್ವಾಸವನ್ನು ಮರು ಸ್ಥಾಪಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನದ ಮೂಲಕ ಪ್ರಗತಿಯಲ್ಲಿ ನಂಬಿಕೆಯನ್ನು ಸೃಷ್ಟಿಸುತ್ತದೆ. ಇದು ನಮ್ಮನ್ನು ಬಡತನದಿಂದ ಹೊರತರುವ ಆಕಾಂಕ್ಷೆಯನ್ನು ನೀಡುತ್ತದೆ. ಜಗತ್ತಿನಲ್ಲಿ ಅತಿದೊಡ್ಡ ಬಡತನ ಏನೆಂದರೆ ನಂಬಿಕೆ ಇಲ್ಲದಿರುವುದು ಎಂದು ಆನಂದ್ ಮಹೀಂದ್ರಾ ಬಹಳ ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಬಡ ದೇಶ ಭಾರತ ಚಂದ್ರಯಾನಕ್ಕೆ ಇಷ್ಟು ಖರ್ಚು ಮಾಡಬೇಕೆ’- BBC ಆ್ಯಂಕರ್ ವ್ಯಂಗ್ಯಕ್ಕೆ ಆನಂದ್ ಮಹೀಂದ್ರಾ ಹೇಳಿದ್ದೇನು?

https://newsfirstlive.com/wp-content/uploads/2023/08/Anand-Mahindra-On-BBC.jpg

Load More