ಸೋಷಿಯಲ್ ಮೀಡಿಯಾದಲ್ಲಿ ಈ ಬೈಕ್ ಫೋಟೋ ವೈರಲ್
ಅಡುಗೆ ಮನೆ ಸಾಮಾನುಗಳಿಂದಲೇ ಡಿಸೈನ್ ಆದ ಬೈಕ್ ಇದು..!
ಆನಂದ್ ಮಹೀಂದ್ರಾ ಶೇರ್ ಮಾಡಿದ ಫೋಟೋಗೆ ಸಖತ್ ರೆಸ್ಪಾನ್ಸ್
ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ತಮಗಿಷ್ಟವಾದ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ನಿರಂತರ ಅಭ್ಯಾಸ ಮಾಡಿದಲ್ಲಿ ಅವಕಾಶಗಳೇ ನಮ್ಮನ್ನು ಹುಡುಕಿ ಬರಲಿವೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಜೀವನದಲ್ಲಿ ಅವಕಾಶಗಳು ಸಿಗುವುದು ಬಹಳ ಕಡಿಮೆ. ಸಿಕ್ಕಾಗ ಮಾತ್ರ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಪ್ರತಿಭೆಯನ್ನು ಅನಾವರಣ ಮಾಡಲೇಬೇಕು. ಆಗ ಮಾತ್ರ ಹೊಸತನ ಇರಲಿದೆ, ಏನಾದರೂ ಸಾಧಿಸಲು ಸಾಧ್ಯವಾಗಲಿದೆ.
ಪಾತ್ರೆ, ಪಗಡೆ ಹೀಗೆ ಹಲವು ಸಾಮಾನು ಅಡುಗೆ ಮನೆಯಲ್ಲಿ ಮಾತ್ರ ಕಾಣಲು ಸಾಧ್ಯ. ಕಾರಣ ಈ ಉಪಕರಣಗಳಿಂದಲೇ ತಿಂಡಿ ತಯಾರಿಸುವುದು. ಅಡುಗೆ ಮಾಡಲು ಪಾತ್ರೆ, ಊಟ ಬಡಿಸಲು ಸೌಟು, ಅನ್ನ ಹಾಕಿಕೊಳ್ಳಲು ತಟ್ಟೆ, ನೀರು ಕುಡಿಯಲು ಲೋಟ, ತಿನ್ನಲು ಚಮಚ; ಹೀಗೆ ಬಳಕೆಯಾಗುವ ಸಾಮಾನುಗಳಿಂದ ಏನು ಮಾಡಬಹುದು. ಗರಿಷ್ಠ ಎಂದರೆ ಅಡುಗೆ ಮನೆ ಕೆಲಸಕ್ಕೆ ಬಳಸಬಹುದು. ಆದರೆ, ಈ ಸ್ಟೀಲ್ ಸಾಮಾನುಗಳಿಂದಲೇ ಒಂದು ವಿಭಿನ್ನ ಯತ್ನ ನಡೆಸಿರೋ ಘಟನೆಯೊಂದು ನಡೆದಿದೆ. ಅಪ್ರತಿಮ ಕಲಾವಿದನೋರ್ವ ಈ ಸಾಮಾನುಗಳಿಂದಲೇ ಬೈಕ್ವೊಂದನ್ನು ಡಿಸೈನ್ ಮಾಡಿದ್ದಾನೆ. ಇದನ್ನು ಹಂಚಿಕೊಂಡಿದ್ದು ಮತ್ಯಾರು ಅಲ್ಲ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು.
ಈ ಸಂಬಂಧ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ತಟ್ಟೆ, ಲೋಟ, ಚಮಚ, ಟಿಫಿನ್ ಬಾಕ್ಸ್, ಸೌಟು, ಸಣ್ಣಪುಟ್ಟ ಪಾತ್ರಗಳಿಂದ ಡಿಸೈನ್ ಮಾಡಿರೋ ಬೈಕ್ ಫೋಟೋವೊಂದು ಶೇರ್ ಮಾಡಿದ್ದಾರೆ. ಇದಕ್ಕೆ ಆಧುನಿಕ ಹೈಟೆಕ್ ತಾಲಿ ಸೈಕಲ್ ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಭಿನ್ನವಾಗಿ ಕಾಮೆಂಟಿಸಿದ್ದಾರೆ.
An advanced, hi-tech ‘Thalicycle’ 😊 (Some people really let their minds travel on Saturdays) pic.twitter.com/Ov5ffTQg1d
— anand mahindra (@anandmahindra) July 29, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ