newsfirstkannada.com

VIDEO: ಒಂದು ರಾತ್ರಿಗೆ ಬರೋಬ್ಬರಿ ₹41 ಲಕ್ಷ.. ನನಗಂತೂ ಇಲ್ಲಿ ನಿದ್ದೆ ಬರಲ್ಲ ಅಂದಿದ್ದೇಕೆ ಆನಂದ್ ಮಹೀಂದ್ರಾ?

Share :

15-08-2023

    ಇಲ್ಲಿ ನೀವು ಒಂದು ರಾತ್ರಿ ಕಳೆಯಲು 50 ಸಾವಿರ ಡಾಲರ್ ಬೇಕು!

    ಇದು ಜಗತ್ತಿನ ಅತ್ಯಂತ ದುಬಾರಿ ಸಮುದ್ರದೊಳಗಿನ ಹೋಟೆಲ್

    ಮಲಗೋಕೆ ಬೆಡ್, ಡೈನಿಂಗ್ ಟೇಬಲ್, ಸೋಫಾ ಎಲ್ಲವೂ ಇದೆ

ಜಗತ್ತಿನಲ್ಲಿ ಅದೆಷ್ಟು ವಿಚಿತ್ರ ಜಾಗಗಳಿವೆ ಅನ್ನೋದನ್ನ ಯಾರೂ ಊಹಿಸಲು ಸಾಧ್ಯವಿಲ್ಲ. ಮನುಷ್ಯ ತನ್ನ ಐಷಾರಾಮಿ ಬದುಕಿಗೆ ಏನೆಲ್ಲಾ ಮಾಡುತ್ತಾರೆ ಅಂತಾ ಹೇಳುವುದು ಕಷ್ಟ. ಜೀವನದಲ್ಲೊಂದು ಹೊಸ ಅನುಭವ ಪಡೆಯಲು ಕೋಟ್ಯಾಂತರ ರೂಪಾಯಿ ಹಣ ಬೇಕಾದ್ರೂ ನೀರಿನ ತರಹ ಸುರಿಯುತ್ತಾರೆ. ಈ ಜಾಗದ ಕಥೆಯೂ ಅಷ್ಟೇ.

ಇದು ಅಂತಿಂಥ ಹೋಟೆಲ್‌ ಅಲ್ಲ. ಇಲ್ಲಿ ನೀವು ಒಂದು ರಾತ್ರಿ ಕಳೆಯಲು 50 ಸಾವಿರ ಡಾಲರ್ ಅಂದ್ರೆ ಸುಮಾರು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದ್ರೆ ಬರೋಬ್ಬರಿ 41 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಬೇಕು. ಮಹೀಂದ್ರಾ ಗ್ರೂಪ್‌ನ ಆನಂದ್ ಮಹೀಂದ್ರಾ ಅವರು ಈ ಅಂಡರ್‌ವಾಟರ್ ಹೋಟೆಲ್‌ ವಿಡಿಯೋವನ್ನು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಅವರ ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ಶೇರ್ ಮಾಡೋದ್ರ ಜೊತೆಗೆ ಆನಂದ್ ಮಹೀಂದ್ರಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದು ಜಗತ್ತಿನ ಮೊದಲ ಸಮುದ್ರದಾಳದ ಹೋಟೆಲ್ ಆಗಿದೆ. ನಾನು ಇದರಲ್ಲಿ ಒಂದು ರಾತ್ರಿಯನ್ನು ಕಳೆಯಲು ಇಷ್ಟಪಡುವುದಿಲ್ಲ ಎಂದಿದ್ದಾರೆ.

ಇಲ್ಲಿ ವಾರಾಂತ್ಯಕ್ಕೆ ಶಾಂತವಾಗಿ ವಿಶ್ರಾಂತಿ ಪಡೆಯಬಹುದು ಎಂದು ಹೇಳಲಾಗಿದೆ. ಆದರೆ ನನಗಂತೂ ಇಲ್ಲಿ ಒಂದು ರಾತ್ರಿಯನ್ನು ಕಳೆಯಲು ಸಾಧ್ಯವಿಲ್ಲ. ಈ ಗಾಜಿನ ಸೀಲಿಂಗ್ ಬಿರುಕುಗಳನ್ನು ನೋಡುತ್ತಾ ನಾನು ಕಾಲ ಕಳೆಯುತ್ತೇನೆ ಎಂದು ಆನಂದ್ ಮಹೀಂದ್ರಾ ಅವರು ಬರೆದುಕೊಂಡಿದ್ದಾರೆ. ಸದಾ ವಿಭಿನ್ನವಾದ ವಿಡಿಯೋಗಳನ್ನು ಹಂಚಿಕೊಳ್ಳುವ ಆನಂದ್ ಮಹೀಂದ್ರಾ ಈ ಟ್ವೀಟ್ ಹಲವರ ಮೆಚ್ಚುಗೆಗೂ ಪಾತ್ರವಾಗಿದೆ.

ದಿ ಮುರುಕ ಹೋಟೆಲ್‌ನಲ್ಲಿ ಏನೇನಿದೆ?

ಇದು ವಿಶ್ವದ ಮೊದಲ ಅಂಡರ್‌ವಾಟರ್ ಹೋಟೆಲ್. ಇದರ ಹೆಸರು ದಿ ಮುರುಕ. 2018ರ ನವೆಂಬರ್‌ನಲ್ಲಿ ಸಮುದ್ರದಾಳದಲ್ಲಿ ಕಟ್ಟಲಾಗಿದೆ. ಇದು ಮಾಲ್ಡೀವ್ಸ್‌ನ ಐಲ್ಯಾಂಡ್‌ನಲ್ಲಿದೆ. ಈ ಹೋಟೆಲ್‌ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ಇದರಲ್ಲಿ ಇಬ್ಬರು ಇಡೀ ರಾತ್ರಿ ಕಾಲ ಕಳೆಯೋಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಮಲಗೋಕೆ ಬೆಡ್, ಊಟ ಮಾಡೋಕೆ ಡೈನಿಂಗ್ ಟೇಬಲ್, ವಿಶ್ರಾಂತಿ ಪಡೆಯಲು ಸೋಫಾ, ಹೀಗೆ ಮೂಲಭೂತ ಸೌಕರ್ಯಗಳು ಎಲ್ಲವೂ ಇದೆ. ಆದ್ರೆ ಈ ಅಂಡರ್‌ವಾಟರ್ ಹೋಟೆಲ್‌ನಲ್ಲಿ ಒಂದು ರಾತ್ರಿ ಕಳೆಯಲು ಇಷ್ಟಪಡುವವರು ಲಕ್ಷಾಂತರ ರೂಪಾಯಿ ಖರ್ಚು ಮಾಡಲು ರೆಡಿ ಇರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಒಂದು ರಾತ್ರಿಗೆ ಬರೋಬ್ಬರಿ ₹41 ಲಕ್ಷ.. ನನಗಂತೂ ಇಲ್ಲಿ ನಿದ್ದೆ ಬರಲ್ಲ ಅಂದಿದ್ದೇಕೆ ಆನಂದ್ ಮಹೀಂದ್ರಾ?

https://newsfirstlive.com/wp-content/uploads/2023/08/Anand-Mahindra.jpg

Load More