ಕರ್ನಾಟಕ ರಾಜಕಾರಣದಲ್ಲಿ ‘ಆಪರೇಷನ್ ಹಸ್ತ’ ಜೋರು
ಮತ್ತೊಬ್ಬ ನಾಯಕನ ಘರ್ವಾಪ್ಸಿಗೆ ಶಿವಕುಮಾರ್ ಪ್ಲಾನ್
ಬಿಜೆಪಿಗೆ ಶುರುವಾಗಿದೆ ಲೋಕಸಭೆ ಚುನಾವಣೆ ಭಯ
ಬೆಂಗಳೂರು: ಮಾಜಿ ಸಚಿವ ಆನಂದ್ ಸಿಂಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಸಾರ್ವತ್ರಿಕ ಚುನಾವಣಾ ನಂತ್ರ ಬಿಜೆಪಿಯಲ್ಲಿದ್ರೂ ಆನಂದ್ ಸಿಂಗ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಡಿ.ಕೆ ಶಿವಕುಮಾರ್ ಆಹ್ವಾನ ನಂತರ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಭರವಸೆ ನೀಡದೆ, ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ತೊರೆದು, ಮಾತೃಪಕ್ಷಕ್ಕೆ ಮರಳ್ತಾರಾ ಎಂಬ ಕುತೂಹಲ ಮೂಡಿದೆ.
ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್ ಹಸ್ತ’ದ ಬಗ್ಗೆ ಜೋರಾಗಿ ಕೇಳಿಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ತೊರೆದು ಹೋಗಿದ್ದ ಎಸ್ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್ಗೆ ಮರಳುತ್ತಾರೆ ಎನ್ನಲಾಗಿದೆ. ಇದರ ಜೊತೆ ಬಿಜೆಪಿ ರೇಣುಕಾಚಾರ್ಯಗೂ ಕಾಂಗ್ರೆಸ್ ಕಾಳು ಹಾಕಿದೆ ಎಂದು ಹೇಳಲಾಗಿದೆ. ಇದೀಗ ಮಾಜಿ ಸಚಿವ ಆನಂದ್ ಸಿಂಗ್ ಹೆಸರು ಕೇಳಿಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ