newsfirstkannada.com

ಅಬ್ಬಬ್ಬಾ.. ಅನಂತ್ ಅಂಬಾನಿ ಮದುವೆ ಆಮಂತ್ರಣದಲ್ಲಿ ಬೆಳ್ಳಿ ಕೃಷ್ಣ, ಗಣಪನ ವಿಗ್ರಹ; ಇನ್ನೂ ಏನೇನಿದೆ ಗೊತ್ತಾ?

Share :

Published June 27, 2024 at 3:57pm

Update June 27, 2024 at 3:58pm

  ಸಿಎಂ ಸಿದ್ದರಾಮಯ್ಯಗೂ ಬಂತೂ ಅಂಬಾನಿ ಕುಟುಂಬದ ಮದುವೆ ಆಮಂತ್ರಣ

  ಜುಲೈ 12ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅನಂತ್​ ಅಂಬಾನಿ, ರಾಧಿಕಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ ಅನಂತ್​​, ರಾಧಿಕಾ ಮದುವೆ ಆಮಂತ್ರಣ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ. ಜುಲೈ 12ರಂದು ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನೂ ಮದುವೆ ಹತ್ತಿರವಾಗುತ್ತಿದ್ದಂತೆ ಸಾಕಷ್ಟೂ ಜನರಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ಅನಂತ್​​ ಅಂಬಾನಿಯ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್; ಏನೆಲ್ಲಾ ವಿಶೇಷತೆ ಇರಲಿದೆ?

ಮಾರ್ಚ್​ 1 ರಿಂದ 3 ದಿನಗಳ ಕಾಲ ಗುಜರಾತ್​ನ ಜಾಮ್​ನಗರದಲ್ಲಿ ಅದ್ಧೂರಿಯಾಗಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳನ್ನ ಆಯೋಜಿಸಲಾಗಿತ್ತು. ಇದಾದ ಬಳಿಕ ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ ಜೂ.1ರಂದು 2ನೇ ಪ್ರಿ-ವೆಡ್ಡಿಂಗ್ ಜರುಗಿತ್ತು. ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿರುವ ಜಿಯೋ ವರ್ಲ್ಡ್ ಕನ್ಷೆಷನ್ ಸೆಂಟರ್​ನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಹಿಂದೂ ವೈದಿಕ ಸಂಪ್ರದಾಯದ ಪ್ರಕಾರ ನಡೆಯುವ ವಿವಾಹ ಸಮಾರಂಭ ಇದಾಗಿದೆ. ಮುಂದಿನ ತಿಂಗಳು ಜುಲೈ 12ರಂದು ಶುಭ ವಿವಾಹ ಸಮಾರಂಭ ನಡೆಯಲಿದ್ದು, 13 ರಂದು ಶುಭ ಆಶೀರ್ವಾದ ಸಮಾರಂಭ ಜರುಗಲಿದೆ. ಮತ್ತು 14ರಂದು ವಿವಾಹ ಆರತಕ್ಷತೆಯ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಭಾರತದ ಸಂಪ್ರದಾಯಿಕ ಡ್ರೆಸ್ ಕೋಡ್​​ನಲ್ಲಿ ಬರುವಂತೆ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. 2ನೇ ದಿನ ಇಂಡಿಯನ್ ಫಾರ್ಮಾಲ್​ ಡ್ರೆಸ್​ನಲ್ಲಿ ಬರುವಂತೆ ಅತಿಥಿಗಳಿಗೆ ಆಹ್ವಾನ ಕೋರಲಾಗಿದೆ.

View this post on Instagram

A post shared by Varinder Chawla (@varindertchawla)

ಅನಂತ್ ಮತ್ತು ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಬಣ್ಣದ ಪೆಟ್ಟಿಗೆಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಂಭಾಗದಲ್ಲಿ ಬೆಳ್ಳಿಯ ದೇವಾಲಯವು ಗೋಚರಿಸುತ್ತದೆ. ಈ ದೇವಾಲಯ ತೆಲಂಗಾಣದ ಕರೀಂನಗರದ ಬೆಳ್ಳಿಯ ಫಿಲಿಗ್ರೀಯ ಕಲಾಕೃತಿಯಾಗಿದೆ. ಈ ದೇವಾಲಯವನ್ನು ಹೊರ ತೆಗೆದಾಗ ಅದರ ಕೆಳಗಿನ ಪೆಟ್ಟಿಗೆಯು ತೆರೆಯುತ್ತದೆ. ಮದುವೆ ಕಾರ್ಡ್ ಮತ್ತು ಅತಿಥಿಗಳ ಉಡುಗೊರೆಗಳು ಅದರಲ್ಲಿವೆ.

ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಅತಿಥಿಗಳು ಅನೇಕ ಉಡುಗೊರೆಗಳನ್ನು ಪಡೆದಿದ್ದಾರೆ. ಮದುವೆ ಕಾರ್ಡ್‌ ಒಂದು ಬುಕ್‌ ರೀತಿಯಿದ್ದು, ಕೈ ಯಿಂದ ಬರೆಯಲಾದ ಕೆಲವು ಬರಹಗಳನ್ನ ಒಳಗೊಂಡಿವೆ. ಇದಲ್ಲದೇ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಯೊಂದಿದೆ. ಅದರೊಳಗೆ ಬಟ್ಟೆಯ ತುಂಡಿನ ಮೇಲೆ A & R ಎಂದು ಬರೆಯಲಾಗಿದೆ. ಬೆಳ್ಳಿ ಪೆಟ್ಟಿಗೆಯಲ್ಲಿ 5 ದೇವರ ವಿಗ್ರಹಗಳು, ಕೈಯಿಂದ ಮಾಡಿದ ಚುನರಿ ಮತ್ತು ಸಿಹಿತಿಂಡಿಗಳನ್ನು ಇಡಲಾಗಿದೆ. ಈ ಮದುವೆಯ ಆಮಂತ್ರಣವನ್ನು ಭಾರತೀಯ ಸಂಪ್ರದಾಯದ ಪ್ರಕಾರ ಅಲಂಕರಿಸಲಾಗಿದೆ.

ಇದನ್ನೂ ಓದಿ: ಅನಂತ್ ಅಂಬಾನಿ, ರಾಧಿಕಾ ಮದ್ವೆ ಆಮಂತ್ರಣ ಪತ್ರಿಕೆ ರಿಲೀಸ್‌; ಅತಿಥಿಗಳಿಗೆ ಸ್ಪೆಷಲ್‌ ಡ್ರೆಸ್ ಕೋಡ್‌ ಕಡ್ಡಾಯ 

ಇತ್ತ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೂಡ ಮುಕೇಶ್ ಅಂಬಾನಿಯವರ ಮಗನ ಮದುವೆಯ ಆಮಂತ್ರಣವನ್ನು ನೀಡಲಾಗಿದೆ. ಬಾಕ್ಸ್​ನೊಳಗೆ ಕೃಷ್ಣ, ಗಣೇಶ್ ಸೇರಿದಂತೆ ದೇವರುಗಳ ಮೂರ್ತಿಯ ವಿಗ್ರಹಗಳನ್ನು ಇಟ್ಟು ಮುಖೇಶ್ ಅಂಬಾನಿ ಕುಟುಂಬ ಆಹ್ವಾನ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಅನಂತ್ ಅಂಬಾನಿ ಮದುವೆ ಆಮಂತ್ರಣದಲ್ಲಿ ಬೆಳ್ಳಿ ಕೃಷ್ಣ, ಗಣಪನ ವಿಗ್ರಹ; ಇನ್ನೂ ಏನೇನಿದೆ ಗೊತ್ತಾ?

https://newsfirstlive.com/wp-content/uploads/2024/06/abmani.jpg

Load More