/newsfirstlive-kannada/media/post_attachments/wp-content/uploads/2024/07/Anant-Ambani-1.jpg)
ಅಂಬಾನಿ ಪುತ್ರನ ಮದುವೆ ಜೋರು..ಜೋರು..ಬಲು ಜೋರು. ಹೌದು. ರಿಲಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಅವರ ಮೊದಲ ಮಗ ಅನಂತ್​ ಅಂಬಾನಿ ಮದುವೆ ಬಾರಿ ಅದ್ಧೂರಿಯಾಗಿ ನಡೆದಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಮೂಲಕ ವಿವಾಹ ನೆರವೇರಿದೆ. ದುಬಾರಿ ವಿವಾಹದಲ್ಲಿ ಅನಂತ್ ಅಂಬಾರಿ ಸಖತ್ತಾಗಿ ಮಿಂಚಿದ್ದಾರೆ.
ಅನಂತ್​ ಅಂಬಾನಿಗೆ ಪ್ರಾಣಿಗಳನ್ನು ಸಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಏಕೆ ಸ್ವತಃ ಆನೆಗಳನ್ನು ಅವರು ದತ್ತು ಪಡೆದು ಸಾಕುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ವಿವಾಹದ ಸಂದರ್ಭದಲ್ಲಿ ತನ್ನ ಕೋಟ್​ ಮೇಲೆ ಆನೆಯ ‘ಬ್ರೂಚ್​’ ಧರಿಸಿದ್ದರು. ಇದು 14 ಕೋಟಿ ಬೆಲೆ ಬಾಳುವ ಬ್ರೂಚ್​ ಆಗಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
/newsfirstlive-kannada/media/post_attachments/wp-content/uploads/2024/07/Anant-Ambani.webp)
ಇದನ್ನೂ ಓದಿ: 35 ಸಾವಿರ ರೂಪಾಯಿ ಸಾಲ ತೀರಿಸಲು ಶ್ರೀರಾಮುಲುಗೆ ಅಕ್ಕನ ಮಗಳನ್ನು ಮಾರಿದ ಸಹೋದರಿ!
ಇದಲ್ಲದೆ, ಅನಂತ್​ ಅಂಬಾನಿ ಸಂಗೀತಾ ಕಾರ್ಯಕ್ರಮದ ವೇಳೆ ತಮ್ಮ ಕೋಟ್​ ಮೇಲೆ ಸಿಂಹದ ‘ಬ್ರೂಚ್​’ ಧರಿಸಿದ್ದರು. ಇದು ಕೂಡ ದುಬಾರಿ ಮೌಲ್ಯದಾಗಿತ್ತು. ಇದೀಗ ಮದುವೆ ಸಮಯದಲ್ಲಿ 14 ಕೋಟಿ ಬೆಲೆ ಬಾಳುವ ಆನೆ ‘ಬ್ರೂಚ್’​ ಧರಿಸಿದ್ದರು.​
ಇದನ್ನೂ ಓದಿ: 4,4,4,4,4,4,6,6.. ಗಿಲ್​ ಅರ್ಧ ಶತಕದ ಅದ್ಭುತ ಆಟ.. ಜೈಸ್ವಾಲ್​ ಬೆನ್ನಿಗೆ ನಿಂತ ನಾಯಕ
ಅನಂತ್​ ಅಂಬಾನಿಯವರು ಜಾಮ್​ ನಗರದ ವಂತಾರದಲ್ಲಿ ಗಾಯಗೊಂಡ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ವಿಶ್ವ ದರ್ಜೆಯಲ್ಲಿ ಅವುಗಳಿಗೆ ಟ್ರೀಟ್​ಮೆಂಟ್​ ನೀಡುತ್ತಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಆನೆಗಳನ್ನು ವಂತಾರದಲ್ಲಿ ನೋಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಗಾಯಗೊಂಡ ಚಿರತೆಗಳನ್ನು ಇಲ್ಲಿ ಸಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆಯೇ ವಂತಾರದಲ್ಲಿ ದತ್ತು ಪಡೆದ ಅನೇಕ ಪ್ರಾಣಿಗಳಿವೆ. ಅನಂತ್​ ಅಂಬಾನಿ ಈ ಸ್ಥಳಕ್ಕೆ ಆಗಮಿಸಿದರೆ ಪ್ರಾಣಿಗಳು ಅವರನ್ನು ಕಂಡು ಓಡಿ ಬರುವುದಿದೆ.
ಇದನ್ನೂ ಓದಿ: ನಟನೆಗೆ ಗುಡ್ ಬೈ, ಬ್ಯುಸಿನೆಸ್​ಗೆ ಹಾಯ್​ ಎಂದ ನಟಿ! ಈಗ 830 ಕೋಟಿ ಮೌಲ್ಯದ ಕಂಪನಿ ಒಡತಿ
ಅದ್ಧೂರಿ ಮದುವೆ
ಅನಂತ್​ ಅಂಬಾನಿ ಗೆಳತಿ ರಾಧಿಕಾ ಮರ್ಚಂಟ್​​ ಅವರನ್ನು ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ವಿಶ್ವದ ಪ್ರಮುಖ ನಾಯಕರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಸುಮಾರು 5 ಸಾವಿರ ಕೋಟಿಯಲ್ಲಿ ಅನಂತ್​ ಮತ್ತು ರಾಧಿಕಾ ವಿವಾಹ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್​ ಸ್ಟಾರ್ಸ್​​, ಹಾಲಿವುಡ್​ ಸ್ಟಾರ್ಸ್​​ ಸೇರಿ ಅನೇಕ ಪ್ರಮುಖರು ಇವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us