newsfirstkannada.com

2 ಮಕ್ಕಳ ತಾಯಿ.. ನೋಡೋಕೆ ಸಖತ್​ ಹಾಟ್​​.. ವಿಜಯ್ ದೇವರಕೊಂಡ ಕಂಡ್ರೆ ಉರಿದು ಬೀಳ್ತಾರೆ ಈ ನಟಿ!

Share :

19-07-2023

  ಟಾಲಿವುಡ್​​ನಲ್ಲಿ ಸೆನ್ಸೇಷನ್ ಕ್ರಿಯೇಟ್​​ ಮಾಡಿದ ಅನುಸೂಯ ಭಾರದ್ವಾಜ್

  ನಟ ವಿಜಯ್​​ ದೇವರಕೊಂಡ ಅಂದರೆ ಅನುಸೂಯಗೆ ಕೋಪವೇಕೆ?

  ಪುಷ್ಪದಲ್ಲಿ 'ದಾಕ್ಷಾಯಿಣಿ', ರಂಗಸ್ಥಳದಲ್ಲಿ 'ರಂಗಮ್ಮತ್ತೆ' ಪಾತ್ರದಲ್ಲಿ ನಟನೆ

ಅನುಸೂಯ ತೆಲುಗು ಇಂಡಸ್ಟ್ರಿಯ ಗ್ಲಾಮರ್ ಬೊಂಬೆ. ಯಾವಾಗಲೂ ಹಾಟ್ ಎನಿಸುವ ಆಟೋಂ ಬಾಂಬ್. ಅನುಸೂಯ ಅಂದ ಚೆಂದಕ್ಕೆ ಅಂತಾನೇ ಒಂದಿಷ್ಟು ಫ್ಯಾನ್ಸ್ ಇದ್ದಾರೆ. ಅನುಸೂಯ ಶೇರ್ ಮಾಡೋ ಫೋಟೋಗಳನ್ನ, ವಿಡಿಯೋಗಳನ್ನ ಲೈಕ್ಸ್ ಮಾಡೋಕೆ ಅಂತಾನೇ ಒಂದಿಷ್ಟು ಫಾಲೋವರ್ಸ್ ಇದ್ದಾರೆ. ಸೋ ಅಷ್ಟರ ಮಟ್ಟಿಗೆ ಅನುಸೂಯ ಬ್ರಾಂಡ್ ಎನಿಸಿಕೊಂಡಿದ್ದಾರೆ. ತೆಲುಗು ಕಿರುತೆರೆಯಲ್ಲಿ ಜಬರ್ದಸ್ತ್ ಅಂತ ಶೋವೊಂದು ಬರ್ತಿತ್ತು. ಈ ಶೋನಲ್ಲಿ ಕಂಟೆಸ್ಟೆಂಟ್, ಜಡ್ಜ್ ಹಾಗೂ ಗೆಸ್ಟ್​ಳಿಗಿಂತ ಆ್ಯಂಕರ್ ಆಗಿದ್ದ ಅನುಸೂಯ ಅವರಿಗೆ ಹೆಚ್ಚು ಬೇಡಿಕೆ ಇತ್ತು. ಅನುಸೂಯಯಿಂದನೇ ಈ ಶೋ ರನ್ ಆಗೋ ಲೆವೆಲ್​ಗೆ ಬ್ರಾಂಡ್ ಆಗಿದ್ದರು ಈ ಬ್ಯುಟಿ.

ಕಿರುತೆರೆಗೆ ಗುಡ್ಬೈ.. ಪುಷ್ಪ ರೋಲ್ ಸೂಪರ್ಹಿಟ್!

‘ಜಬರ್ದಸ್ತ್’ ಕಾಮಿಡಿ ಶೋನಿಂದ ನೇಮು ಫೇಮು ಗಳಿಸಿದ ಅನಸೂಯ ಆಮೇಲೆ ಟಿವಿ ಶೋಗಳಿಗೆ ಗುಡ್ ಬೈ ಹೇಳಿ ಸಿನಿಮಾ ಇಂಡಸ್ಟ್ರಿಗೆ ಬಂದರು. ರಾಮ್‌ಚರಣ್‌ ನಟನೆಯ ‘ರಂಗಸ್ಥಳಂ’ ಚಿತ್ರದಲ್ಲಿ ರಂಗಮ್ಮತ್ತ ಪಾತ್ರದಲ್ಲಿ ಮಿಂಚಿದ ಅನುಸೂಯ ಪ್ರೇಕ್ಷಕರನ್ನ ಕ್ಲೀನ್ ಬೋಲ್ಡ್ ಮಾಡಿದ್ರು. ಈ ಸಿನಿಮಾ ನೋಡಿದ್ಮೇಲೆ ತುಂಬಾ ಜನಕ್ಕೆ ರಂಗಮ್ಮತ್ತೆ ಪಾತ್ರ ಮಾಡಿದ್ದು ಅನುಸೂಯ ಅಂತಾ ಗೊತ್ತೇ ಆಗಿರಲಿಲ್ಲ. ಪುಷ್ಪ ಸಿನಿಮಾ ನೋಡಿದವ್ರಿಗಂತೂ ಅನುಸೂಯ ಪಕ್ಕಾ ಸರ್ಪ್ರೈಸ್ ಆಗಿರುತ್ತಾರೆ. ಯಾಕಂದ್ರೆ ಯಾವಾಗಲೂ ಮಿಲ್ಕಿ ಬ್ಯೂಟಿಯಂತೆ ಮಿಂಚುತ್ತಿದ್ದ ಅನುಸೂಯ ಪುಷ್ಪ ಚಿತ್ರದಲ್ಲಿ 90’s ಸ್ಟೈಲ್​​ನ ಮಹಿಳೆಯಾಗಿದ್ದರು. ಪರ್ಫಾಮೆನ್ಸ್ ಸೂಪರ್ ಎನಿಸಿದ್ರು ಈಕೆ ಅನುಸೂಯ ಅಂತ ಶಾಕ್ ಆದವರು ತುಂಬಾ ಜನ. ದಾಕ್ಷಾಯಿಣಿ ಪಾತ್ರದಲ್ಲಿ ಅನುಸೂಯ ಸಖತ್ ಸ್ಪೆಷಲ್ ಆಗಿ ಕಾಣಿಸಿಕೊಂಡಿದ್ದರು.

ದೇವರಕೊಂಡ ಜೊತೆಗಿನ ಜಗಳಕ್ಕೆ ಇತಿಹಾಸನೇ ಇದೆ!

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋ ಅನುಸೂಯ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ತನ್ನದಿದ್ದರೂ ತನ್ನದಲ್ಲದಿದ್ದರೂ ಕಾಮೆಂಟ್ ಮಾಡಿ ನ್ಯೂಸ್ ಕ್ರಿಯೇಟ್ ಮಾಡ್ತಾರೆ. ಇನ್ನು ಅನುಸೂಯ ಅವರ ಪರ್ಸನಲ್ ಫೋಟೋ ಹಾಗೂ ವಿಡಿಯೋಗಳಿಗೆ ಪಾಸಿಟಿವ್ ಕಾಮೆಂಟ್​ಗಿಂತ ನೆಗೆಟಿವ್ ಕಾಮೆಂಟ್​ಗಳೆ ಜಾಸ್ತಿ. ನೆಗೆಟಿವ್ ಕಾಮೆಂಟ್ ಬಂತು ಸುಮ್ಮನೆ ಕುಳಿತುಕೊಳ್ಳೋ ವ್ಯಕ್ತಿತ್ವದ ಅನುಸೂಯ ಅವರದ್ದಲ್ಲ. ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವಂತೆ ಅಲ್ಲಲ್ಲೇ ಟಕ್ಕರ್ ಕೊಡ್ತಾ ಇರ್ತಾರೆ. ಕೆಲವೊಮ್ಮೆ ಟ್ರೋಲರ್ಸ್​​ಳನ್ನ ಉರಿಸುಬೇಕು ಅಂತಾನೇ ಕೆಲವು ಪೋಸ್ಟ್ ಹಾಕ್ತಾರೆ. ಅನುಸೂಯ ಮತ್ತು ವಿಜಯ್ ದೇವರಕೊಂಡ ವಿವಾದಕ್ಕೆ ದೊಡ್ಡ ಇತಿಹಾಸನೇ ಇದೆ. ಒಂದ್ ಟೈಮನಲ್ಲಿ ದೇವರಕೊಂಡ ಮತ್ತು ಅನುಸೂಯ ಒಳ್ಳೆ ಫ್ರೆಂಡ್ಸ್. ಅರ್ಜುನ್ ರೆಡ್ಡಿ ಮಾಡೋಕು ಮುಂಚೆ ಇಬ್ಬರು ಒಬ್ಬರಿಗೊಬ್ಬರು ಸಹಾಯ ಮಾಡ್ಕೊಂಡಿರೋ ಘಟನೆಗಳು ಇವೆ. ಆದ್ರೆ, ಅರ್ಜುನ್ ರೆಡ್ಡಿ ಬಂದ್ಮೇಲೆ ಫ್ರೆಂಡ್ಸ್ ಆಗಿದ್ದ ಇವ್ರು ದುಶ್ಮನಗಳಂತೆ ಬಿಂಬಿತವಾದರು. ಓಪನ್ ಓಪನ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಬೈಯ್ದಾಡಿಕೊಳ್ಳೋಥರ ಆದರು ಅಲ್ಲಿಂದ ಶುರುವಾದ ದೇವರಕೊಂಡ ಮತ್ತು ಅನುಸೂಯ ನಡುವಿನ ಕದನ ಈಗಲೂ ಮುಂದುವರಿದಿದೆ. ಅವಕಾಶ ಸಿಕ್ಕಾಗೆಲ್ಲಾ ವಿಜಯ್ ಫ್ಯಾನ್ಸ್ ತಿರುಗಿ ಬೀಳ್ತಾರೆ. ಆಂಟಿ ಆಂಟಿ ಅಂತ ರೇಗಿಸ್ತಾರೆ.

ಅಷ್ಟಕ್ಕೂ ಅರ್ಜುನ್ ರೆಡ್ಡಿ ಚಿತ್ರದ ವೇಳೆ ಏನಾಯ್ತು ಅಂತ ನೋಡಿದ್ರೆ, ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಪಾತ್ರ ಸಖತ್ ರಗಡ್ ಆಗಿತ್ತು. ಅಷ್ಟೇ ಬೋಲ್ಡ್ ಆಗಿತ್ತು. ರಾ ಕಂಟೆಂಟ್ ಸಿನಿಮಾದಲ್ಲಿ ದೇವರಕೊಂಡನೂ ಅಷ್ಟೇ ರಾ ಆಗಿ ಆ್ಯಕ್ಟ್ ಮಾಡಿದ್ದರು. ಕೆಲವು ಸೀನ್​ಳಲ್ಲಿ ತುಂಬಾ ಇಂಟಿಮೆಟ್ ಆಗಿ ನಟಿಸಿದರು. ಮಹಿಳೆಯನ್ನ ನಿಂದಿಸುವ ಡೈಲಾಗ್ಸ್ ಹೊಡೆದರು. ಇದು ಅನುಸೂಯಗೆ ಒಪ್ಪೋಕೆ ಆಗ್ಲಿಲ್ಲ. ತಾಯಿಯ ಬಗ್ಗೆ ಅವಮಾನಿಸುವಂಥ ಡೈಲಾಗ್ ಚಿತ್ರದಲ್ಲಿ ಇರಿಸಲಾಗಿದೆ, ಅದನ್ನ ಹೀರೋ ಪ್ರಮೋಟ್ ಮಾಡ್ತಾನೆ, ಸಿನಿಮಾದಲ್ಲಿ ಮಾತ್ರವಲ್ಲದೇ ಓಪನ್ ಸ್ಟೇಜ್​​ಗಳಲ್ಲೂ ಪ್ರಮೋಟ್ ಮಾಡ್ತಾನೆ ಇದು ಸರಿಯಲ್ಲ ಅಂತ ದೇವರಕೊಂಡ ವಿರುದ್ಧ ಅನುಸೂಯ ಮುಗಿಬಿದ್ದರು. ಸರಣಿ ಟ್ವೀಟ್​ಗಳ ಮೂಲಕ ವಿಜಯ್​ಗೆ ಟಾಂಗ್ ಕೊಟ್ಟರು. ಅವತ್ತು ಆರಂಭವಾದ ಈ ವಾರ್ ಈಗಲೂ ಮುಂದುವರಿದಿದೆ. ಈಗಲೂ ದೇವರಕೊಂಡ ಫ್ಯಾನ್ಸ್ ಅನುಸೂಯ ಅವರನ್ನು ಸಂದರ್ಭ ಸಿಕ್ಕಾಗೆಲ್ಲಾ ನಿಂದಿಸ್ತಾರೆ. ಟ್ರೋಲ್ ಮಾಡ್ತಾರೆ.

ಲೈಗರ್ ಸಿನಿಮಾ ಸೋತಾಗಲೂ ಅನುಸೂಯ ಮಾತಾಡಿದ್ದರು. ಹೆಣ್ಣನ್ನು ನಿಂದಿಸಿದರೆ ಇದೇ ಗತಿ ಅಂತ ಹೀಯಾಳಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ದೇವರಕೊಂಡ ಫ್ಯಾನ್ಸ್ ಅನುಸೂಯ ಆಂಟಿ ಅಂತ ಟ್ರೆಂಡ್ ಮಾಡಿದ್ರು. ಅನುಸೂಯ ಅವರ ಪ್ರತಿ ಪೋಸ್ಟ್​ ನೋಡಿ ಕಾಲೆಳೆಯೋಕೆ ಶುರು ಮಾಡಿದ್ರು. ಇದರಿಂದ ಅನುಸೂಯ ತುಂಬಾನೇ ಡಿಸ್ಟರ್ಬ್ ಆಗಿದ್ದು ಉಂಟು. ಈ ಬಗ್ಗೆ ಬಹಿರಂಗವಾಗಿ ಮಾತಾಡಿದ ಅನುಸೂಯ ದುದ್ದು ಕೊಟ್ಟು ನನ್ನ ವಿರುದ್ಧ ಬೇಕು ಅಂತ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಅಂತ ದೂರಿದ್ದರು. ಅನುಸೂಯ ಮತ್ತು ವಿಜಯ್ ದೇವರಕೊಂಡ ಅವರ ಅಭಿಮಾನಿಗಳ ವಿರುದ್ಧದ ಕದನ ಸದ್ಯಕ್ಕೆ ನಿಲ್ಲೋಥರ ಕಾಣ್ತಿಲ್ಲ. ಇದು ತುಂಬಾ ಪರ್ಸನಲ್ ಆಗಿ ಮುಂದುವರಿದಿದೆ. ನೀನಾ ನಾನಾ ಅನ್ನೋಥರ ಆಗೋಗಿದೆ.

ಎರಡು ಮಕ್ಕಳ ತಾಯಿ.. ಇಷ್ಟೊಂದು ಗ್ಲಾಮರ್ ಯಾಕಮ್ಮ?

ಸುಶಾಂಕ್ ಭಾರಧ್ಬಜ್ ಜೊತೆ ಮದುವೆಯಾಗಿರುವ ಅನುಸೂಯಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳಿದ್ದರೂ ಇಷ್ಟೊಂದು ಗ್ಲಾಮರ್ ಯಾಕಮ್ಮ ಅನ್ನೋದು ನೆಟ್ಟಿಗರ ಪ್ರಶ್ನೆ. ನೀವು ಇಷ್ಟೊಂದು ಗ್ಲಾಮರ್ ಆಗಿ ಫೋಟೋ, ವಿಡಿಯೋಗಳನ್ನ ಹಾಕ್ತೀರಾ,, ಅದಕ್ಕೆ ನಿಮ್ಮನ್ನ ಟ್ರೋಲ್ ಮಾಡ್ತಾರೆ ಅನ್ನೋದು ಅಭಿಪ್ರಾಯ. ಇನ್ನು ರಿಸೆಂಟ್ ಆಗಿ ವೆಡ್ಡಿಂಗ್ ಆ್ಯನಿವರ್ಸರಿ ಪ್ರಯುಕ್ತ ತನ್ನ ಗಂಡನೂ ಜೊತೆಯೂ ಬಿಕಿನಿ ಫೋಟೋಗಳನ್ನ ಶೇರ್ ಮಾಡಿದ್ದರು. ಇದೆಲ್ಲವೂ ಅನುಸೂಯಗೆ ಬ್ಯಾಕ್ಫೈರ್ ಆಗ್ತಾ ಇದೆ. ಆದರು ಈ ಬಗ್ಗೆ ತಲೆಕೆಡಿಸಿಕೊಳ್ಳದ ಅನುಸೂಯ ಮಾತ್ರ ನಾನಿರೋದೇ ಹಿಂಗೆ ನನ್ನ ಸ್ಟೈಲೇ ಹಿಂಗೆ ಅಂತ ಹೋಗ್ತಾ ಇದ್ದಾರೆ. ಸದ್ಯ ಪುಷ್ಪ ಸೆಕೆಂಡ್ ಚಾಪ್ಟರ್​ನಲ್ಲಿ ನಟಿಸುತ್ತಿರುವ ಅನುಸೂಯ ಈ ಸಲ ಇನ್ನಷ್ಟು ರಗಡ್ ಆಗಿ ಕಾಣಿಸಿಕೊಳ್ತಾರಂತೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

2 ಮಕ್ಕಳ ತಾಯಿ.. ನೋಡೋಕೆ ಸಖತ್​ ಹಾಟ್​​.. ವಿಜಯ್ ದೇವರಕೊಂಡ ಕಂಡ್ರೆ ಉರಿದು ಬೀಳ್ತಾರೆ ಈ ನಟಿ!

https://newsfirstlive.com/wp-content/uploads/2023/07/anasuya.jpg

Load More