newsfirstkannada.com

ಹಾಸ್ಟೆಲ್​ ಹುಡುಗರು ತೆಲುಗಿಗೆ ಡಬ್​.. ರಮ್ಯಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಈ ಸ್ಟಾರ್ ಆ್ಯಂಕರ್; ಟಾಲಿವುಡ್‌ ಟೈಟಲ್ ಏನು?

Share :

16-08-2023

    ಮೋಹಕತಾರೆ ರಮ್ಯಾ ಅತಿಥಿ ಪಾತ್ರಕ್ಕೆ ಮಾರು ಹೋಗಿದ್ದ ಸಿನಿ ರಸಿಕರು

    ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ತೆಲುಗು ಭಾಷೆಯಲ್ಲೂ ಶೂಟಿಂಗ್

    ಗುಂಟೂರು ಟಾಕೀಸ್​ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದ ಆ್ಯಂಕರ್

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ತೆರೆ ಕಂಡಿದ್ದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಹೆಚ್ಚಿನ ಪ್ರೇಕ್ಷಕರನ್ನು ಥಿಯೇಟರ್​ಗೆ ಸೆಳೆದಿತ್ತು. ಬರೀ ಹೊಸಬರಿಂದಲೇ ನಿರ್ಮಾಣ ಮಾಡಲಾಗಿದ್ದ ಈ ಚಿತ್ರ ಕನ್ನಡಿಗರಿಗೆ ಮನರಂಜನೆಯನ್ನ ತುಸು ಜೋರಾಗಿ ನೀಡುವುದರ ಜೊತೆಗೆ ಗಲ್ಲಾ ಪಟ್ಟಿಗೆಯಲ್ಲಿ ಕೂಡ ಸಖತ್ ಕಲೆಕ್ಷನ್ ಮಾಡಿತ್ತು. ಸದ್ಯಕ್ಕೆ ಇಷ್ಟೆಲ್ಲ ಯಾಕೆ ಹೇಳುತ್ತಿದ್ದೇವೆ ಎಂದರೆ ಈಗಾಗಲೇ ಈ ಸಿನಿಮಾ ಟಾಲಿವುಡ್​ಗೆ ಡಬ್ ಆಗುತ್ತಿದೆ. ಕನ್ನಡದಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಟೈಟಲ್​ ಅನ್ನು ತೆಲುಗಿನಲ್ಲಿ ‘ಬಾಯ್ಸ್​ ಹಾಸ್ಟೆಲ್’ ಎಂದು ಬದಲಾವಣೆ ಮಾಡಲಾಗಿದೆ.

ಈ ಸಿನಿಮಾದಲ್ಲಿ ಹೈಲೆಟ್​ ಎಂದರೆ ಅದು ಸ್ಯಾಂಡಲ್​ವುಡ್ ಕ್ವೀನ್​, ಪದ್ಮಾವತಿ ರಮ್ಯಾ ಅವರ ಅಭಿನಯ. ಆದರೆ ತೆಲುಗಿನಲ್ಲಿ ಈ ಪಾತ್ರಕ್ಕೆ ನಟಿ ರಮ್ಯಾ ಬದಲು ಆ್ಯಕ್ಟರ್​ ಹಾಗೂ ಟಿವಿ ಆ್ಯಂಕರ್ ಆಗಿರುವ ರಶ್ಮಿ ಗೌತಮ್ ಅವರು ಬಣ್ಣ ಹಚ್ಚಲಿದ್ದು ಯುವಮನಸುಗಳನ್ನು ತಲ್ಲಣಗೊಳಿಸುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಏಕೆಂದರೆ ಆ್ಯಂಕರ್ ರಶ್ಮಿ ಗೌತಮ್ ಅವರು ಈ ಮೊದಲು ಗುಂಟೂರು ಟಾಕೀಸ್​ ಸಿನಿಮಾದಲ್ಲಿ ನಟಿಸಿ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚಿಸಿದ್ದರು. ಈಗ ಬಾಯ್ಸ್​ ಹಾಸ್ಟೆಲ್ ಸಿನಿಮಾ ಮೂಲಕ ಮತ್ತೆ ಹುಡುಗರ ನಿದ್ದೆಗೆಡಿಸುವುದು ಪಕ್ಕಾ ಎನ್ನಲಾಗುತ್ತಿದೆ.

ನಟಿ ರಮ್ಯಾ, ರಶ್ಮಿ ಗೌತಮ್

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿರ್ದೇಶನ ಮಾಡಿ ಮೊದಲ ಪ್ರಯತ್ನದಲ್ಲೇ ನಿತಿನ್ ಕೃಷ್ಣಮೂರ್ತಿ ಗೆದ್ದಿದ್ದಾರೆ. ಸಿನಿಮಾದಲ್ಲಿ ಕಾಂತಾರ ಖ್ಯಾತಿಯ ರಿಷಬ್​ ಶೆಟ್ಟಿ, ರಮ್ಯಾ, ದೂದ್​ಪೇಡಾ ದಿಗಂತ್​, ಪವನ್​ ಕುಮಾರ್​ ಸೇರಿದಂತೆ ಇತರರು ಗೆಸ್ಟ್​ ರೋಲ್​ನಲ್ಲಿ ಆ್ಯಕ್ಟ್​ ಮಾಡಿದ್ದರು. ಇದು ಅಭಿಮಾನಿಗಳಿಗೆ ಟಾನಿಕ್​ ರೀತಿ ಎನರ್ಜಿ ನೀಡಿತ್ತು.

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನ ಗುಲ್ಮೊಹರ್ ಫಿಲಂಸ್ ಮತ್ತು ವರಣ್​ ಸ್ಟುಡಿಯೋಸ್ ನಿರ್ಮಾಣ ಮಾಡಿದ್ರೆ, ತೆಲುಗಿನಲ್ಲಿ ಚಾಯ್ ಬಿಸ್ಕೆಟ್ ಫಿಲಂಸ್ ಮತ್ತು ಅನ್ನಪೂರ್ಣ ಸ್ಟುಡಿಯೋ ಕಂಪನಿಗಳು ಸಿನಿಮಾವನ್ನು ರಿಲೀಸ್ ಮಾಡಲಿವೆ. ಇನ್ನು ಇದೇ ಆಗಸ್ಟ್ 26ರಂದು ಬಾಯ್ಸ್​ ಹಾಸ್ಟೆಲ್ ಸಿನಿಮಾ ಒಟ್ಟಿಗೆ ಆಂಧ್ರ, ತೆಲಂಗಾಣದಲ್ಲಿ ಅದ್ಧೂರಿಯಾಗಿ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸ್ಟೆಲ್​ ಹುಡುಗರು ತೆಲುಗಿಗೆ ಡಬ್​.. ರಮ್ಯಾ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಈ ಸ್ಟಾರ್ ಆ್ಯಂಕರ್; ಟಾಲಿವುಡ್‌ ಟೈಟಲ್ ಏನು?

https://newsfirstlive.com/wp-content/uploads/2023/08/RASHMI_RAMYA.jpg

Load More