newsfirstkannada.com

ಚಂದ್ರಬಾಬು ನಾಯ್ಡುಗೆ ನ್ಯಾಯಾಂಗ ಬಂಧನ.. ವಿಜಯವಾಡದಿಂದ 200 KM ದೂರದ ಇನ್ನೊಂದು ಜೈಲಿಗೆ ಶಿಫ್ಟ್.!

Share :

11-09-2023

    ​ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಭಾರೀ ಹಗರಣದ ಕೇಸ್

    ಸಿಐಡಿ ಅಧಿಕಾರಿಗಳ ಮನವಿ ಮೇರೆಗೆ ನ್ಯಾಯಾಂಗ ಬಂಧನ

    200 ಕಿ.ಮೀ ದೂರದ ಜೈಲಿಗೆ ಶಿಫ್ಟ್ ಮಾಡಿದ್ದೇ ಕುತೂಹಲ

ಹೈದರಾಬಾದ್: ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಮಾಜಿ ಸಿಎಂ ಎನ್ ಚಂದ್ರಬಾಬು ನಾಯ್ಡುರನ್ನು ವಿಜಯವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕೋರ್ಟ್​ನಲ್ಲಿ ಸಿಐಡಿ ಅಧಿಕಾರಿಗಳು ಮತ್ತು ಚಂದ್ರಬಾಬು ನಾಯ್ಡು ಪರ ವಕೀಲರು ಬರೋಬ್ಬರಿ 6 ಗಂಟೆಗಳ ಕಾಲ ವಾದ-ವಿವಾದ ಮಾಡಿದರು. ಇದನ್ನೆಲ್ಲ ಆಲಿಸಿದ ಬಳಿಕ ಕೋರ್ಟ್​ ಎರಡು ವಾರಗಳವರೆಗೆ ನಾಯ್ಡುರನ್ನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡುರನ್ನು ವಿಜಯವಾಡದಿಂದ 200 ಕಿಲೋ ಮೀಟರ್ ದೂರ ಇರುವ ರಾಜಮಂಡ್ರಿ ಜೈಲಿಗೆ ಹಾಕಲಾಗುತ್ತಿದೆ. ಅಲ್ಲದೇ ನ್ಯಾಯಾಲಯದ ಆದೇಶ ವಿರುದ್ಧ ಇಂದು ಹೈಕೋರ್ಟ್​ಗೆ ಚಂದ್ರಬಾಬು ನಾಯ್ಡು ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ 2014 ರಿಂದ 2019ರವರೆಗೆ ಒಟ್ಟು 371 ಕೋಟಿ ರೂಪಾಯಿಗಳನ್ನು ಶೆಲ್​ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಾಯ್ಡುರನ್ನು ಎ1 ಆರೋಪಿ ಎಂದು ಪರಿಗಣಿಸಿ ಸೆ.09 ರಂದು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಬಾಬು ನಾಯ್ಡುಗೆ ನ್ಯಾಯಾಂಗ ಬಂಧನ.. ವಿಜಯವಾಡದಿಂದ 200 KM ದೂರದ ಇನ್ನೊಂದು ಜೈಲಿಗೆ ಶಿಫ್ಟ್.!

https://newsfirstlive.com/wp-content/uploads/2023/09/CHANDRABABU_NAIDU.jpg

Load More