ರಾತ್ರಿ ಟೊಮ್ಯಾಟೋ ಹೊಲ ಕಾಯುವ ರೈತರೇ ಎಚ್ಚರ.. ಎಚ್ಚರ..!
ರಾತ್ರಿ ವೇಳೆ ಹತ್ಯೆ ಮಾಡಲು ಹೊಲಕ್ಕೆ ಬರ್ತಾರೆ ದುಷ್ಕರ್ಮಿಗಳು
ಪೊಲೀಸರಿಗೆ ಸಿಗುತ್ತಿಲ್ಲ ಈ ರೈತ ಹತ್ಯೆ ಗ್ಯಾಂಗ್, ಏನಿದು ವಿಚಿತ್ರ?
ಹೈದರಾಬಾದ್: ಟೊಮ್ಯಾಟೋ ಹೊಲಕ್ಕೆ ರಾತ್ರಿ ವೇಳೆ ಕಾವಲು ಕಾಯುತ್ತ ಮಲಗಿದ್ದ ರೈತನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೆದ್ದ ತಿಪ್ಪಸಮುದ್ರ ಗ್ರಾಮದ ಬಳಿ ನಡೆದಿದೆ. ಈ ರೀತಿ ಕಾವಲು ಕಾಯುತ್ತಿದ್ದ ರೈತನನ್ನು ಹತ್ಯೆ ಮಾಡುತ್ತಿರುವುದು ಈ ವಾರದಲ್ಲಿ ಜಿಲ್ಲೆಯಲ್ಲಿ ನಡೆದ 2ನೇ ಘಟನೆ ಆಗಿದೆ.
ಪೆದ್ದ ತಿಪ್ಪಸಮುದ್ರ ಗ್ರಾಮದ ಮಧುಕರ ರೆಡ್ಡಿ ಸಾವನ್ನಪ್ಪಿರುವ ರೈತ. ಇವರು ರಾತ್ರಿ ಸಮಯದಲ್ಲಿ ಗ್ರಾಮದ ಸಮೀಪ ಇರುವ ತಮ್ಮ ಟೊಮ್ಯಾಟೋ ಹೊಲಕ್ಕೆ ಕಾವಲು ಕಾಯುತ್ತ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ದುಷ್ಕರ್ಮಿಗಳು ರೈತನ ಕತ್ತು ಹಿಸುಕಿ ಕೊಲೆ ಮಾಡಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ DSP ಕೆಸಪ್ಪ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಕೇಸ್ ದಾಖಲಿಸಲಾಗಿದ್ದು ತನಿಖೆ ಕೈಗೊಂಡು ಆರೋಪಿಗಳನ್ನು ಹಿಡಿಯಲು ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಇದೇ ವಾರದಲ್ಲಿ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಪ್ರದೇಶದ ಬಳಿ ರೈತ ರಾಜಶೇಖರ್ ರೆಡ್ಡಿ (62)ಯನ್ನು ಕೊಲೆ ಮಾಡಲಾಗಿತ್ತು. ಮೃತನು ಟೊಮ್ಯಾಟೋ ಹೊಲಕ್ಕೆ ರಾತ್ರಿ ಸಮಯದಲ್ಲಿ ಕಾವಲು ಕಾಯುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ರೈತನನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಇದು ಆದ ಬೆನ್ನಲ್ಲೆ ಇದೀಗ ಮತ್ತೊಂದು ರೈತನ ಹತ್ಯೆ ಆಗಿರುವುದು ಜನರಲ್ಲಿ ಆತಂಕ ಉಂಟು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ