newsfirstkannada.com

Pawan Kalyan: ಆಂಧ್ರ ಡಿಸಿಎಂ ಆದ್ಮೇಲೆ ಬದಲಾಯ್ತು ಪವನ್ ಕಲ್ಯಾಣ್‌ ಗತ್ತು.. ಏನಿದರ ಗುಟ್ಟು?

Share :

Published June 25, 2024 at 6:12pm

    ಹೊಸ ಗೆಟಪ್‌ನಲ್ಲಿ ಪ್ರತ್ಯಕ್ಷರಾದ ಆಂಧ್ರ DCM ಪವನ್ ಕಲ್ಯಾಣ್‌

    ಆಂಧ್ರದಲ್ಲಿ ಅಧಿಕಾರದ ಗದ್ದುಗೆ ಸಿಕ್ಕ ಬಳಿಕ ಪವನ್ ಕಲ್ಯಾಣ್ ದೀಕ್ಷೆ!

    ವಿಧಾನಸಭೆ ಚುನಾವಣೆಗೂ ಮುಂಚೆ ಇದೇ ರೀತಿ ದೀಕ್ಷೆ ಸ್ವೀಕರಿಸಿದ್ದರು

ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್‌ ಈಗ ಡಿಸಿಎಂ ಪವನ್ ಕಲ್ಯಾಣ್‌ ಆಗಿದ್ದಾರೆ. ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪವನ್ ಕಲ್ಯಾಣ್ ರಾಜ್ಯಭಾರ ಶುರುವಾಗಿದೆ. ಡಿಸಿಎಂ ಆದ್ಮೇಲೆ ಪವನ್ ಕಲ್ಯಾಣ್ ಅವರು ಸಂಪೂರ್ಣ ಬದಲಾಗಿದ್ದು, ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: VIDEO: ತಮ್ಮನಿಗೆ ಅಣ್ಣನ ಹೃದಯಸ್ಪರ್ಶಿ ಸ್ವಾಗತ; ಚಿರಂಜೀವಿ ನೋಡಿ ಪವನ್ ಕಲ್ಯಾಣ್ ಕಣ್ಣೀರು 

ಡಿಸಿಎಂ ಪವನ್ ಕಲ್ಯಾಣ್ ಅವರು ಡಿಸಿಎಂ ಆದ ಬಳಿಕ ಹೊಸ ಗೆಟಪ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪವನ್ ಕಲ್ಯಾಣ್ ಅವರ ಈ ಹೊಸ ಅವತಾರ ಅಭಿಮಾನಿಗಳಿಗಷ್ಟೇ ಅಲ್ಲ ಆಂಧ್ರಪ್ರದೇಶದ ಅಧಿಕಾರಿಗಳು ಉಬ್ಬೇರುವಂತೆ ಮಾಡಿದೆ. ಹೊಸ ಗೆಟಪ್‌ನಲ್ಲಿಯೇ ಪವನ್ ಕಲ್ಯಾಣ್ ಅವರು ಅಧಿಕಾರಿಗಳ ಜೊತೆ ಮಹತ್ವದ ಸಭೆಗಳನ್ನು ನಡೆಸುತ್ತಿದ್ದಾರೆ.

ದೀಕ್ಷೆ ಕೈಗೊಂಡ ಡಿಸಿಎಂ ಪವನ್ ಕಲ್ಯಾಣ್!
ಪವನ್ ಕಲ್ಯಾಣ್ ಅವರ ಈ ಹೊಸ ಗೆಟಪ್‌ನ ವಿಶೇಷತೆ ಏನು ಅಂದ್ರೆ ಆಂಧ್ರಪ್ರದೇಶ ಚುನಾವಣೆಯಲ್ಲಿ ಟಿಡಿಪಿ, ಜನಸೇನಾ ಪಕ್ಷ ಗೆಲುವು ಸಾಧಿಸಿದೆ. ಚುನಾವಣೆಯ ಜಯ, ಅಧಿಕಾರ ಸಿಕ್ಕ ಬಳಿಕ ಆಂಧ್ರ ಡಿಸಿಎಂ ವಾರಾಹಿ ಅಮ್ಮಾವರಿ ದೀಕ್ಷೆಯನ್ನು ಕೈಗೊಂಡಿದ್ದಾರೆ. ನಾಳೆಯಿಂದ 11 ದಿನಗಳ ಕಾಲ ವಾರಾಹಿ ಅಮ್ಮಾವರಿ ದೀಕ್ಷೆ ಕೈಗೊಳ್ಳುವ ಪವನ್ ಕಲ್ಯಾಣ್ ಅವರು ಈ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ.

ಇದನ್ನೂ ಓದಿ: VIDEO: ‘ಪವನ್ ಅಲ್ಲ ಇವ್ರು ಬಿರುಗಾಳಿ’- ಪವನ್ ಕಲ್ಯಾಣ್ ಹೊಗಳಿದ ಮೋದಿ; NDA ಸಭೆಯಲ್ಲಿ ಆಗಿದ್ದೇನು? 

ಕಳೆದ ವರ್ಷ ಜೂನ್‌ನಲ್ಲೂ ಪವನ್ ಕಲ್ಯಾಣ್ ಅವರು ವಾರಾಹಿ ಅಮ್ಮಾವರಿ ದೀಕ್ಷಾ ಕೈಗೊಂಡಿದ್ದರು. ವರಾಹಿ ದೇವರನ್ನು ಪೂಜಿಸುತ್ತಾ ವರಾಹಿ ವಿಜಯ ಯಾತ್ರೆ ಕೈಗೊಂಡಿದ್ದರು. ವರಾಹಿ ವಿಜಯ ಯಾತ್ರೆಯ ಬಳಿಕವೇ ಪವನ್ ಕಲ್ಯಾಣ್‌ ಅವರಿಗೆ ಟಿಡಿಪಿ ಜನಸೇನಾ ಪಕ್ಷಕ್ಕೆ ಆಂಧ್ರದಲ್ಲಿ ಅಧಿಕಾರದ ಗದ್ದುಗೆ ಸಿಕ್ಕಿದೆ.

ವಾರಾಹಿ ಅಮ್ಮಾವರಿ ದೀಕ್ಷೆಯ ಸಮಯದಲ್ಲಿ ಹಾಲು, ಹಣ್ಣು, ನೀರು ಮಾತ್ರ ಸೇವಿಸಬೇಕು. ಘನ ಆಹಾರ ತ್ಯಜಿಸಿ ಹಾಲು, ನೀರು, ಹಣ್ಣು ಸೇವನೆಯಲ್ಲೇ ದಿನ ಕಳೆಯಬೇಕಿದೆ. ಸದ್ಯ ದೀಕ್ಷೆ ಪಡೆದಿರುವ ಪವನ್ ಕಲ್ಯಾಣ್ ಅವರು ಈ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pawan Kalyan: ಆಂಧ್ರ ಡಿಸಿಎಂ ಆದ್ಮೇಲೆ ಬದಲಾಯ್ತು ಪವನ್ ಕಲ್ಯಾಣ್‌ ಗತ್ತು.. ಏನಿದರ ಗುಟ್ಟು?

https://newsfirstlive.com/wp-content/uploads/2024/06/pawan-kalyan.jpg

Load More