newsfirstkannada.com

×

BIG BREAKING: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್​

Share :

Published September 9, 2023 at 6:32am

Update September 9, 2023 at 7:59am

    ತೆಲುಗು ದೇಶಂ ಪಾರ್ಟಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ

    371 ಕೋಟಿ ರೂಪಾಯಿಗಳ ಭಾರೀ ಅಕ್ರಮದಲ್ಲಿ ನಾಯ್ಡು ಅರೆಸ್ಟ್​..?

    ಮಧ್ಯರಾತ್ರಿ ಚಂದ್ರಬಾಬು ನಾಯ್ಡುರನ್ನು ಅರೆಸ್ಟ್​ ಮಾಡಿದ ಸಿಐಡಿ ಸಿಬ್ಬಂದಿ

ಹೈದರಾಬಾದ್​: ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ತೆಲುಗು ದೇಶಂ ಪಾರ್ಟಿಯ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡುರನ್ನು ಸಿಐಡಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ ಎಂದು ಹೇಳಲಾಗಿದೆ.

ಆಂಧ್ರದಲ್ಲಿ ಸ್ಕಿಲ್ ಡವೆಲಪ್​ಮೆಂಟ್ ಯೋಜನೆಯಲ್ಲಿ ಬರೋಬ್ಬರಿ 371 ಕೋಟಿ ರೂಪಾಯಿಗಳನ್ನು ಅಕ್ರಮ ನಡೆದಿದೆ ಎನ್ನಲಾಗಿದೆ. ಹೀಗಾಗಿ ಆಂಧ್ರದ ಹೈಕೋರ್ಟ್​ ಆದೇಶ ಹಿನ್ನೆಲೆಯಲ್ಲಿ ಎನ್​ ಚಂದ್ರಬಾಬು ನಾಯ್ಡುರನ್ನು ತಡರಾತ್ರಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಸ್ಕಿಲ್ ಡವೆಲಪ್​ಮೆಂಟ್ ಯೋಜನೆಯಲ್ಲಿ ಅಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಎ1 ಆರೋಪಿ ಎಂದು ಪರಿಗಣಿಸಲಾಗಿದೆ. 2020ರ ಪ್ರಕರಣದ ಬಗ್ಗೆ ಹೈಕೋರ್ಟ್​ ಆದೇಶ ನೀಡಿದ್ದರಿಂದ ಸಿಐಡಿ ಪೊಲೀಸರು ಮಾಜಿ ಸಿಎಂ ಎನ್​.ಚಂದ್ರಬಾಬು ನಾಯ್ಡುರನ್ನು ಐಪಿಸಿ ಸೆಕ್ಷನ್ 166, 167, 418, 420​ ಪ್ರಕಾರ ಬಂಧಿಸಿದ್ದಾರೆ. ಇನ್ನು ಚಂಧ್ರಬಾಬು ಅರೆಸ್ಟ್ ಹಿನ್ನೆಲೆಯಲ್ಲಿ ಟಿಡಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ನೂರಾರು ಕಾರ್ಯಕರ್ತರು ಅವರ ನಿವಾಸದ ಬಳಿ ಸೇರಿದ್ದಾರೆ ಎನ್ನಲಾಗಿದೆ.

ಎಫ್​ಐಆರ್ ಇಲ್ಲ, ಯಾವುದೇ ನೋಟಿಸ್ ಕೊಡದೇ ಹೇಗೆ ಬಂಧನ ಮಾಡುತ್ತಿದ್ದೀರಿ. ರಿಮಾಂಡ್ ರಿಪೋರ್ಟ್​ ಕೂಡ ನೀಡಿಲ್ಲ. ಹೀಗಾಗಿ ಪ್ರಕರಣದ ಕುರಿತು ವಿವರಗಳನ್ನು ನೀಡಿ ಬಳಿಕ ಅರೆಸ್ಟ್ ಮಾಡಿ ಎಂದು ಎನ್​.ಚಂದ್ರಬಾಬು ನಾಯ್ಡು ಅಧಿಕಾರಿಗೆ ತಿಳಿಸಿದ್ದಾರೆ. ಆದರೆ ಇದನ್ನು ಯಾವುದೇ ಗಮನಕ್ಕೆ ತೆಗೆದುಕೊಳ್ಳದೇ ಪೊಲೀಸರು ಬಂಧಿಸಿದ್ದಾರೆ.

  • ಆಂಧ್ರ ಪ್ರದೇಶದ ಮೂರು ಬಾರಿ ಸಿಎಂ ಆಗಿದ್ದ ಎನ್​. ಚಂದ್ರಬಾಬು ನಾಯ್ಡು
  • ಹಲವಾರು ಬಾರಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್​

https://newsfirstlive.com/wp-content/uploads/2023/09/N_CHANDRABABU_NAYDU.jpg

Load More