newsfirstkannada.com

ಆದಿತ್ಯ-L1 ಮಿಷನ್​ ಲಾಂಚಿಂಗ್​ಗೆ ಕೌಂಟ್​ಡೌನ್.. ಇಸ್ರೋ ಉಡಾವಣೆಯ ಲೈವ್‌ ದೃಶ್ಯಗಳನ್ನು ನೋಡೋದು ಹೇಗೆ?

Share :

01-09-2023

    ಬಾಹ್ಯಾಕಾಶದಲ್ಲಿ ಇಸ್ರೋ ವಿಜ್ಞಾನಿಗಳಿಂದ ಮತ್ತೊಂದು ಮಹತ್ವದ ಹೆಜ್ಜೆ

    ಮತ್ತೊಂದು ಐತಿಹಾಸಿಕ ಉಡಾವಣೆಗೆ ಸಜ್ಜಾಗಿರುವ ಹೆಮ್ಮೆಯ ಇಸ್ರೋ ಸಂಸ್ಥೆ

    ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ವಿಜ್ಞಾನಿಗಳಿಂದ ಸೂರ್ಯನ ಶಿಕಾರಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರನ ದಕ್ಷಿಣ ಧ್ರುವವನ್ನು ತಲುಪುವಲ್ಲಿ ಸಕ್ಸಸ್​ಫುಲ್ ಹೆಜ್ಜೆಯನ್ನಿಟ್ಟಿದೆ. ಲ್ಯಾಂಡರ್, ರೋವರ್ ಚಂದ್ರನ ಅಧ್ಯಯನದಲ್ಲಿ ತೊಡಗಿವೆ. ಸದ್ಯ ಇದರ ಬೆನ್ನಲ್ಲೇ ಇಸ್ರೋ ಸಂಸ್ಥೆ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡಿದ್ದು, ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ L1 ಮಿಷನ್​ ಲಾಂಚ್​ ಮಾಡುತ್ತಿದೆ. ಇದಕ್ಕಾಗಿ ಈಗಾಗಲೇ ಕ್ಷಣಗಣನೆ ಪ್ರಾರಂಭವಾಗಿವೆ.

ಪಿಎಸ್​ಎಲ್​ವಿ-ಸಿ57 ವೆಹಿಕಲ್ ಮೂಲಕ ಆದಿತ್ಯ L1 ಮಿಷನ್ ಅನ್ನು ನಾಳೆ ಅಂದರೆ ಸೆಪ್ಟೆಂಬರ್ 02 ರಂದು ಸರಿಯಾಗಿ 11:50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಈಗಾಗಲೇ ಲಾಂಚಿಂಗ್​ಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಶ್ರೀಹರಿಕೋಟಾಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ. ಸೂರ್ಯನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ L1 ಮಿಷನ್​ನ ಲಾಂಚಿಂಗ್​ನ ಲೈವ್​ ದೃಶ್ಯ ನೋಡಬೇಕು ಎಂದರೆ ಇಸ್ರೋ ಸಂಸ್ಥೆಗೆ ಸಂಬಂಧಿಸಿದ ಸೋಷಿಯಲ್​ ಮೀಡಿಯಾಗಳಲ್ಲಿ ವೀಕ್ಷಣೆ ಮಾಡಬಹುದು ಎಂದು ಸಂಸ್ಥೆ ತನ್ನ ಅಧಿಕೃತ ಎಕ್ಸ್​ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ​

ಭಾರತದ ಹಾಗೂ ಇಸ್ರೋದ ಮೊಟ್ಟ ಮೊದಲ ಸೂರ್ಯ ಅಧ್ಯಯನ ಮಾಡಲು ಮಿಷನ್​ ಅನ್ನು ಉಡಾವಣೆ ಮಾಡುತ್ತಿದೆ. ಇದನ್ನು PSLV-C57 ರಾಕೆಟ್ ಮೂಲಕ ಆದಿತ್ಯ L​-1 ಮಿಷನ್​ ಅನ್ನು ಉಡಾವಣೆ ಮಾಡಲಾಗುತ್ತಿದ್ದು ಇದು 1,500 ಕೆಜಿ ತೂಕವಿದೆ. ಈ ಮಿಷನ್ ಸೌರ ಚಟುವಟಿಕೆ ಹಾಗೂ ಬಾಹ್ಯಾಕಾಶದಲ್ಲಿನ ವಾತಾವರಣದ ಬಗ್ಗೆ ಮಾಹಿತಿ ನೀಡಲಿದೆ. ಸೂರ್ಯ ಮತ್ತು ಭೂಮಿ ಮಧ್ಯೆ ಇರೋ ಲಾಗ್ರೇಂಜ್ ಪಾಯಿಂಟ್​ನಲ್ಲಿ ಆದಿತ್ಯ L​-1 ಲ್ಯಾಂಡ್ ಆಗಲಿದೆ.

ಇನ್ನು ರಾಕೆಟ್​ನ ಉಡಾವಣೆ ಮಾಡುವ ಬಗ್ಗೆ ರಿಹರ್ಸಲ್ ಮಾಡಲಾಗಿದ್ದು ಇದು​ ಪೂರ್ಣವಾಗಿದೆ. ರಿಹರ್ಸಲ್​ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಹೀಗಾಗಿ ಆದಿತ್ಯ ಲಾಂಚಿಂಗ್​ಗೆ ಕೌಂಟ್​ಡೌನ್​ ಸ್ಟಾರ್ಟ್ ಆಗಿದೆ. ಅಂದುಕೊಂಡ ಸಮಯಕ್ಕೆ ಮಿಷನ್​ ಉಡಾವಣೆಯಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆದಿತ್ಯ-L1 ಮಿಷನ್​ ಲಾಂಚಿಂಗ್​ಗೆ ಕೌಂಟ್​ಡೌನ್.. ಇಸ್ರೋ ಉಡಾವಣೆಯ ಲೈವ್‌ ದೃಶ್ಯಗಳನ್ನು ನೋಡೋದು ಹೇಗೆ?

https://newsfirstlive.com/wp-content/uploads/2023/08/ADITYA_L1.jpg

Load More