ತಡರಾತ್ರಿ N ಚಂದ್ರಬಾಬು ನಾಯ್ಡುರನ್ನು ಅರೆಸ್ಟ್ ಮಾಡಿದ ಪೊಲೀಸರು
371 ಕೋಟಿ ಭ್ರಷ್ಟಾಚಾರ ಕೇಸ್ನಲ್ಲಿ ಎ1 ಆರೋಪಿ ಚಂದ್ರಬಾಬು ನಾಯ್ಡು
ವಿಜಯವಾಡಕ್ಕೆ ತೆರಳಲು ಮುಂದಾಗಿದ್ದ ಟಿಡಿಪಿ ಕಾರ್ಯದರ್ಶಿ ಲೋಕೇಶ್
ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರನ್ನು ಅರೆಸ್ಟ್ ಮಾಡಿದ ಹಿನ್ನೆಲೆಯಲ್ಲಿ ಭೇಟಿ ಮಾಡಲು ತೆರಳುತ್ತಿದ್ದ ಅವರ ಪುತ್ರ ಹಾಗೂ ಟಿಡಿಪಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರನ್ನು ಕೊನಸೀಮಾ ಜಿಲ್ಲೆಯ ರಾಜೋಲ್ ಮಂಡಲಂ ಬಳಿಯೇ ಪೊಲೀಸರು ಅಡ್ಡಗಟ್ಟಿ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ನಾರಾ ಲೋಕೇಶ್ ನಡು ರಸ್ತೆಯಲ್ಲೇ ಸತ್ಯಗ್ರಹ ಮಾಡುತ್ತಿದ್ದಾರೆ.
ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕೊನಸೀಮಾ ಜಿಲ್ಲೆಯ ರಾಜೋಲ್ ಮಂಡಲಂನ ಬಳಿಯಿದ್ದ ನಾರಾ ಲೋಕೇಶ್ ಅವರು ವಿಜಯವಾಡ ನಗರಕ್ಕೆ ತೆರಳಲು ಮುಂದಾಗಿದ್ದರು. ಈ ವೇಳೆ ಪೊಲೀಸರು ನಾರಾ ಲೋಕೇಶ್ರನ್ನು ವಿಜಯವಾಡಕ್ಕೆ ಹೋಗದಂತೆ ತಡೆದಿದ್ದಾರೆ. ಹೀಗಾಗಿ ಲೋಕೇಶ್ ಅವರು ನಡು ರಸ್ತೆಯಲ್ಲೇ ಕುಳಿತು ಧರಣಿಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಲೋಕೇಶ್ ನಡುವೆ ಭಾರೀ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ.
Nara Lokesh questions AP Police after Chandrababu Naidu's arrest#ChandrababuNaidu #NaraLokesh #AndhraPradesh pic.twitter.com/95dFlnWHvH
— Arun Pruthvy Sandilya (@arunsandilya) September 9, 2023
ನಾನು ರಾಜಕೀಯ ವ್ಯಕ್ತಿ ಆಗಿದ್ದರು ನನ್ನ ಹಿಂದೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಬರುತ್ತಿಲ್ಲ. ನಾನೊಬ್ಬನೇ ಕುಟುಂಬದ ಸದಸ್ಯನಾಗಿ ನನ್ನ ತಂದೆ ಬಳಿ ತೆರಳುತ್ತಿದ್ದೇನೆ. ಇದಕ್ಕೆ ನೀವು ಅಡ್ಡಿ ಪಡಿಸುವಂತಿಲ್ಲ. ಸಂವಿಧಾನ ಇದರ ಬಗ್ಗೆ ನಿಖರವಾಗಿ ಹೇಳುತ್ತಿದೆ. ಆದ್ರೆ ನೀವು ಯಾಕೆ ಅಡ್ಡಿ ಪಡಿಸುತ್ತಿದ್ದೀರಿ. ಈ ಹಕ್ಕು ನಿಮಗೆ ಯಾರು ಕೊಟ್ಟಿದ್ದಾರೆ. ನಮ್ಮ ತಾಯಿ, ಚಂದ್ರಬಾಬುರನ್ನು ಭೇಟಿ ಮಾಡಲು ಹೋಗುತ್ತಾರೆ. ಅವರನ್ನೂ ಕೂಡ ತಡೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: BIG BREAKING: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್
ಸದ್ಯ ಚಂದ್ರಬಾಬು ನಾಯ್ಡುರನ್ನು ನಂದ್ಯಾಲ ನಗರದಲ್ಲಿ ಬಂಧಿಸಿ ವಿಜಯವಾಡಕ್ಕೆ ಸಿಐಡಿ ಪೊಲೀಸರು ಕರೆದೊಯ್ಯುತ್ತಿದ್ದಾರೆ. 6 ಗಂಟೆ ಪ್ರಯಾಣ ಇದಾಗಿದ್ದು ಇನ್ನು ಪ್ರಯಾಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಚಂದ್ರಬಾಬು ಜೊತೆ ಇನ್ನು 8 ಜನರನ್ನು ಇಲ್ಲಿವರೆಗೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಟಿಡಿಪಿ ಕಾರ್ಯಕರ್ತರು ಈ ಸಂಬಂಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ