newsfirstkannada.com

Video: ಮಕ್ಕಳ ಮದುವೆಗಾಗಿ ಟ್ರಂಕ್​​ನಲ್ಲಿಟ್ಟಿದ್ದ 1 ಲಕ್ಷ ಹಣ; ಗೆದ್ದಲು ಕಡಿದು ಸರ್ವನಾಶ; ರೈತ ಕುಟುಂಬ ಕಣ್ಣೀರು

Share :

20-11-2023

    ಹೊಲದಲ್ಲಿ ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣ ಕಡಿದ ಗೆದ್ದಲುಗಳು

    ವಿಡಿಯೋದಲ್ಲಿ ಹಣವನ್ನು ತೋರಿಸಿ ಕಣ್ಣೀರು ಹಾಕಿದ ರೈತ ದಂಪತಿ

    ಗೆದ್ದಲು ಕಡಿತದಿಂದ ಪೀಸ್ ಪೀಸ್​ ಆಗಿರುವ 1 ಲಕ್ಷ ರೂಪಾಯಿಗಳು

ಹಳ್ಳಿ ಜನರು ತಾವು ದುಡಿದ ಹಣವನ್ನು ಮುಂದೆ ಯಾವುದಾದರು ಕೆಲಸಕ್ಕೆ ಬರುತ್ತದೆಂದು ಜೋಪಾನ ಮಾಡಿ ಮನೆಯಲ್ಲಿಟ್ಟಿರುತ್ತಾರೆ. ಹೊಲದಲ್ಲಿ, ಮಣ್ಣು ಹೊತ್ತು, ಅವರಿವರ ಮನೆಗೆಲಸ ಸೇರಿದಂತೆ ಇತರೆ ಕೆಲಸಗಳನ್ನು ಮಕ್ಕಳ ಓದಿಗೋ, ತಮ್ಮ ಸಂಸಾರಕ್ಕೋ ಕಷ್ಟದಲ್ಲಿ ಹಣ ನೆರವಾಗುತ್ತೆ ಎಂದು ಭಾವಿಸಿರುತ್ತಾರೆ. ರೈತರಂತೂ ಹೊಲದಲ್ಲಿ ಬೆವರು ಸುರಿಸಿ ಕೂಡಿಟ್ಟ ಹಣ ಒಮ್ಮೆಲೇ ನಾಶವಾದರೆ ಆ ಕಷ್ಟ ಹೇಳ ತೀರದು. ಅಂತಹದ್ದೆ ಮನಕಲಕುವ ಸಂಗತಿ ನಡೆದಿದ್ದು ರೈತನೋರ್ವ ತನ್ನ ಮನೆಯಲ್ಲಿಟ್ಟಿದ್ದ 1 ಲಕ್ಷ ರೂಪಾಯಿಗಳನ್ನು ಗೆದ್ದಲುಗಳು ತಿಂದು ಹಾಕಿವೆ.

ಆಂಧ್ರ ಪ್ರದೆಶದ ಮನ್ಯಾಯಂ ಜಿಲ್ಲೆಯ ಪುತ್ತೂರು ಗ್ರಾಮದ ರೈತ ಆದಿಮೂಲಂ ಲಕ್ಷ್ಮಣ್ ಎನ್ನುವರು ಕಷ್ಟಪಟ್ಟು ದುಡಿದು 1 ಲಕ್ಷ ರೂ.ಗಳನ್ನು ಬ್ಯಾಂಕ್​ನಲ್ಲಿ ಇಡದೇ ಮನೆಯಲ್ಲಿನ ಟ್ರಂಕ್​​ನಲ್ಲಿ ತೆಗೆದು ಇಟ್ಟಿರುತ್ತಾರೆ. ಈ ಹಣವನ್ನು ತಮ್ಮ ಮಕ್ಕಳ ಮದುವೆಗೆ ಬರುತ್ತದೆ ಎಂದು ಯಾವುದಕ್ಕೂ ಖರ್ಚು ಮಾಡದೇ ಜೋಪಾನ ಮಾಡಿರುತ್ತಾರೆ. ಟ್ರಂಕ್​ನಲ್ಲಿನ 1 ಲಕ್ಷ ರೂ.ಗಳನ್ನು ಗೆದ್ದಲುಗಳು ಕಡಿದು ತುಂಡು, ತುಂಡು ಮಾಡಿವೆ ಎನ್ನಲಾಗಿದೆ.

ಇದರಿಂದ ಬೇಸರಗೊಂಡಿರುವ ರೈತ ದಂಪತಿ ಆ ಟ್ರಂಕ್​ನಲ್ಲಿನ ತುಂಡು, ತುಂಡಾದ ಹಣವನ್ನು ತೋರಿಸಿದ್ದಾರೆ. ಮಕ್ಕಳ ಮದುವೆಗೆಂದು ಬಚ್ಚಿಟ್ಟಿದ್ದ ಹಣ ಗೆದ್ದಲುಗಳಿಂದ ನಾಶವಾಗಿರುವುದು ಕಂಡು ಆದಿಮೂಲಂ ಲಕ್ಷ್ಮಣ್ ಕಣ್ಣೀರು ಹಾಕಿದ್ದಾರೆ. ಈ ಬಗೆಗಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮಕ್ಕಳ ಮದುವೆಗಾಗಿ ಟ್ರಂಕ್​​ನಲ್ಲಿಟ್ಟಿದ್ದ 1 ಲಕ್ಷ ಹಣ; ಗೆದ್ದಲು ಕಡಿದು ಸರ್ವನಾಶ; ರೈತ ಕುಟುಂಬ ಕಣ್ಣೀರು

https://newsfirstlive.com/wp-content/uploads/2023/11/AP_FARMER.jpg

Load More