newsfirstkannada.com

ಎಂದಿಗೂ ಸೋಲದ ಕೋಚ್​ ಆ್ಯಂಡಿ ಫ್ಲವರ್​.. ಎಂದಿಗೂ ಕಪ್​ ಗೆಲ್ಲದ RCB ಆಸೆ ಈಡೇರಬಹುದೇ?

Share :

Published August 5, 2023 at 12:03pm

    ಫ್ಲವರ್ ಕೋಚ್​ನಿಂದ RCB ನಸೀಬು ಬದಲಾಗುತ್ತಾ?

    ಫ್ಲವರ್​ ಆಫ್​ ಪವರ್​ ಎನ್ನುವುದರ ಹಿಂದಿದೆ ಗುಟ್ಟು

    2024ರ IPL ಸೀಸನ್​ನಲ್ಲಿ ಕಪ್​ ಗೆಲ್ಲೋದು ಆರ್‌ಸಿಬಿ?

16 ವರ್ಷ ಅದೇ ಕಥೆ.. ಅದೇ ವ್ಯಥೆ.. ತಂಡದ ಆಟಗಾರರು ಬದಲಾದರು ಕೋಚ್​ಗಳು ಬದಲಾದರು ಹಣೆ ಬರಹ ಕಿಂಚಿತ್ತು ಬದಲಾಗಿಲಿಲ್ಲ. ಕಪ್​ ಗೆಲ್ಲೋ ಕನಸು ಕನಸಾಗಿಯೇ ಉಳಿದಿದೆ. ಇದೀಗ ಬದಲಾಗುವ ಕಾಲವೂ ಸನ್ನಿಹಿತವಾಗಿದೆ.

ಈ ಸಲ ಕಪ್ ನಮ್ದೇ ಪ್ರತಿ ಐಪಿಎಲ್ ಸೀಸನ್ ಶುರುವಾದಾಗ್ಲೂ ಆರ್​​​ಸಿಬಿ ಅಭಿಮಾನಿಗಳ ಸ್ಲೋಗನ್ ಇದು. ಆರ್​ಸಿಬಿ ತಂಡವೇ ನಮ್ಮ ಉಸಿರು. ನಮ್ಮ ಹೆಮ್ಮೆ ಅಂತಲೇ ಭಾವಿಸುವ ಫ್ಯಾನ್ಸ್​, ಜೈಕಾರ ಹಾಕಿ, ಹಾಡು ಹಾಡಿ, ಡ್ಯಾನ್ಸ್ ಮಾಡಿ ತಂಡಕ್ಕೆ ಚೀಯರ್ ಮಾಡ್ತಾರೆ. ಆದ್ರೆ, ಕೊನೆಯಲ್ಲಿ ಆರ್​ಸಿಬಿ ಸೋತು ನಿರಾಸೆ ಮೂಡಿಸುತ್ತೆ.

ಆ್ಯಂಡಿ ಫ್ಲವರ್ ಆರ್​ಸಿಬಿಯ ನೂತನ ಕೋಚ್​

ಇಲ್ಲಿತನಕ ಒಮ್ಮೆಯೂ ಚಾಂಪಿಯನ್​ ಆಗದ ಆರ್​​​ಸಿಬಿಯ ಹಣೆಬರಹ, ಸೀಸನ್​​-17ಕ್ಕೆ ಗ್ಯಾರಂಟಿ ಬದಲಾಗುತ್ತೆ. ಇದಕ್ಕೆ ಕಾರಣ ಆರ್​​ಸಿಬಿಗೆ ಎಂಟ್ರಿ ಕೊಟ್ಟಿರೋ ಸ್ಟಾರ್ ಹೆಡ್​​ ಕೋಚ್, ಆ್ಯಂಡಿ ಫ್ಲವರ್. ಇವರು ಆರ್​​ಸಿಬಿಯ ನೂತನ ಹೆಡ್​ ಕೋಚ್ ಮಾತ್ರವಲ್ಲ.. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನಸೀಬು ಬದಲಿಸುವ ಲೆಜೆಂಡರಿ ಌಂಡ್ ಲಕ್ಕಿ ಕೋಚ್.

2024ರಿಂದ ಆರ್​ಸಿಬಿಯಲ್ಲಿ ಹೊಸ ಪರ್ವ ಶುರು!

ಐಪಿಎಲ್ ಸೀಸನ್​-17.. ಆರ್​ಸಿಬಿ ಪಾಲಿಗೆ ಹೊಸ ಯುಗ.. ಹೊಸ ಹೆಡ್​​ ಕೋಚ್​​​ನೊಂದಿಗೆ ಸೀಸನ್​-17ರ ರಣರಂಗಕ್ಕಿಳಿಯುತ್ತಿರುವ ಆರ್​​ಸಿಬಿ, ಸಕ್ಸಸ್​ಫುಲ್ ಕೋಚ್ ಆ್ಯಂಡಿ ಫ್ಲವರ್​ರನ್ನ ಮಾರ್ಗದರ್ಶಕರಾಗಿ ನೇಮಿಸಿದೆ. ಇದು ಸಹಜವಾಗೇ ಆರ್​ಸಿಬಿ ಮೇಲಿನ ಎಕ್ಸ್​ಪೆಕ್ಟೇಷನ್ಸ್​ ಡಬಲ್​ ಮಾಡಿದೆ. ಇದಕ್ಕೆಲ್ಲ ಕಾರಣ ಆ್ಯಂಡಿ ಫ್ಲವರ್​​ರ ಟ್ರ್ಯಾಕ್‌ ರೆಕಾರ್ಡ್​.

ಕಪ್​ ಗೆಲ್ಲಿಸುವುದರಲ್ಲಿ ನಿಸ್ಸೀಮಾ ಆ್ಯಂಡಿ ಫ್ಲವರ್..!

ಆ್ಯಂಡಿ ಫ್ಲವರ್, ಮೂಲತಃ ಜಿಂಬಾಬ್ವೆಯವರೇ ಆಗಿದ್ರೂ, ಕ್ರಿಕೆಟ್ ಎಂಬ ಜಂಟಲ್​​ಮ್ಯಾನ್​​ ಗೇಮ್​​ನ ಚತುರ ಅನ್ನೋದರಲ್ಲಿ ಎರಡು ಮಾತಿಲ್ಲ. ಎದುರಾಳಿ ಚಾಕಚಕ್ಯತೆಯನ್ನ ಅರೆಯುವಲ್ಲಿ ನಿಸ್ಸೀಮನಾಗಿರುವ ಫ್ಲವರ್, ಕೋಚ್ ಆಗಿ ತಂಡಗಳ ಗೆಲುವಿನಲ್ಲಿ ಮಹತ್ತರ ಪಾತ್ರವನ್ನೇ ವಹಿಸಿದ್ದಾರೆ. ಇದಕ್ಕೆಲ್ಲ ಬೆಸ್ಟ್​ ಎಕ್ಸಾಂಪಲ್​ ಅವರ ಟ್ರ್ಯಾಕ್ ರೆಕಾರ್ಡ್.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳ ಪರ ಕೆಲ್ಸ ಮಾಡಿರುವ ದಿಗ್ಗಜ ಫ್ಲವರ್‌, 2008ರಿಂದ 2014ರವರೆಗೆ ಇಂಗ್ಲೆಂಡ್​ ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ವಿಶ್ವಕಪ್​ ಗೆಲ್ಲದ ಕೊರಗಿನಲ್ಲಿದ್ದ ಕ್ರಿಕೆಟ್​​​ ಜನಕರಿಗೆ, 2010ರಲ್ಲಿ T20 ವಿಶ್ವಕಪ್​ ಗೆಲ್ಲಿಸಿಕೊಟ್ಟರು. ಇದಕ್ಕೆಲ್ಲ ಕಾರಣ ಟಿ20 ಲೀಗ್​​ಗಳಲ್ಲಿ, ಫ್ಲವರ್ ಮಾರ್ಗದರ್ಶನದ ಅಡಿ ಸಾಲು ಸಾಲು ಕಪ್​​ಗಳಿಗೆ ಮುತ್ತಿಟ್ಟಿದ್ದೇ ಆಗಿದೆ..

ಟಿ20 ಲೀಗ್​ನಲ್ಲಿ ಫ್ಲವರ್ ಅಡಿ ಹೇಗಿದೆ..?

2020ರ ಕೆರಿಬಿಯನ್ ಪ್ರಿಮಿಯರ್ ಲೀಗ್​​ನಲ್ಲಿ ಫ್ಲವರ್ ಮಾರ್ಗದರ್ಶನದ ಸೇಂಟ್ ಲೂಸಿಯಾ ರನ್ನರ್ಸ್ ಆಗಿದ್ರೆ. 2021ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮುಲ್ತಾನ್ ಸುಲ್ತಾನ್‌ ಚಾಂಪಿಯನ್​ ಆಗಿ ಮೆರೆದಾಡಿತ್ತು. 2021ರ CPLನಲ್ಲಿ ಸೇಂಟ್ ಲೂಸಿಯಾ, 2022ರ ಪಿಸಿಎಲ್​​ನಲ್ಲಿ ಮುಲ್ತಾನ್ ಸುಲ್ತಾನ್​ ​​ರನ್ನರ್ಸ್ ಆಗಿತ್ತು. 2022ರಲ್ಲೇ ಇಂಗ್ಲೆಂಡ್​ನ ದಿ ಹಂಡ್ರೆಡ್‌ ಲೀಗ್​​ನಲ್ಲಿ ಟ್ರೆಂಟ್ ರಾಕೆಟ್ಸ್‌ ಚಾಂಪಿಯನ್​ ಆಗಿ ಹೊರಹೊಮ್ಮಿದ್ರೆ. 2023ರ ಇಂಟರ್​ನ್ಯಾಷನಲ್​ ಲೀಗ್​ನಲ್ಲಿ ಗಲ್ಫ್‌ ಜೈಂಟ್ಸ್‌ ಚಾಂಪಿಯನ್​ ಪಟ್ಟಕ್ಕೆ ಮುತ್ತಿಟ್ಟಿತ್ತು. 2023ರ ಪಿಎಸ್​​ಎಲ್​ನಲ್ಲಿ ಮುಲ್ತಾನ್ ಸುಲ್ತಾನ್‌ ರನ್ನರ್ಸ್ ಆಗಿದ್ರು. ಇದಲ್ಲದೆ 2022 ಹಾಗೂ 2023ಲ್ಲಿ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಪರ ಕಾರ್ಯ ನಿರ್ವಹಿಸಿದ್ದ ಫ್ಲವರ್, ಲಕ್ನೋ ತಂಡವನ್ನ ಸತತ 2 ಬಾರಿ ಫೈನಲ್​​ಗೇರಿಸಿದ್ದರು ಅನ್ನೋದನ್ನ ಮರೆಯುವಂತಿಲ್ಲ.

ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ. ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಆ್ಯಂಡಿ, ಈ ಹಿಂದೆಯೇ ಜೊತೆಯಾಗಿ ಕೆಲ್ಸ ಮಾಡಿದ್ದಾರೆ. ಇದೀಗ ಆ್ಯಂಡಿ & ಫಾಫ್ ಮತ್ತೆ ಜೊತೆಯಾರೋದು ಟೀಮ್ ಕ್ಯಾಂಪ್​ನಲ್ಲಿ ಪಾಸಿಟೀವ್ ಮೂಡ್​​ ಅನ್ನೇ ಸೆಟ್ ಮಾಡೋದ್ರಲ್ಲಿ ಅನುಮಾನ ಇಲ್ಲ.

RCB ತಂಡದ ಆಟಗಾರರು ಹಾಗೂ ಸಿಬ್ಬಂದಿ

ಕೋಚ್​​ ಆ್ಯಂಡಿ ಫ್ಲವರ್​ಗೆ ಎಬಿ ಡಿವಿಲಿಯರ್ಸ್ ಸಾಥ್​..?

ಸದ್ಯ ಕೋಚ್ ಆಗಿ ನೇಮಕವಾಗಿರೋ ಆ್ಯಂಡಿ ಫ್ಲವರ್​ಗೆ ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಸಾಥ್​ ನೀಡುವ ಸಾಧ್ಯತೆ ಇದೆ. ತಂಡದ ಮೆಂಟರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇನಾದರು ನಿಜವಾದರೆ, ಈ ಡೆಡ್ಲಿ ಕಾಂಬಿನೇಷನ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹೊಸ ಅವತಾರವನ್ನೇ ಸೃಷ್ಟಿಸೋದು ಪಕ್ಕಾ

16 ವರ್ಷದಿಂದ ತೀರದ ಟ್ರೋಫಿ ಬರ ಈ ಸಲ ತೀರುತ್ತಾ..?

16 ಐಪಿಎಲ್​ 16 ಆವೃತ್ತಿ ಕಳೆದ್ರೂ ಆರ್​ಸಿಬಿಗೆ ಟ್ರೋಫಿ ಮಾತ್ರ ಮರೀಚಿಕೆ ಆಗಿದೆ. ಇದೀಗ ಕೋಚಿಂಗ್​ ಸಿಬ್ಬಂದಿಯಲ್ಲಿ ಬದಲಾವಣೆಯಾಗಿದೆ. ಚಾಂಪಿಯನ್ ಕೋಚ್ ಆರ್​ಸಿಬಿಗೆ ಸೇರಿದ್ದಾರೆ. ಹೀಗಾಗಿ ಆರ್​ಸಿಬಿ ಟ್ರೋಫಿ ಬರ ನೀಗುತ್ತೆ ಅನ್ನೋದು ಕೋಟ್ಯಾಂತರ ಅಭಿಮಾನಿಗಳ ಭರವಸೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಎಂದಿಗೂ ಸೋಲದ ಕೋಚ್​ ಆ್ಯಂಡಿ ಫ್ಲವರ್​.. ಎಂದಿಗೂ ಕಪ್​ ಗೆಲ್ಲದ RCB ಆಸೆ ಈಡೇರಬಹುದೇ?

https://newsfirstlive.com/wp-content/uploads/2023/08/RCB_VIRAT_KOHLI.jpg

Load More