ಪೊಲೀಸರನ್ನೇ ಪ್ರಶ್ನೆ ಮಾಡುತ್ತೀಯಾ ಎಂದು ಅವಾಜ್ ಹಾಕ್ತಿದ್ರು
ಕೆಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲಿವೆ ಕೇಸ್ಗಳು
ನಿರ್ಜನ ಪ್ರದೇಶದಲ್ಲಿ ಸಾಗುವ ಒಬ್ಬಂಟಿಗರೇ ಇವರ ಟಾರ್ಗೆಟ್
ಬೆಂಗಳೂರು: ಡ್ರಗ್ ಇನ್ಸ್ಪೆಕ್ಟರ್ಗಳ ಸೋಗಿನಲ್ಲಿ ಒಂಟಿಯಾಗಿ ಹೋಗುತ್ತಿದ್ದವರ ಮೊಬೈಲ್ಗಳನ್ನ ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇಂದ್ರ, ಚರಣ್, ಚನ್ನಕೇಶವ, ವೆಂಕಟೇಶ ಹಾಗೂ ಬಸವರಾಜ್ ಬಂಧಿತರು. ಈ ಆರೋಪಿಗಳು ಡ್ರಗ್ಸ್ ಇನ್ಸ್ಪೆಕ್ಟರ್ಗಳ ಸೋಗಿನಲ್ಲಿ ಎಂಟ್ರಿ ಕೊಡುತ್ತಿದ್ದರು. ಬಳಿಕ ಒಂಟಿಯಾಗಿ ಹೋಗುತ್ತಿದ್ದವರನ್ನು ಟಾರ್ಗೆಟ್ ಮಾಡಿ ಗಾಂಜಾ ಸೇವಿಸಿದ್ದೀರಾ ಎನ್ನುತ್ತಾ ತಪಾಸಣೆ ಮಾಡುತ್ತಿದ್ದರು. ಯಾರದರೂ ಎದುರು ಮಾತನಾಡಿದ್ರೆ ಪೊಲೀಸರನ್ನೇ ಪ್ರಶ್ನೆ ಮಾಡುತ್ತೀರಾ ಎಂದು ಅವಾಜ್ ಹಾಕಿ ಸುಳ್ಳು ಕೇಸ್ ಮೇಲೆ ಅರೆಸ್ಟ್ ಮಾಡುತ್ತೇವೆ ಎಂದು ಮೊಬೈಲ್ ಅನ್ನು ಕಸಿದುಕೊಳ್ಳುತ್ತಿದ್ದರು.
ಬಳಿಕ ಮೊಬೈಲ್ ಚೆಕ್ ಮಾಡುವ ನೆಪದಲ್ಲಿ ಕಸಿದುಕೊಂಡು ಸ್ಟೇಷನ್ಗೆ ಬನ್ನಿ ವಿಚಾರಣೆ ಮಾಡಬೇಕೆಂದು ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದರು. ಬಂಧಿತ ಗ್ಯಾಂಗ್ ಮೇಲೆ ಜಿಗಣಿ ಸೇರಿದಂತೆ ಹಲವು ಠಾಣೆಗಳಲ್ಲಿ ಈ ಮೊದಲೇ ಕೆಲ ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಗಳ ಪೊಲೀಸ್ ಸೋಗನ್ನು ಕಾರ್ಯಾಚರಣೆ ಮಾಡಿ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ