ಕೈಚಳಕ ತೋರಿದ ಕಳ್ಳರನ್ನ ಬಂಧಿಸುವಂತೆ ಮಹಿಳೆಯರ ಆಗ್ರಹ
100 ರೂ. ನೋಟಿಗೆ ಮಂಕಾಗುವ ದ್ರಾವಣ ಸಿಂಪಡಿಸಿರುವ ಸಾಧ್ಯತೆ
ಆರೋಪಿಗಳ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ, ತನಿಖೆ..?
ಬೆಂಗಳೂರು: ಬೈಕ್ನಲ್ಲಿ ಬಂದ ಕದೀಮರು ದೇವರಿಗೆ ಪೂಜೆ ಮಾಡಿಕೊಡುವಂತೆ ಹೇಳಿ ಇಬ್ಬರ ಮಹಿಳೆಯರ ಮಾಂಗಲ್ಯ ಸರಗಳನ್ನು ಕದ್ದು ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಬ್ಯಾಗಡದೇನಹಳ್ಳಿ ಮುನಿರತ್ನಮ್ಮ ಎನ್ನುವವರ 45 ಗ್ರಾಂ ಚಿನ್ನದ ಮಾಂಗಲ್ಯ ಹಾಗೂ ಜಂಗಲ್ ಪಾಳ್ಯದ ವಿಜಯಮ್ಮ ಎನ್ನುವವರ 110 ಗ್ರಾಂ ಬಂಗಾರದ ಮಾಂಗಲ್ಯ ಸರ ಕಳೆದುಕೊಂಡವರು. ಇಬ್ಬರು ಖದೀಮರು ಬೈಕ್ನಲ್ಲಿ ಬಂದು ದೇವಸ್ಥಾನದಲ್ಲಿ ಮೂಜೆ ಮಾಡಿಕೊಡುವಂತೆ ಕೇಳಿದ್ದಾರೆ. ಇದಕ್ಕೆ ಮೊದಲು ಇಬ್ಬರು ಒಪ್ಪಿಲ್ಲ ನೀವೇ ಮಾಡಿಕೊಳ್ಳಿ ಎಂದಿದ್ದಾರೆ. ಹೊಸದಾಗಿ ಬಂಗಾರದ ಅಂಗಡಿಗೆ ಒಳ್ಳೆಯದಾಗಲೆಂದು ಪೂಜೆ ಮಾಡಿಕೊಡುವಂತೆ ಖದೀಮರು ಒತ್ತಾಯಿಸಿದ್ದಾರೆ. ಪೂಜೆ ಮಾಡಲು ಒಪ್ಪಿದ ಮಹಿಳೆಯರಿಗೆ ಹೂ, ತೆಂಗಿನಕಾಯಿ ಮತ್ತು 100 ರೂಪಾಯಿ ನೋಟು ನೀಡಿದ್ದಾರೆ. ತಕ್ಷಣ ಮಹಿಳೆಯರಿಗೆ ಮಂಕು ಕವಿದಂತಾಗಿದೆ. ಬಳಿಕ ಕಳ್ಳರು ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕದ್ದಿದ್ದಾರೆ. ಪೂಜೆಗೆಂದು ಕೊಟ್ಟಿದ್ದ 100 ರೂ.ಯನ್ನು ವಾಪಸ್ ಪಡೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಐದಾರು ನಿಮಿಷದ ಬಳಿಕ ಮಹಿಳೆಯರಿಗೆ ಸರ ಕಳೆದುಕೊಂಡಿರುವುದು ಗಮನಕ್ಕೆ ಬಂದಿದ್ದು ದಿಕ್ಕು ದೋಚದಂತೆ ಆಗಿದೆ. 100 ರೂಪಾಯಿ ನೋಟಿಗೆ ಯಾವುದಾದರೂ ದ್ರಾವಣ ಸಿಂಪಡಿಸಿರುವ ಸಾಧ್ಯತೆ ಇದ್ದು ಇದರಿಂದ ಮಂಕಾಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕಳ್ಳರ ಕಥೆ ತಿಳಿದು ಆನೇಕಲ್ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆ ಸಂಬಂಧ ಆನೇಕಲ್ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳ ಚಟುವಟಿಕೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ