newsfirstkannada.com

‘Timed out’ ವಿವಾದಕ್ಕೆ ವಿಡಿಯೋ ಸಾಕ್ಷಿ ಕೊಟ್ಟ ಮ್ಯಾಥ್ಯೂಸ್; ಇದು 4ನೇ ಅಂಪೈರ್ ತಪ್ಪೆಂದು ಆಕ್ರೋಶ..!

Share :

07-11-2023

    ವಿಶ್ವಕಪ್​ ಕ್ರಿಕೆಟ್​ನಲ್ಲಿ ಟೈಮ್ಡ್​ ಔಟ್ ವಿವಾದ

    ಐಸಿಸಿ ಟ್ವೀಟ್​ಗೆ ವಿಡಿಯೋ ಸಾಕ್ಷಿ ನೀಡಿದ ಮ್ಯಾಥ್ಯೂಸ್

    ಅಂಪೈರ್ ಮಾಡಿದ ತಪ್ಪಿಗೆ ಲಂಕಾ ಆಟಗಾರ ಔಟ್..?

ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಎಂಜೆಲೋ ಮ್ಯಾಥ್ಯೂಸ್ ಟೈಮ್ಡ್​ ಔಟ್ ಆಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಂಪೈರ್ ನಿರ್ಧಾರಕ್ಕೆ ಕೋಪಿಸಿಕೊಂಡು ಹೆಲ್ಮೆಟ್ ಬೀಸಾಡಿದ್ದ ಮ್ಯಾಥ್ಯೂಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಎವಿಡೆನ್ಸ್ ನೀಡಿದ್ದಾರೆ.

ಸುದೀರ್ ಸಮರವಿಕ್ರಮ ಔಟ್ ಆಗಿರುವ ವೇಳೆ ಸಮಯ ಎಷ್ಟಾಗಿತ್ತು? ತಾವು ಹೆಲ್ಮೆಟ್ ಧರಿಸಿ ಆಡಲು ಕ್ರೀಸ್​ಗೆ ಬಂದ ಸಂದರ್ಭದಲ್ಲಿ ಎಷ್ಟು ಸಮಯ ಆಗಿತ್ತು ಎಂದು ಹೇಳುತ್ತಿರುವ ಎರಡು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: 146 ವರ್ಷಗಳ ಬಳಿಕ ಫಸ್ಟ್​ ಟೈಂ..! ಒಂದೂ ಬಾಲ್ ಎದುರಿಸದೇ ‘Timed Out’ ನಿಯಮಕ್ಕೆ ಬಲಿಯಾದ ಲಂಕಾ ಆಟಗಾರ..!

ಮೊದಲನೇ ಫೋಟೋದಲ್ಲಿ ಸದೀರ್ ಅವರ ಕ್ಯಾಚ್ ಹಿಡಿಯುತ್ತಿರುವ ಅವಧಿಯನ್ನು ತೋರಿಸಿದ್ರೆ, ಇನ್ನೊಂದು ಫೋಟೋ ತಾವು ಹೆಲ್ಮೆಟ್ ಧರಿಸಿ ಕ್ರೀಸ್​ನಲ್ಲಿ ನಿಂತಿರುವ ಫೋಟೋ ಆಗಿದೆ. ಈ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡಿ ಬರೆದುಕೊಂಡಿರುವ ಮ್ಯಾಥ್ಯೂಸ್​.. ಕ್ಯಾಚ್ ಹಿಡಿದ ಕ್ಷಣದಿಂದ ಮುಂದೆ ನಡೆದ ಬಳವಣಿಗೆಯ ಕುರಿತ ಸಾಕ್ಷಿಗಳು ಇಲ್ಲಿವೆ. ಇಲ್ಲಿ 4ನೇ ಅಂಪೈರ್ ತಪ್ಪು ಮಾಡಿದ್ದಾರೆ! ಹೆಲ್ಮೆಟ್ ನೀಡಿದ ನಂತರವೂ ನನ್ನ ಬಳಿ 5 ಸೆಕೆಂಡುಗಳನ್ನು ಉಳಿದಿದ್ದವು. ಅದನ್ನು ನಾನು ಹೇಳುತ್ತಿಲ್ಲ ವೀಡಿಯೊ ಸಾಕ್ಷಿಯೇ ತೋರಿಸುತ್ತದೆ! ದಯವಿಟ್ಟು 4ನೇ ಅಂಪೈರ್ ಇದನ್ನು ಸರಿಪಡಿಸಬಹುದೇ? ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಇಲ್ಲದೆ ಬೌಲರ್ ಎದುರಿಸಲು ಸಾಧ್ಯವಿಲ್ಲ. ನಮಗೆ ಸುರಕ್ಷತೆಯೂ ಅತಿಮುಖ್ಯವಾಗಿದೆ ಎಂದರ್ಥ ಎಂದು ಬರೆದುಕೊಂಡಿದ್ದಾರೆ. ಐಸಿಸಿ ಮಾಡಿದ್ದ ಟ್ವೀಟ್​ಗೆ ಎಂಜೆಲೋ ಮ್ಯಾಥ್ಯೂಸ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಅಷ್ಟೇ ಅಲ್ಲ, ಮ್ಯಾಥ್ಯೂಸ್ ಪರ ಬ್ಯಾಟ್ ಬೀಸಿರುವ ಹರ್ಭಜನ್ ಸಿಂಗ್, ಗೌತಮ್ ಗಂಭಿರ್ ಅವರ ಟ್ವೀಟ್​ಗಳನ್ನು ರೀಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘Timed out’ ವಿವಾದಕ್ಕೆ ವಿಡಿಯೋ ಸಾಕ್ಷಿ ಕೊಟ್ಟ ಮ್ಯಾಥ್ಯೂಸ್; ಇದು 4ನೇ ಅಂಪೈರ್ ತಪ್ಪೆಂದು ಆಕ್ರೋಶ..!

https://newsfirstlive.com/wp-content/uploads/2023/11/Angelo-Mathews-1.jpg

Load More