newsfirstkannada.com

VIDEO: ಸಾಕ್ಷಿ ಇಲ್ಲಿದೆ ನೋಡಿ.. ಟೈಮ್ ಔಟ್ ಅಂಪೈರ್​ ವಿರುದ್ಧ ಮತ್ತೆ ಬೇಸರ ಹೊರ ಹಾಕಿದ ಮ್ಯಾಥ್ಯೂಸ್!

Share :

08-11-2023

    ಬಾಂಗ್ಲಾ-ಲಂಕಾ ಪಂದ್ಯದ ವೇಳೆ ವಿಚಿತ್ರವಾಗಿ ಮ್ಯಾಥ್ಯೂಸ್ ಔಟ್​

    1 ಬಾಲ್​ಗೂ ಬ್ಯಾಟ್​ ಬೀಸದೇ ಪೆವಿಲಿಯನ್​ಗೆ ನಡೆದ ಆಟಗಾರ

    ಈ ವಿಶ್ವಕಪ್​ ರೂಲ್ಸ್ ಪ್ರಕಾರ 2 ನಿಮಿಷದಲ್ಲಿ ಕ್ರೀಸ್​ಗೆ ಬರಬೇಕಾ.?

ವಿವಾದಕ್ಕೆ ಕಾರಣವಾಗಿರುವ ಟೈಮ್ ಔಟ್ ಬಗ್ಗೆ ಲಂಕಾ ಸ್ಟಾರ್ ಆಲ್​ರೌಂಡರ್​ ಏಂಜೆಲೊ ಮ್ಯಾಥ್ಯೂಸ್ ವಿಡಿಯೋ ಸಾಕ್ಷಿ ನೀಡಿದ್ದಾರೆ. ಟ್ವಿಟರ್​​ನಲ್ಲಿ ಶೇರ್ ಮಾಡಿರುವ ವೀಡಿಯೊದಲ್ಲಿ ಹೆಲ್ಮೆಟ್ ನೀಡಿದ ನಂತರವೂ ಇನ್ನು 5 ಸೆಕೆಂಡ್​​ ಇತ್ತು. ಆದರೆ ಇದನ್ನು ಗಮನಿಸದೇ ಔಟ್ ಕೊಟ್ಟಿದ್ದಾರೆ. 4ನೇ ಅಂಪೈರ್ ಸರಿಪಡಿಸಬಹುದಿತ್ತು ಎಂದು ಮ್ಯಾಥ್ಯೂಸ್ ಕೇಳಿದ್ದಾರೆ.

ಬಾಂಗ್ಲಾ ವಿರುದ್ಧ ಪಂದ್ಯದ ವೇಳೆ ಸದೀರ ಸಮರ ವಿಕ್ರಮ ಔಟ್​ ಆದ 2 ನಿಮಿಷಗಳ ಒಳಗೆ ಮ್ಯಾಥ್ಯೂಸ್ ಕ್ರೀಸ್‌ಗೆ ಬಂದಿಲ್ಲ ಎಂದು ಬಾಂಗ್ಲಾ ಕ್ಯಾಪ್ಟನ್​ ಶಕೀಬ್ ಅಲ್​ ಹಸನ್ ಅಪೀಲ್ ಮಾಡಿದರು. ಹೀಗಾಗಿ ಅಂಪೈರ್,​ ಮ್ಯಾಥ್ಯೂಸ್​ರನ್ನು ಔಟ್​ ಎಂದು ಘೋಷಣೆ ಮಾಡಿ ಮೈದಾನದಿಂದ ಹಿಂದಕ್ಕೆ ಕಳುಹಿಸಿದರು. ವಿಶ್ವಕಪ್ ಕ್ರಿಕೆಟ್‌ನ ನಿಯಮದ ಪ್ರಕಾರ 2 ನಿಮಿಷದ ಒಳಗೆ ಬ್ಯಾಟಿಂಗ್ ಮಾಡಲು ಬ್ಯಾಟ್ಸ್​ಮನ್​ ಕ್ರೀಸ್​ ಅನ್ನು ತಲುಪಬೇಕು. ಆದರೆ, ಮ್ಯಾಥ್ಯೂಸ್ ಈ ನಿಯಮವನ್ನು ಮೀರಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಈ ಸಂಬಂಧ ಕ್ರಿಕೆಟ್​ ಕ್ರೇತ್ರದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಮ್ಯಾಥ್ಯೂಸ್ ವಿಡಿಯೋವೊಂದನ್ನು ಶೇರ್ ಮಾಡಿ ಇನ್ನು 5 ಸೆಕೆಂಡ್​ಗಳು ಇದ್ದವು. ಈ ವೇಳೆ 4ನೇ ಅಂಪೈರ್​ ರನ್ನು ಕೇಳಬಹುದಿತ್ತು ಎಂದು ತಮ್ಮನ್ನು ಔಟ್​ ಕೊಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ 3 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಸಾಕ್ಷಿ ಇಲ್ಲಿದೆ ನೋಡಿ.. ಟೈಮ್ ಔಟ್ ಅಂಪೈರ್​ ವಿರುದ್ಧ ಮತ್ತೆ ಬೇಸರ ಹೊರ ಹಾಕಿದ ಮ್ಯಾಥ್ಯೂಸ್!

https://newsfirstlive.com/wp-content/uploads/2023/11/Angelo_Mathews.jpg

Load More