ಬಾಂಗ್ಲಾದೇಶ-ಶ್ರೀಲಂಕಾ ಪಂದ್ಯದಲ್ಲಿ ಭಾರೀ ಹೈಡ್ರಾಮಾ
ಬಾಂಗ್ಲಾ ಟೈಮ್ಡ್ ಔಟ್ ಮನವಿ ಪುರಸ್ಕರಿಸಿದ ಅಂಪೈರ್ಸ್
ಏನಿದು ‘Timed Out’ ರೂಲ್ಸ್..? ಏನ್ ಹೇಳುತ್ತೆ..?
ವಿಶ್ವಕಪ್ನಲ್ಲಿ ನಿನ್ನೆ ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ನಾಟಕೀಯ ಬೆಳವಣಿಗೆಗೆ ಸಾಕ್ಷಿ ಆಯಿತು. ಅದಕ್ಕೆ ಕಾರಣ ಲಂಕಾ ತಂಡದ ಅನುಭವಿ ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಅವರ ವಿಕೆಟ್. ಕ್ರೀಸ್ಗೆ ಬಂದು ಒಂದೂ ಬಾಲ್ ಎದುರಿಸದೇ ಟೈಮ್ಡ್ ಔಟ್ ಆದರು.
ಅಸಲಿಗೆ ಆಗಿದ್ದು ಏನು..?
ಕ್ರಿಕೆಟ್ ಇತಿಹಾಸದಲ್ಲೇ, ಬರೋಬ್ಬರಿ 146 ವರ್ಷಗಳ ಬಳಿಕ ಆಟಗಾರನೊಬ್ಬರ ಟೈಮ್ಡ್ ಔಟ್ ನಿಯಮಕ್ಕೆ ಬಲಿಯಾಗಿದ್ದಾರೆ. ಲಂಕಾ ತಂಡದ ಸುದೀರ್ ಸಮರವಿಕ್ರಮ ಔಟ್ ಆದ ನಂತರ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಏಂಜೆಲೋ ಮ್ಯಾಥ್ಯೂಸ್ ಕ್ರೀಸ್ಗೆ ಬಂದಿದ್ದರು. ಕ್ರೀಸ್ಗೆ ಬರುತ್ತಿದ್ದಂತೆಯೇ ತಾವು ತಂದಿದ್ದ ಹೆಲ್ಮೆಟ್ ಹರಿದು ಹೋಗಿರೋದನ್ನು ಗಮನಿಸುತ್ತಾರೆ. ಕೂಡಲೇ ಮ್ಯಾಥ್ಯೂಸ್, ಡಕೌಟ್ನಲ್ಲಿದ್ದ ಆಟಗಾರರಿಗೆ ಹೆಲ್ಮೆಟ್ ತರುವಂತೆ ಸೂಚನೆ ನೀಡುತ್ತಾರೆ. ಹೆಲ್ಮೆಟ್ ಕ್ರೀಸ್ಗೆ ಬರುವಷ್ಟರಲ್ಲಿ ಸಮಯ ಮಿತಿ ಮೀರುತ್ತದೆ. ಇದನ್ನು ಗಮನಿಸಿದ ಬಾಂಗ್ಲಾದೇಶದ ಆಟಗಾರರು, ಟೈಮ್ಡ್ ಔಟ್ಗೆ ಮನವಿ ಮಾಡಿಕೊಳ್ಳುತ್ತಾರೆ.
ಅಂಪೈರ್ಗಳಾದ ಮರಾಯಿಸ್ ಎರಸ್ಮಸ್ ಮತ್ತು ರಿಚರ್ಡ್ ಇಲಿವಿಂಗ್ ವರ್ಥ್ ಅವರು ಐಸಿಸಿ ಕ್ರಿಕೆಟ್ ನಿಯಮದಂತೆ ಮ್ಯಾಥ್ಯೂಸ್ ಔಟ್ ಎಂದು ತೀರ್ಪು ನೀಡುತ್ತಾರೆ. ಪರಿಣಾಮ ಮ್ಯಾಥ್ಯೂಸ್ ಒಂದೂ ಬಾಲ್ ಆಡದೇ ಔಟ್ ಆಗಬೇಕಾಯಿತು. ಇದರಿಂದ ಮುನಿಸಿಕೊಂಡ 36 ವರ್ಷದ ಲಂಕಾ ಆಟಗಾರ, ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಆದರೆ ಅದು ಯಾವುದೂ ಪ್ರಯೋಜನಕ್ಕೆ ಬರಲಿಲ್ಲ.
ಏನ್ ಹೇಳುತ್ತೆ ಐಸಿಸಿ ನಿಯಮ..?
ಒಬ್ಬ ಬ್ಯಾಟರ್ ಗಾಯಗೊಂಡು ಅಥವಾ ಔಟ್ ಆದ ನಂತರ ಕ್ರೀಸ್ನಿಂದ ನಿರ್ಗಮಿಸಿದ 2 ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಆಟಗಾರ ಕ್ರೀಸ್ಗೆ ಬಂದು ಆಟ ಆರಂಭಿಸಬೇಕು. ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ (40.1.1)ರ ನಿಯಮವಾಗಿದೆ. ಅಲ್ಲದೇ 40.1.2 ನಿಯಮದ ಪ್ರಕಾರ ಬ್ಯಾಟರ್ ಕ್ರೀಸ್ಗೆ ಬರುವುದು ವಿಳಂಬವಾದರೆ ಅಂಪೈರ್ಗಳು 16.3 ಅಡಿಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ. ಇಂತಹದೊಂದು ಘಟನೆ ಈ ಹಿಂದೆ ದೇಶಿಯ ಕ್ರಿಕೆಟ್ನಲ್ಲಿ ನಡೆದಿತ್ತು. 1997ರಲ್ಲಿ ಕಟಕ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ತ್ರಿಪುರಾ ಮತ್ತು ಒಡಿಶಾ ನಡುವಣ ಪಂದ್ಯದಲ್ಲಿ ಹೇಮುಲಾಲ್ ಅವರು ಈ ರೀತಿ ಔಟ್ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್