ಯಾರೂ ಕೂಡ ಊಹಾಪೋಹಾಗಳಿಗೆ ಕಿವಿಗೊಡಬಾರದು
ಊಹಾಪೋಹಾಗಳಿಗೆ ಕಿವಿಗೊಡಬೇಡಿ- ಅನಿತಾ ಕುಮಾರಸ್ವಾಮಿ
ಕುಮಾರಸ್ವಾಮಿಯವರು ಮನೆಗೆ ಹೋಗುವುದು ಯಾವಾಗ?
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದು ಯಾವುದೇ ಸಮಸ್ಯೆಯಿಲ್ಲ. ಅವರು ಆರೋಗ್ಯವಾಗಿದ್ದಾರೆ. ಯಾವುದೇ ಊಹಾಪೋಹಾಗಳಿಗೆ ಕಿವಿಗೊಡಬಾರದು ಎಂದು ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಹೇಳಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅನಿತಾ ಕುಮಾರಸ್ವಾಮಿ ಅವರು, ರಾಜ್ಯದ ಜನರು ಗಾಬರಿಪಡುವಂತದ್ದು ಏನು ಆಗಿಲ್ಲ. ದಯವಿಟ್ಟು ಯಾರು ಊಹಾಪೋಹಾ ಸುದ್ದಿಗಳಿಗೆ ಕಿವಿಗೊಡಬಾರದು. ಇತ್ತೀಚೆಗೆ ಐಲ್ಯಾಂಡ್ಗೆ ಹೋಗಿದ್ದೇವು. ಅಲ್ಲಿ ತುಂಬಾ ತಂಪು ಇದ್ದಿದ್ದರಿಂದ ಅಲ್ಲಿಂದ ಬಂದಾಗಿಂದ ಕಫ ಹಾಗೆ ಇತ್ತು. ಜೊತೆಗೆ ಮೈ, ಕೈನೋವಿನಿಂದ ಫೀವರ್ ಜಾಸ್ತಿ ಇತ್ತು. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಏನು ತೊಂದರೆಯಿಲ್ಲ. ಸ್ಟೇಬಲ್ ಆಗಿದ್ದಾರೆ. ಶುಕ್ರವಾರ ಮುಂಜಾನೆ ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿದರು.
ವೈದ್ಯರು ನಾಳೆಯೇ ಮನೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಆದ್ರೆ ಅವರನ್ನು ಮನೆಗೆ ಕರೆದುಕೊಂಡು ಹೋದರೆ ಅವರು ರೆಸ್ಟ್ ತೆಗೆದುಕೊಳ್ಳಲ್ಲ. ಮತ್ತೆ ತಿರುಗಾಡಲು ಶುರು ಮಾಡುತ್ತಾರೆ. ಹಾಗಾಗಿ ಶುಕ್ರವಾರ ಅಂದರೆ ನಾಡಿದ್ದು ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೆಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪಷ್ಟನೆ ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ