ಅಂಜುಗೆ ಮತ್ತೆ ನೆನಪಾಯ್ತಾ ಗಂಡ, ಮಕ್ಕಳು, ಭಾರತ?
ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳಂತೆ ಅಂಜು ಅಲಿಯಾಸ್ ಫಾತಿಮಾ
ಮುಂದಿನ ತಿಂಗಳು ಭಾರತಕ್ಕೆ ಮರಳುತ್ತಿದ್ದಾಳೆ 34 ವರ್ಷದ ಮಹಿಳೆ?
ಫೇಸ್ಬುಕ್ನಲ್ಲಿ ಪರಿಚಯವಾದ ಪ್ರೇಮಿಗಾಗಿ ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ್ದ 34 ವರ್ಷದ ಮಹಿಳೆ ಅಂಜು ಅಲಿಯಾಸ್ ಫಾತಿಮಾ ಮರಳಿ ಭಾರತಕ್ಕೆ ವಾಪಾಸ್ಸಾಗ್ತಿದ್ದಾಳೆ.
ಕಳೆದ ಜುಲೈ 25ರಂದು ಅಂಜು ಭಾರತ ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ತನ್ನ 4ವರ್ಷದ ಗೆಳೆಯ ನಸ್ರುಲ್ಲ್ನನ್ನು ಮದುವೆಯಾಗಿದ್ದಳು. ಇದೀಗ ಅಂಜು ತನ್ನ ಇಬ್ಬರ ಮಕ್ಕಳ ನೆನಪಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಮಕ್ಕಳನ್ನ ನೋಡಲು ಮುಂದಿನ ತಿಂಗಳು ಭಾರತಕ್ಕೆ ಮರಳ್ತಿದ್ದಾರೆ ಅನ್ನೋ ಸಂಗತಿ ಹರಿದಾಡುತ್ತಿದೆ.
ಘಟನೆ ಹಿನ್ನೆಲೆ..
ರಾಜಸ್ಥಾನ ಮೂಲದ ಅಂಜು, ಪಾಕಿಸ್ತಾನದಲ್ಲಿರುವ ಫೇಸ್ಬುಕ್ ಸ್ನೇಹಿತನನ್ನು ಭೇಟಿಯಾಗಲು ಹೋಗಿದ್ದಳು. ಪಾಕಿಸ್ತಾನಕ್ಕೆ ಹೋದ ಮೇಲೆ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನಸ್ರುಲ್ಲಾನನ್ನು ಮದುವೆ ಆಗಿದ್ದಾಳೆ. ಮಕ್ಕಳನ್ನು ಬಿಟ್ಟು ಹೋದ ಅಂಜು ವಿರುದ್ಧ ಆಕೆಯ ಗಂಡ ತೀವ್ರ ಆಕ್ರೋಶ ಕೂಡ ವ್ಯಕ್ತಪಡಿಸಿದ್ದನು.
ಅಂಜುಗಾಗಿ ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ದುಬಾರಿ ಗಿಫ್ಟ್‌ಗಳನ್ನು ಕೊಟ್ಟಿದ್ದರು. ಪಾಕಿಸ್ತಾನದ 10 ಮೊರ್ಲಾ ಜಾಗದ ಮನೆ ಅಂದ್ರೆ ದುಬಾರಿಯಾದ ಬಂಗಲೆಯನ್ನು ಅಂಜುಗೆ ನೀಡಿರುವ ಸಂಗತಿ ಕೂಡ ಬೆಳಕಿಗೆ ಬಂದಿತ್ತು. ಪಾಕಿಸ್ತಾನದ PKR 50,000 ಚೆಕ್ ಅನ್ನು ಆಕೆ ಕೈಗೆ ಹಸ್ತಾಂತರಿಸಲಾಗಿದೆ. ಅಂಜುಳನ್ನು ಭೇಟಿಯಾಗುತ್ತಿರುವ ಪಾಕ್ ಉದ್ಯಮಿಯ ಸ್ನೇಹಿತರು ಅನೇಕ ಉಡುಗೊರೆಗಳ ಮಹಾಪೂರವನ್ನೇ ಹರಿಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳು ಬಿತ್ತರಿಸಿದ್ದವು.
ಆದರೀಗ ಅಂಜು ಭಾರತಕ್ಕೆ ಬರುತ್ತಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆಕೆಗೆ ಭಾರತದಲ್ಲಿರುವ ಮಕ್ಕಳ ಭೇಟಿಗೆ ಅವಕಾಶ ಮಾಡಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ