newsfirstkannada.com

ಮಾಡೆಲ್ ಆದ ಅಂಜು.. ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌; ಬ್ರಾಂಡ್ ಅಂಬಾಸಿಡರ್ ಮಾಡಲು ಪಾಕಿಸ್ತಾನದಲ್ಲಿ ಪೈಪೋಟಿ

Share :

26-08-2023

    ಫೇಸ್‌ಬುಕ್‌ನಲ್ಲಿ ಪ್ರೀತಿ ಹುಟ್ಟಿ ಪಾಕಿಸ್ತಾನಕ್ಕೆ ಹೋಗಿರುವ ಅಂಜು

    ಅಂಜು ಜೊತೆ ಸೆಲ್ಫಿಗೆ ಮುಗಿಬೀಳುತ್ತಿರುವ ಪಾಕಿಸ್ತಾನದ ಜನರು

    ಅಂಜುಗೆ ಬ್ರಾಂಡ್ ಅಂಬಾಸಿಡರ್ ಆಗೋ ಭರ್ಜರಿ ಆಫರ್‌ಗಳು

ಪೇಶಾವರ: ಫೇಸ್‌ಬುಕ್‌ನಲ್ಲಿ ಪ್ರೀತಿ ಹುಟ್ಟಿ ಪಾಕಿಸ್ತಾನಕ್ಕೆ ಹೋಗಿರುವ ಅಂಜು ಬದುಕು ಬದಲಾಗಿದೆ. ತನ್ನ ಗೆಳೆಯ ನಸ್ರುಲ್ಲಾ ಜೊತೆ ಕಾಲ ಕಳೆಯುತ್ತಿರುವ ಅಂಜು ಈಗ ಅಲ್ಲಿ ಮಾಡೆಲ್ ಆಗಿದ್ದಾರಂತೆ. ಅಷ್ಟೇ ಅಲ್ಲ ಅಂಜು ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ಪಾಕಿಸ್ತಾನದ ಹಲವು ಜಾಹೀರಾತು ಕಂಪನಿಗಳು ಪೈಪೋಟಿಗೆ ಬಿದ್ದಿವೆ. ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಅಂಜುನೇ ಬೇಕು ಎನ್ನುತ್ತಿರುವ ಕಂಪನಿಗಳು ಭರ್ಜರಿ ಆಫರ್‌ಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಅಂಜು ಮಾತ್ರ ಈ ಆಫರ್‌ಗಳಲ್ಲಿ ಯಾವೊಂದನ್ನೂ ಇನ್ನೂ ಫೈನಲ್ ಮಾಡಿಲ್ಲ.

ಕಳೆದ 2 ತಿಂಗಳ ಹಿಂದೆ ರಾಜಸ್ಥಾನದಲ್ಲಿದ್ದ ಅಂಜು ಫೇಸ್‌ಬುಕ್ ಪ್ರಿಯಕರನ ಬಲೆಗೆ ಬಿದ್ದಿದ್ದಳು. ರಾಜಸ್ಥಾನದಲ್ಲಿ ಮದುವೆಯಾಗಿದ್ದ ಅಂಜು ತನ್ನ ಗಂಡ ಹಾಗೂ 2 ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದಳು. ಇದೀಗ ಅಲ್ಲಿ ನಸ್ರುಲ್ಲಾ ಎಂಬಾತನನ್ನು ಮದುವೆಯಾಗಿ ಫಾತೀಮಾಳಾಗಿ ಬದಲಾಗಿದ್ದಾಳೆ. ಭಾರತದಿಂದ ಬಂದ ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗುರಿಯಾಗಿತ್ತು. ಹೀಗೆ ಅಂಜು ಫೇಮಸ್ ಆಗುತ್ತಿದ್ದಂತೆ ಪಾಕಿಸ್ತಾನದ ಕಂಪನಿಗಳು ಆಕೆಯನ್ನು ಬ್ರಾಂಡ್ ಅಂಬಾಸಿಡರ್ ಮಾಡೋ ಆಫರ್ ಕೊಟ್ಟಿವೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋದ ಅಂಜುಗೆ ಉಡುಗೊರೆಗಳ ಮಹಾಪೂರ; ಮನೆ, ಭೂಮಿ, ದುಡ್ಡು ಏನೆಲ್ಲಾ ಸಿಕ್ತು?

ಅಂಜು ಭಾರತವನ್ನು ಬಿಟ್ಟು ನಸ್ರುಲ್ಲಾನನ್ನು ಮದುವೆಯಾದಾಗಿನಿಂದ ಪಾಕಿಸ್ತಾನದ ಸುದ್ದಿ ಮಾಧ್ಯಮಗಳಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗಿದ್ದಾಳೆ. ಅಂಜು ಎಷ್ಟು ಫೇಮಸ್ ಆಗಿದ್ದಾಳೆ ಅಂದ್ರೆ, ಆಕೆ ಶಾಪಿಂಗ್ ಮಾಡಲು ಹೋದಾಗ ಜನ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಅಂಜು, ನಸ್ರುಲ್ಲಾಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವು ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳಲ್ಲಿ ಅಂಜು ಖರೀದಿಸಿದ ವಸ್ತುಗಳಿಗೆ ಹಣವನ್ನೇ ಸ್ವೀಕರಿಸುತ್ತಿಲ್ಲ ಎಂದು ಪಾಕ್ ಸುದ್ದಿ ಪತ್ರಿಕೆಗಳು ವರದಿ ಮಾಡಿವೆ. ಅಂಜುಗೆ ಸಿಕ್ಕ ಈ ಜನಪ್ರಿಯತೆ ಆಕೆಗೆ ಜಾಹೀರಾತು ಕಂಪನಿಗಳು ಭರ್ಜರಿ ಆಫರ್ ನೀಡಲು ಕಾರಣವಾಗಿದೆ.

ನಂಗೆ ಡಿವೋರ್ಸ್ ಕೊಟ್ಟಿಲ್ಲ.. ಬೇರೆ ವ್ಯಕ್ತಿ ಜೊತೆ ಮದ್ವೆ ಆಗಲು ಸಾಧ್ಯವೇ ಇಲ್ಲ -ಪಾಕ್​ಗೆ ಓಡಿ ಹೋಗಿರುವ ಅಂಜು ಪತಿ ಆಕ್ರೋಶ

ಪಾಕಿಸ್ತಾನದಲ್ಲಿ ಅಂಜು ಜನಪ್ರಿಯತೆ ದಿನಕಳೆದಂತೆ ಹೆಚ್ಚಾಗಿದೆ. ಅನೇಕ ಬ್ರಾಂಡ್‌ಗಳ ಕಂಪನಿಗಳು ತಮ್ಮ ಉತ್ಪನ್ನಗಳ ಜಾಹೀರಾತಿಗಾಗಿ ಈಕೆಯ ಹಿಂದೆ ಬಿದ್ದಿವೆ. ಕೆಲವು ದಿನಗಳ ಹಿಂದೆ ಅಂಜು ಮೇಕಪ್‌ ಕ್ರೀಮ್‌ ಖರೀದಿಸಲು ಅಂಗಡಿಗೆ ಹೋಗಿದ್ದಾರೆ. ಆಗ ಅಂಗಡಿಯವರು ಹಣ ಕೇಳದೇ ತಮ್ಮ ಬ್ಯೂಟಿ ಕ್ರೀಮ್‌ ಪ್ರಚಾರದ ವಿಡಿಯೋ ಮಾಡಿಕೊಡಲು ಕೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಅಂಜುಳನ್ನು ಬ್ರಾಂಡ್ ಅಂಬಾಸಿಡರ್ ಮಾಡಲು ಪೈಪೋಟಿ ನಡೆದಿದೆ.

ಅಂಜು ಅವರ ಪತಿ ನಸ್ರುಲ್ಲಾ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸದ್ಯ ಯಾವುದೇ ದೊಡ್ಡ ಬ್ರಾಂಡ್‌ನಿಂದ ಜಾಹೀರಾತಿಗೆ ಅವಕಾಶ ಬಂದಿಲ್ಲ. ಅಂತಹ ಆಫರ್ ಬಂದರೆ ಅಂಜು ಖಂಡಿತಾ ಮಾಡಬಹುದು. ನನ್ನ ಕಡೆಯಿಂದ ಯಾವುದೇ ನಿರ್ಬಂಧವಿಲ್ಲ. ಅಂಜು ಅಂತಹ ಪ್ರಮುಖ ನಿರ್ಧಾರವನ್ನು ಅವಳೇ ತೆಗೆದುಕೊಳ್ಳುತ್ತಾಳೆ ಎಂದಿದ್ದಾರೆ. ಆದರೆ ಇತ್ತೀಚೆಗೆ ಅಂಜು ಕೆಲವು ವೈಯಕ್ತಿಕ ಕಾರಣಗಳಿಂದ ಬೇಸರಗೊಂಡಿದ್ದಾರೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಜಾಹೀರಾತುಗಳಲ್ಲಿ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಾಡೆಲ್ ಆದ ಅಂಜು.. ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌; ಬ್ರಾಂಡ್ ಅಂಬಾಸಿಡರ್ ಮಾಡಲು ಪಾಕಿಸ್ತಾನದಲ್ಲಿ ಪೈಪೋಟಿ

https://newsfirstlive.com/wp-content/uploads/2023/07/Anju-2.jpg

Load More