newsfirstkannada.com

ಫೇಸ್​​ಬುಕ್ ಪ್ರಿಯತಮನಿಗಾಗಿ ಪಾಕ್​ಗೆ ಹೋದ 2 ಮಕ್ಕಳ ತಾಯಿ.. ಭಾರತದಲ್ಲಿರುವ ಗಂಡನ ನೋವು ಏನು ಗೊತ್ತಾ..?

Share :

24-07-2023

    ಸೀಮಾ ಹೈದರ್ ಮಾದರಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ

    ಗಂಡನಿಗೆ ತಿಳಿಸದೇ ಗುಟ್ಟಾಗಿ ಪಾಕ್​​ಗೆ ಹೋದ ರಾಜಸ್ಥಾನದ ಮಹಿಳೆ

    ಫೇಸ್​ಬುಕ್​​ನಲ್ಲಿ ಪರಿಚಯ.. ವಾಟ್ಸ್​​ಆ್ಯಪ್​​ನಲ್ಲಿ ಚಾಟಿಂಗ್..!

ಪಬ್​​ಜೀ ಗೇಮ್ ಆಡುವಾಗ Love ಆಗಿ ಭಾರತಕ್ಕೆ ಅಕ್ರಮವಾಗಿ ಸೀಮಾ ಹೈದರ್​ ಬಂದ ಪ್ರಕರಣ ಇನ್ನೂ ಬಿಸಿಬಿಸಿ ಚರ್ಚೆಯಲ್ಲಿದೆ. ಇದೀಗ ಅದೇ ಮಾದರಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಭಾರತದ ಇಬ್ಬರು ಮಕ್ಕಳ ತಾಯಿ ಒಬ್ಬರು ಪಾಕಿಸ್ತಾನಕ್ಕೆ ಹೋಗಿದ್ದಾಳೆ.

ಜಸ್ಥಾನದ ಭಿವಾಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಘಟನೆ ಇದಾಗಿದೆ. ವಿವಾಹಿತ ಮಹಿಳೆ ಅಂಜು ಎಂಬಾಕೆ ತಾನು ಫೇಸ್​ಬುಕ್​ನಲ್ಲಿ ಪರಿಚಯಗೊಂಡ ವ್ಯಕ್ತಿಯೊಬ್ಬನ ಜೊತೆಗೆ ಸ್ನೇಹ ಬೆಳೆದು ಕೊನೆಗೆ ಸ್ನೇಹ ಪ್ರೀತಿಗೆ ತಿರುಗಿ ಆತನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದಾಳೆ. ಪಾಕ್​ನ ವಾಯುವ್ಯ ಖೈಬರ್​ ಫಖ್ತುಂಕ್ವಾ ಪ್ರಾಂತ್ಯಕ್ಕೆ ತೆರಳಿದ್ದಾಳೆ.

ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಪರಿಚಯ; ಲವ್ವರ್​​ಗಾಗಿ ಭಾರತದ ಗಡಿ ದಾಟಿ ಪಾಕ್​ಗೆ ಹೋದ 2 ಮಕ್ಕಳು ತಾಯಿ!

ಪ್ರಕರಣ ಸಂಬಂಧ ರಾಜಸ್ಥಾನ ಪೊಲೀಸರು ಆಕೆಯ ಗಂಡ ಅರವಿಂದ್ ಮನೆಗೆ ಎಂಟ್ರಿಯಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹೆಂಡತಿ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾನೆ. ಮನೆಯಿಂದ ಆಕೆ ಹೊರಡುವಾಗ, ಜೈಪುರದಲ್ಲಿ ನನ್ನ ಸ್ನೇಹಿತರಿದ್ದಾರೆ. ಅಲ್ಲಿಗೆ ಹೋಗುವುದಾಗಿ ಹೇಳಿ ಮನೆ ಬಿಟ್ಟು ಹೋಗಿದ್ದಳು. ಕಳೆದ ರಾತ್ರಿ ನನಗೆ ಫೋನ್ ಬಂದಿದೆ. ನಾನು ಪಾಕಿಸ್ತಾನದ ಲಾಹೋರ್​​ನಲ್ಲಿ ಇದ್ದೇನೆ. ನನಗೆ ಆಕೆ ಲಾಹೋರ್​ಗೆ ಹೋಗುತ್ತಿರೋದು ಗೊತ್ತೇ ಇಲ್ಲ. ಆಕೆ VISA ಪಾಸ್​ಪೋರ್ಟ್​​ ಕೂಡ ಪಡೆದುಕೊಂಡಿದ್ದಾಳಂತೆ. ನಾನು ಯಾವತ್ತೂ ಆಕೆಯ ಮೊಬೈಲ್ ಮುಟ್ಟಿಲ್ಲ. ಏನು ಮೆಸೇಜ್ ಮಾಡುತ್ತಿದ್ದಳು, ಯಾರು ಜೊತೆ ಮಾತನಾಡುತ್ತಿದ್ದಳು ಅಂತ ಗೊತ್ತಿಲ್ಲ ಎಂದಿದ್ದಾನೆ.

ಇನ್ನು, ಆಕೆ ಪಾಕಿಸ್ತಾನದಲ್ಲಿ ಇರುವುದಿಲ್ಲವಂತೆ. ಎರಡ್ಮೂರು ದಿನಗಳಲ್ಲಿ ವಾಪಸ್ ಬರುತ್ತೇನೆ ಎಂದಿದ್ದಾಳೆ. ನಾನು ಪೊಲೀಸರಿಗೆ ದೂರು ನೀಡಿಲ್ಲ. ಇದೇ ಮೊದಲ ಬಾರಿಗೆ ಆಕೆ ಮನೆಯಿಂದ ಆಚೆ ಹೋಗುವಾಗ ನನ್ನ ಗಮನಕ್ಕೆ ತಂದಿಲ್ಲ. ಇದು ನನಗೆ ಮಾಡಿದ ಮೋಸ. ಒಂದು ವೇಳೆ ಆಕೆ ವಾಪಸ್ ಬಂದರೆ ಅವಳ ಜೊತೆ ನನ್ನ ಮಕ್ಕಳು ಇರಲು ನಿರ್ಧರಿಸಲಿದ್ದಾರೆ.

ನಾನು ಆಕೆಯ ಪೋಷಕರಿಗೆ ಕರೆ ಮಾಡುತ್ತೇನೆ. ನಾವೆಲ್ಲರೂ ಕೂತು ಮುಂದೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಅಂತಾ ಚರ್ಚೆ ಮಾಡುತ್ತೇವೆ. ಆಕೆ ವಾಪಸ್ ಬರಲು ಸರ್ಕಾರ ಅನುಮತಿ ನೀಡಬೇಕು. ಯಾಕಂದ್ರೆ ಆಕೆಯ ಬಳಿ ಕಾನೂನು ಬದ್ಧ ಎಲ್ಲಾ ದಾಖಲೆಗಳಿವೆ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೇಸ್​​ಬುಕ್ ಪ್ರಿಯತಮನಿಗಾಗಿ ಪಾಕ್​ಗೆ ಹೋದ 2 ಮಕ್ಕಳ ತಾಯಿ.. ಭಾರತದಲ್ಲಿರುವ ಗಂಡನ ನೋವು ಏನು ಗೊತ್ತಾ..?

https://newsfirstlive.com/wp-content/uploads/2023/07/ANJU.jpg

Load More