newsfirstkannada.com

ಆಂಧ್ರದ ಲಾರಿಯಲ್ಲಿ ಸಾಗಾಟ; ‘ಅನ್ನಭಾಗ್ಯ’ ಯೋಜನೆಯ 520 ಮೂಟೆಗಳ 26 ಟನ್ ಅಕ್ಕಿ ಸೀಜ್​..!

Share :

19-08-2023

  ‘ಅನ್ನಭಾಗ್ಯ’ ಅಕ್ಕಿಗಾಗಿ ಸರ್ಕಾರ ಹೆಣಗಾಟ

  ಎಗ್ಗಿಲ್ಲದೇ ಅನ್ನಭಾಗ್ಯ ಕಾಳದಂಧೆ ನಡೆಯುತ್ತಿದೆ

  ಲಾರಿ ಅಡ್ಡಗಟ್ಟಿ ಪೊಲೀಸ್ರಿಗೆ ಮಾಹಿತಿ ಕೊಟ್ಟ ಸ್ಥಳೀಯರು

ಬೆಂಗಳೂರು: ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿತರಿಸಲು ಸರ್ಕಾರ ಹೆಣಗಾಡುತ್ತಿದೆ. ಇದರ ಮಧ್ಯೆ ಎಗ್ಗಿಲ್ಲದೇ ಅನ್ನಭಾಗ್ಯ ಕಾಳದಂಧೆ ನಡೆಯುತ್ತಿದೆ.

ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುವ ಲಾರಿಯನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದ್ರೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಎರಡು ದಿನಗಳಿಂದ ಲಾರಿ ಇದ್ರೂ ಪರಿಶೀಲನೆಯ ನೆಪದಲ್ಲಿ ಕೇಸ್ ಮಾಡಲು ಹಿಂದೇಟು ಹಾಕಿದ್ದಾರೆ. ಇನ್ನು ಲಾರಿಯಲ್ಲಿ ಸುಮಾರು 520 ಮೂಟೆಗಳ ಸುಮಾರು 26 ಟನ್ ತೂಕದ ಅಕ್ಕಿಯನ್ನ ಆಂಧ್ರ ಆಂಧ್ರ ಪ್ರದೇಶ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದರು.

ಈ ವೇಳೆ ಮುಂಡರಗಿ ಗದಗ ರಸ್ತೆ ಬರದೂರು ಗ್ರಾಮದ ಬಳಿ ಲಾರಿ ತಡೆದು ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಆಹಾರ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿನ ಅಕ್ಕಿ ಮೂಟೆಗಳನ್ನ ವಶಪಡಿಸಿಕೊಂಡಿದ್ದಾರೆ. ಆದ್ರೆ ಕೇಸ್ ದಾಖಲಿಸಲು ಮೀನಾಮೇಷ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದ ಲಾರಿಯಲ್ಲಿ ಸಾಗಾಟ; ‘ಅನ್ನಭಾಗ್ಯ’ ಯೋಜನೆಯ 520 ಮೂಟೆಗಳ 26 ಟನ್ ಅಕ್ಕಿ ಸೀಜ್​..!

https://newsfirstlive.com/wp-content/uploads/2023/08/ANNABHAGYA.jpg

Load More